ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬ ಕೆಫೆಯಲ್ಲಿ ತನ್ನ ವ್ಯಾಲೆಟ್ (Wallet) ಕಳೆದುಕೊಂಡಿದ್ದು, ಕೆಫೆಯವರ (Cafe) ಬಳಿ ತನ್ನ ನಂಬರ್ ಇಲ್ಲದಿದ್ದರೂ, ಕಾಫೆಯಿಂದ ಕರೆ ಬಂದದ್ದನ್ನು ಕಂಡು ವ್ಯಕ್ತಿ ಆಶ್ಚರ್ಯಚಕಿತರಾಗಿದ್ದಾರೆ. ವ್ಯಾಲೆಟ್ ವಾಪಾಸ್ ಸಿಗುವ ಬರವಸೆಯಲ್ಲಿರದ ವ್ಯಕ್ತಿಗೆ ಈ ಘಟನೆ ಬಹಳ ಅಚ್ಚರಿ ಮೂಡಿಸಿದೆ. ಕೆಫೆ ಇವರ ನಂಬರ್ ಅನ್ನು ಹೇಗೆ ಹುಡುಕಿರಬಹುದು ಎಂದು ನೀವು ಯೋಚಿಸುತ್ತಿದ್ದರೆ, ಅದಕ್ಕೆ ಉತ್ತರ ಗೂಗಲ್. ಹೌದು, ಗೂಗಲ್ ಮೂಲಕ ಇವರ ನಂಬರ್ ಅನ್ನು ಹುಡುಕಿ ವಾಲೆಟ್ ಅನ್ನು ಹಿಂದಿರುಗಿಸಿದ್ದಾರೆ.
ರೋಹಿತ್ ಘುಮಾರೆ ಎಂಬ ವ್ಯಕ್ತಿ ಟ್ವಿಟ್ಟರ್‌ನಲ್ಲಿ ಬೆಂಗಳೂರನ್ನು ಏಕೆ ರಾಷ್ಟ್ರದ ತಂತ್ರಜ್ಞಾನದ ರಾಜಧಾನಿ ಎಂಬುಡಕ್ಕೆ ಈ ಘಟನೆಯೇ ಸಾಕ್ಷಿ ಎಂದು ತಮ್ಮ ಅನುಭವವವನ್ನು ಟ್ವಿಟ್ಟರ್ ಅಲ್ಲಿ ಹಂಚಿಕೊಂಡಿದ್ದಾರೆ. ಘಟನೆಯ ಕುರಿತು ಮಾತನಾಡಿದ ರೋಹಿತ್, ಕೆಫೆಯಲ್ಲಿ ಪ್ರಮುಖ ಐಡಿಗಳು ಮತ್ತು ಬ್ಯಾಂಕ್ ಕಾರ್ಡ್‌ಗಳನ್ನು ಒಳಗೊಂಡಿರುವ ತಮ್ಮ ವ್ಯಾಲೆಟ್ ಅನ್ನು ಕೆಫೆ ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಕರೆಯಲ್ಲಿ ಕೆಫೆ ಸಿಬ್ಬಂದಿ ತಿಳಿಸಿದರಂತೆ.
Bangalore is something else. I lost my wallet filled with my credit/debit cards as well as important documents. I panicked?, Surprisingly I received one call from cafe I went yesterday. How they found my number? They googled my name ???
