129 ಮಕ್ಕಳ ಜನನಕ್ಕೆ ಕಾರಣವಾದ ಜಗತ್ತಿನ ಆರೋಗ್ಯವಂತ ವೀರ್ಯ ದಾನಿ ಕ್ಲೈವ್ ಜೋನ್ಸ್

| Updated By: Pavitra Bhat Jigalemane

Updated on: Jan 27, 2022 | 11:20 AM

ವೀರ್ಯವನ್ನು ದಾನ ಮಾಡುವ ಯುಕೆ ಮೂಲದ ಕ್ಲೈವ್ ಜೋನ್ಸ್​​ ಅವರು ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. 66 ವರ್ಷದ ಕ್ಲೈವ್​ ಜಾನ್ಸ್​ ಇದುವರೆಗೆ 129 ಮಕ್ಕಳ ಜನನಕ್ಕೆ ವೀರ್ಯವನ್ನು ದಾನ ಮಾಡಿದ್ದಾರೆ. 

129 ಮಕ್ಕಳ ಜನನಕ್ಕೆ ಕಾರಣವಾದ ಜಗತ್ತಿನ ಆರೋಗ್ಯವಂತ ವೀರ್ಯ ದಾನಿ ಕ್ಲೈವ್ ಜೋನ್ಸ್
ಕ್ಲೈವ್​ ಜೋನ್ಸ್​​
Follow us on

ಜಗತ್ತಿನಲ್ಲಿ ಅನೇಕ ತಂದೆ ತಾಯಿಗಳು ಮಕ್ಕಳಿಲ್ಲದೆ ನೋವು ಅನುಭವಿಸುತ್ತಿದ್ದಾರೆ. ಅಂತವರಿಗೆ ವೀರ್ಯ(Sperm) ವನ್ನು ದಾನ ಮಾಡುವ ಯುಕೆ ಮೂಲದಕ್ಲೈವ್ ಜೋನ್ಸ್ (Clive Jones)​​ ಅವರು ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. 66 ವರ್ಷದಕ್ಲೈವ್ ಜೋನ್ಸ್​ ಇದುವರೆಗೆ 129 ಮಕ್ಕಳ ಜನನಕ್ಕೆ ವೀರ್ಯವನ್ನು ದಾನ ಮಾಡಿದ್ದಾರೆ.  ಫೇಸ್ಬುಕ್​ ಮೂಲಕ ಸಂಪರ್ಕ ಸಾಧಿಸಿ, ತಮ್ಮದೇ ಆದ ವ್ಯಾನ್​ ಒಂದನ್ನು ಇಟ್ಟುಕೊಂಡ ಅವರು ಕಳೆದ 10 ವರ್ಷಗಳಿಂದ ವಿವಿಧ ಪ್ರದೇಶಗಳಿಗೆ ತೆರಳಿ ವೀರ್ಯವನ್ನು ದಾನ ಮಾಡಿದ್ದಾರೆ. ಕ್ಲೈವ್ ಜೋನ್ಸ್​​ ಅವರ ವೀರ್ಯವನ್ನು ಜಗತ್ತಿನ ಸಮೃದ್ಧ ವೀರ್ಯ ದಾನಿ( world’s most prolific sperm donor)  ಎಂದೇ ಹೇಳಿಕೊಂಡಿದ್ದಾರೆ. ಇದೀಗ ಆರೋಗ್ಯ ತಜ್ಞರು  ಇವರ ವೀರ್ಯ ದಾನದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕ್ಲೈವ್​ ಅವರು ವ್ಯಾನ್​ನಲ್ಲಿ  ವೀರ್ಯವನ್ನು ಸಂಗ್ರಹಿಸಿ ನೀಡುವುದು ಅಷ್ಟು ಸುರಕ್ಷಿತವಲ್ಲ ಎಂದು ಹೇಳಿಕೆ ನೀಡಿದ್ದಾರೆ. ​ 

ಈ ಕುರಿತು ನ್ಯೂಯಾರ್ಕ್​ ಫೋಸ್ಟ್​​ ವರದಿ ಮಾಡಿದ್ದು ಕ್ಲೈವ್ ಜೋನ್ಸ್ ಇದುವರೆಗೆ ದಾನ ಮಾಡಿದ ವೀರ್ಯಕ್ಕೆ ಯಾವುದೇ ಹಣವನ್ನು ಪಡೆದುಕೊಂಡಿಲ್ಲ. ಈ ರೀತಿಯ ಕೆಲಸಗಳಿಗೆ ಹಣ ಪಡೆಯುವುದು ಅಪರಾಧ ಎಂದು ಭಾವಿಸುವ ಅವರು  ಕೆಲವೊಮ್ಮೆ ದೂರದ ಸ್ಥಳಗಳಿಗೆ ತೆರಳಿ ವೀರ್ಯವನ್ನು ದಾನಮಾಡುವ ಸಂದರ್ಭ ಒದಗಿ ಬಂದಾಗ ಪೆಟ್ರೋಲ್​ಅನ್ನು ಪಡೆದಿದ್ದಾರಂತೆ. ಈ ಕುರಿತು ಕ್ಲೈವ್ ಜೋನ್ಸ್​​ ಮಾತನಾಡಿ, ಈ ವರೆಗೆ ಒಟ್ಟು 138 ಶಿಶುಗಳ ಜನನಕ್ಕೆ ವೀರ್ಯವನ್ನು ನೀಡಿದ್ದೇನೆ. ಅದರಲ್ಲಿ 128 ಶಿಶುಗಳ ಜನನವಾಗಿದೆ. ಇನ್ನೂ 9 ಮಹಿಳೆಯರು ಗರ್ಭಿಣಿಯಾಗಿದ್ದಾರೆ. ವೀರ್ಯ ದಾನವನ್ನು ಮುಂದುವರೆಸುವ ಆಸೆಯಿದ್ದು  150 ಮಕ್ಕಳ ಜನನಕ್ಕೆ ವೀರ್ಯವನ್ನು ದಾನ ಮಾಡಬೇಕು ಎಂದಿದ್ದಾರೆ.

ಮುಂದುವರೆದು ಮಾತನಾಡಿ, ಮಕ್ಕಳನ್ನು ಪಡೆದ ದಂಪತಿ ಫೇಸ್ಬುಕ್​ನಲ್ಲಿ ಮಗುವಿನ ಫೋಟೊವನ್ನು ಹಂಚಿಕೊಳ್ಳುತ್ತಾರೆ. ಇದನ್ನು ನೋಡಿ ನಾನು ಕೂಡ ಸಂತಸಗೊಂಡಿದ್ದೇನೆ. 9 ವರ್ಷಗಳ ಹಿಂದೆ ಮೇ ತಿಂಗಳಿನಲ್ಲಿ ಈ ಕೆಲಸ ಆರಂಭಿಸಿದ್ದೇನೆ. ಇಂದು ಹಲವಾರು ಮಂದಿ ನನ್ನನ್ನು ಸಂಪರ್ಕಿಸುತ್ತಾರೆ ಎಂದಿದ್ದಾರೆ.

ಕ್ಲೈವ್ ಜೋನ್ಸ್​​ ಅವರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಮಕ್ಕಳಿಲ್ಲದೆ ಎಷ್ಟೋ ಮಂದಿ ಇವರ ಮೂಲಕ ಮಗುವನ್ನು ಪಡೆದು ಸಂತಸವಾಗಿದ್ದಾರೆ. ಆದರೆ ತಜ್ಞ ವೈದ್ಯರು ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಸರಿಯಾದ ಉಪಕರಣಗಳ ವ್ಯವಸ್ಥೆ ಇಲ್ಲದೆ ವ್ಯಾನ್​ಗಳಲ್ಲಿ ವೀರ್ಯವನ್ನು ಸಂಗ್ರಹಿಸಿ ಮಗು ಪಡೆಯವ ದಂಪತಿಗೆ ನೀಡುವುದು ಅಪಾಯಕಾರಿಯಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ;

Viral; ಕೊಲಂಬಿಯಾದಲ್ಲೊಂದು ಉಲ್ಟಾ ಮನೆ ನಿರ್ಮಾಣ; ತಲೆಕೆಳಗಾಗಿರುವ ಮನೆ ನೋಡಲು ಪ್ರವಾಸಿಗರ ದಂಡು

Published On - 11:18 am, Thu, 27 January 22