ಪ್ರಾಣಿಗಳ ತುಂಟಾಟ, ಮೋಜು, ಮಸ್ತಿಯ ದೃಶ್ಯದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಮನಸ್ಸಿಗೆ ತುಂಬಾ ಇಷ್ಟವಾಗಿಬಿಡುತ್ತವೆ. ಕೆಲವು ಅಚ್ಚರಿ ಮೂಡಿಸುವ ವಿಡಿಯೊಗಳನ್ನು ನೋಡಿದಾಕ್ಷಣ ಆಶ್ಚರ್ಯವಾಗುವುದಂತೂ ಸತ್ಯ. ಕೆಲವು ಬಾರಿ ಜನರನ್ನು ಎಚ್ಚರಿಸುವ ಸಂದೇಶ ಸಾರುವಂತಹ ವಿಡಿಯೊಗಳು ವೈರಲ್ (Viral Video) ಆಗುತ್ತವೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಕೋತಿಯು (Monkey) ಓಡಿ ಹೋಗದಂತೆ ವ್ಯಕ್ತಿಯೋರ್ವ ಹಿಡಿದುಕೊಂಡಿದ್ದಾನೆ. ತಪ್ಪಿಸಿಕೊಳ್ಳಲು ಕೋತಿ ಏನು ಮಾಡಿದೆ ಎಂಬದನ್ನು ವಿಡಿಯೊದಲ್ಲೇ ನೋಡಿ.
ಕೆಲವು ತಮಾಷೆಯ ದೃಶ್ಯಗಳು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಆದರೆ ಪ್ರಾಣಿಗಳ ಜೊತೆ ತಮಾಷೆ ಮಾಡಲು ಹೋದರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಉದಾಹಣೆ ಎಂಬಂತೆ ಇಲ್ಲೊಂದು ವಿಡಿಯೊ ವೈರಲ್ ಆಗಿದೆ. ಕೋತಿಯು ಓಡಿ ಹೋಗದಂತೆ ಹಿಡಿದಿದ್ದವನ ಕೈಕಚ್ಚಿ ಕೋತಿ ಹೊರಟಿದೆ. ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಕೋತಿಯು ಓಡಿ ಹೋಗಲು ಕಾಯುತ್ತಿದೆ. ಆದರೆ ಓಡಿ ಹೋಗದಂತೆ ವ್ಯಕ್ತಿ ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಹಾಗಾಗಿ ಕೋತಿಯು ಒಂದೆರಡು ಬಾರಿ ವ್ಯಕ್ತಿಯನ್ನೇ ದಿಟ್ಟಿಸಿ ನೋಡುತ್ತದೆ. ಆದರೂ ಸಹ ವ್ಯಕ್ತಿ ಬಿಟ್ಟಿಲ್ಲ. ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯ ಕೈಕಚ್ಚಿದೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಈ ವಿಡಿಯೊ ಫುಲ್ ವೈರಲ್ ಆಗಿದೆ. ನೆಟ್ಟಿಗರು ತಮಾಷೆಯಾಗಿ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಸಾವಿರಾರು ವೀಕ್ಷಣೆಗಳನ್ನು ಮತ್ತು ಲೈಕ್ಸ್ಗಳನ್ನು ಗಳಿಸಿಕೊಂಡಿದೆ.
ಇದನ್ನೂ ಓದಿ: