Viral: ಏನ್‌ ಧೈರ್ಯ ನೋಡಿ… ಹೆಗಲ ಮೇಲೆ ದೈತ್ಯ ಅನಕೊಂಡವನ್ನು ಹೊತ್ತ ಎಂಟೆದೆ ಭಂಟ

ಪುಟ್ಟ ಹಾವುಗಳನ್ನು ನೋಡಿದ್ರೂ ಸಾಕು ಹೆಚ್ಚಿನವರು ಎದ್ವೋ ಬಿದ್ವೋ ಅಂತ ಓಡಿ ಹೋಗ್ತಾರೆ. ಅದ್ರಲ್ಲೂ ದೈತ್ಯ ಹಾವುಗಳು ಕಣ್ಣಿಗೆ ಬಿದ್ದರಂತೂ ಎದೆ ಬಡಿತವೇ ನಿಂತಂತಾಗುತ್ತದೆ. ಆದ್ರೆ ಇಲ್ಲೊಬ್ಬ ಎಂಟೆದೆ ಭಂಟ ಯಾವುದೇ ಭಯವಿಲ್ಲದೆ ಸಲೀಸಾಗಿ 20 ಅಡಿ ಉದ್ದದ ಹಸಿರು ಅನಕೊಂಡವನ್ನು ಹೆಗಲ ಮೇಲೆ ಹೊತ್ತು ಪೋಸ್‌ ಕೊಟ್ಟಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಈತನ ಈ ಭಂಡ ಧೈರ್ಯವನ್ನು ಕಂಡು ನೋಡುಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

Viral: ಏನ್‌ ಧೈರ್ಯ ನೋಡಿ… ಹೆಗಲ ಮೇಲೆ ದೈತ್ಯ ಅನಕೊಂಡವನ್ನು ಹೊತ್ತ ಎಂಟೆದೆ ಭಂಟ
ವೈರಲ್​​​ ವಿಡಿಯೋ
Edited By:

Updated on: Nov 15, 2024 | 11:12 AM

ದೈತ್ಯಾಕಾರದ ಹೆಬ್ಬಾವುಗಳು, ಅನಕೊಂಡಗಳು ಇತರೆ ಪ್ರಾಣಿಗಳು ಮಾತ್ರವಲ್ಲದೆ ಮನುಷ್ಯನನ್ನು ಕೂಡಾ ಜೀವಂತವಾಗಿ ನುಂಗಿ ಬಿಡುತ್ತವೆ. ಅದರಲ್ಲೂ ಹೆಚ್ಚಾಗಿ ದಕ್ಷಿಣ ಅಮೆರಿಕದಲ್ಲಿ ಕಂಡು ಬರುವ ಅನಕೊಂಡ ಹಾವುಗಳು ತುಂಬಾನೇ ಅಪಾಯಕಾರಿ. ಹೌದು ಈ ಹಾವುಗಳು ಕ್ಷಣ ಮಾತ್ರದಲ್ಲಿ ಎಂತಹದ್ದೇ ದೊಡ್ಡ ಜೀವಿಯನ್ನು ಸಹ ನುಂಗಬಲ್ಲವು. ಇದೇ ಕಾರಣಕ್ಕೆ ಈ ದೈತ್ಯ ಹಾವುಗಳನ್ನು ಕಂಡರೆ ಬಹುತೇಕ ಎಲ್ಲರೂ ಭಯ ಬೀಳುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ನನಗೆ ಯಾವುದೇ ಭಯವಿಲ್ಲ ಎನ್ನುತ್ತಾ ತನ್ನ ಭಂಡ ಧೈರ್ಯದಿಂದ 20 ಅಡಿ ಉದ್ದದ ದೈತ್ಯ ಹಸಿರು ಅನಕೊಂಡವನ್ನು ಹೆಗಲ ಮೇಲೆ ಹೊತ್ತು ಪೋಸ್‌ ಕೊಟ್ಟಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಈತನ ಈ ಭಂಡ ಧೈರ್ಯವನ್ನು ಕಂಡು ನೋಡುಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಪ್ರಾಣಿ ಪ್ರಿಯ ಮೈಕ್‌ ಹೋಲ್‌ಸ್ಟನ್‌ ಅವರು ಯಾವುದೇ ಭಯವಿಲ್ಲದೆ 20 ಅಡಿ ಉದ್ದವಿರುವ ಜಗತ್ತಿನ ದೈತ್ಯ ಹಸಿರು ಅನಕೊಂಡವನ್ನು ತನ್ನ ಹೆಗಲ ಮೇಲೆ ಹೊತ್ತು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ. ಈ ಕುರಿತ ವಿಡಿಯೋವನ್ನು ಹೋಲ್‌ಸ್ಟನ್‌ therealtarzann ಹೆಸರಿನ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಹೋಲ್‌ಸ್ಟನ್‌ ಜಗತ್ತಿನ ದೈತ್ಯ ಹಾಗೂ ಭರವಾದ 20 ಅಡಿ ಉದ್ದವಿರುವ ಹಸಿರು ಹೆಬ್ಬಾವನ್ನು ತನ್ನ ಹೆಗಲ ಮೇಲೆ ಹೊತ್ತಿರುವ ಶಾಕಿಂಗ್‌ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ : ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಭಾರತ್ ಮಾತಾ ಕೀ ಜೈ ಹೇಳಿದ್ದಕ್ಕೆ ಬಿಜೆಪಿ ಶಾಸಕರನ್ನು ಹೊರಹಾಕಿದ್ದು ನಿಜವೇ?

ನವೆಂಬರ್‌ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.4 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಈ ಹಾವು ತುಂಬಾನೇ ಭಯವಿರುವಂತೆ ಕಾಣುತ್ತಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆ ಹಾವು ನಿಮ್ಮ ಮೇಲೆ ದಾಳಿ ನಡೆಸದೆ ಕೂಲ್‌ ಆಗಿ ಇರುವುದನ್ನು ಕಂಡು ನನಗೆ ಆಶ್ಚರ್ಯವಾಯಿತುʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