I guess this is @peakbengaluru moment
— Rohit Ghumare | That #DevOps Guy✍️ (@ghumare64) April 26, 2023
“ಬೆಂಗಳೂರಿನಂತಹ ನಗರದಲ್ಲಿ ನಾನು ನನ್ನ ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳು ಮತ್ತು ಪ್ರಮುಖ ದಾಖಲೆಗಳಿದ್ದ ನನ್ನ ವ್ಯಾಲೆಟ್ ಅನ್ನು ನಾನು ಕಳೆದುಕೊಂಡಿದಕ್ಕೆ, ನಾನು ಗಾಬರಿಯಾಗಿದ್ದೆ. ಅದು ವಾಪಾಸ್ ಸಿಗುವುದಿಲ್ಲ ಎಂದು ನಂಬಿದ್ದೆ ಆದರೆ ಆಶ್ಚರ್ಯಕರವಾಗಿ, ನಾನು ನಿನ್ನೆ ಹೋದ ಕೆಫೆಯಿಂದ ನನಗೆ ಒಂದು ಕರೆ ಬಂತು.” ಇದಲ್ಲದೆ, ಕೆಫೆಯಲ್ಲಿ ಕೆಲಸ ಮಾಡುವ ಜನರು ತನ್ನ ಸಂಖ್ಯೆಯನ್ನು ಹೇಗೆ ಕಂಡುಕೊಂಡರು ಎಂಬುದನ್ನು ಘುಮಾರೆ ಬಹಿರಂಗಪಡಿಸಿದರು.
ಈ ಘಟನೆಯು ಟ್ವಿಟ್ಟರ್ನಲ್ಲಿ ಅನೇಕ ಜನರ ಗಮನ ಸೆಳೆಯಿತು. ವಾಲೆಟ್ ಅನ್ನು ಅದರ ಮಾಲೀಕರಿಗೆ ಜವಾಬ್ದಾರಿಯುತವಾಗಿ ಹಿಂತಿರುಗಿಸಿದ್ದಾಕ್ಕೆ ಅನೇಕರು ಕೆಫೆಯನ್ನು ಶ್ಲಾಘಿಸಿದರು. ಟ್ವಿಟ್ಟರ್ ಬಳಕೆದಾರರೊಬ್ಬರು, “ವಾವ್, ಒತ್ತಡದ ಪರಿಸ್ಥಿತಿಯ ನಡುವೆ ಎಂತಹ ಹೃದಯಸ್ಪರ್ಶಿ ಕಥೆ” ಎಂದು ಹೇಳಿದರು. ಮತ್ತೊಬ್ಬರು “ವಾವ್ವ್” ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೆಯ ವ್ಯಕ್ತಿ, ಕೆಫೆಯ ಹೆಸರನ್ನು ತಿಳಿದುಕೊಳ್ಳಲು ಕುತೂಹಲ ವ್ಯಕ್ತಪಡಿಸಿದ್ದಾರೆ ಮತ್ತು ಇಂತಹ ಘಟನೆ ಯಾವಾಗಲೂ ಸಂಭವಿಸುವುದಿಲ್ಲ.” ಎಂದು ತಿಳಿಸಿದರು.
ಇದನ್ನೂ ಓದಿ: 550ಕ್ಕೂ ಹೆಚ್ಚು ಜನರಿಗೆ ವೀರ್ಯದಾನ ಮಾಡಿದ ವ್ಯಕ್ತಿಗೆ ಡಚ್ ಕೋರ್ಟ್ ನಿರ್ಬಂಧ
ಕೆಫೆಯ ಉದ್ಯೋಗಿಗಳ ಉತ್ತಮ ನಡತೆಯನ್ನು ಹಲವರು ಶ್ಲಾಘಿಸಿದರೆ, ಇತರರು ಮತ್ತೊಂದು “ಪೀಕ್ ಬೆಂಗಳೂರು” ಕ್ಷಣದ ಬಗ್ಗೆ ಕೇಳಲು ಉತ್ಸುಕರಾಗಿದ್ದರು. “ಅವರು ನಿಮ್ಮನ್ನು ಮೊದಲು ಲಿಂಕ್ಡ್‌ಇನ್‌ನಲ್ಲಿ ಹುಡುಕಲಿಲ್ಲ ಎಂದು ನಾನು ನಿರಾಶೆಗೊಂಡಿದ್ದೇನೆ” ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು, “ಬೆಂಗಳೂರಿನ ಅತ್ಯುತ್ತಮ ವಿಷಯ!!” ಎಂದು ನಗರವನ್ನು ಶ್ಲಾಘಿಸಿದ್ದಾರೆ.
Published On - 1:58 pm, Sun, 30 April 23