Viral News: ಸ್ಕರ್ಟ್ ಧರಿಸಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಯುವಕರು!
ಹುಡುಗಿಯರು ಸ್ಕರ್ಟ್ ಧರಿಸಿದ್ದರೆ ಸುದ್ದಿಯಾಗಲ್ಲ. ಆದರೆ ಹುಡುಗರು ಸ್ಕರ್ಟ್ ಹಾಕಿಕೊಂಡ್ರೆ, ಹೌದು ದೆಹಲಿ ಮೆಟ್ರೋದಲ್ಲಿ ಸ್ಕರ್ಟ್ ಧರಿಸಿ ಇಬ್ಬರು ಪುರುಷರು ಪ್ರಯಾಣಿಸುತ್ತಿರುವ ವೀಡಿಯೋ ಭಾರಿ ವೈರೆಲ್ ಆಗಿದ್ದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಇದನ್ನು ಹಂಚಿಕೊಂಡಿದ್ದಾರೆ.
ಉಡುಪುಗಳು ಲಿಂಗಕ್ಕೆ ಬದ್ಧವಾಗಿರಬೇಕಾಗಿಲ್ಲ ಎಂಬ ಕಲ್ಪನೆ ಇಂದಿನದಲ್ಲ. ಆದರೆ ಸಮಾಜದಲ್ಲಿ ಅವರವರಿಗೆ ಸೀಮಿತವಾದ ಉಡುಗೆಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹುಡುಗಿಯರು ಹುಡುಗರ ಬಟ್ಟೆ ಹಾಕಿಕೊಳ್ಳುವುದಾದರೇ, ಹುಡುಗರು ಹುಡುಗಿಯರ ಬಟ್ಟೆ ಯಾಕೆ ತೊಟ್ಟುಕೊಳ್ಳಬಾರದು ಎಂದು ದೂರುತ್ತಿದ್ದವರಿಗೆ ಈ ಘಟನೆ ಪೂರಕ ಎಂಬಂತಿದೆ. ಇನ್ಸ್ಟಾಗ್ರಾಮ್ ಬಳಕೆದಾರ ಸಮೀರ್ ಖಾನ್ ಅವರು ಒಂದು ವೀಡಿಯೋ ಶೇರ್ ಮಾಡಿದ್ದು ಸ್ಕರ್ಟ್ ಧರಿಸಿದ ಇಬ್ಬರು ಪುರುಷರು ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ಈ ವೀಡಿಯೋ ಭಾರಿ ವೈರೆಲ್ ಆಗಿದೆ.
ಈ ವೀಡಿಯೊದಲ್ಲಿ ಇಬ್ಬರು ಪುರುಷರು ಸ್ಕರ್ಟ್ ಧರಿಸಿ ಮೆಟ್ರೋ ಹತ್ತುವುದನ್ನು ತೋರಿಸಲಾಗುತ್ತದೆ. ಅವರಲ್ಲಿ ಒಬ್ಬರು ಡೆನಿಮ್ ನೀಲಿ ಸ್ಕರ್ಟ್ ಮತ್ತು ನೀಲಿ ಟೀ ಶರ್ಟ್ ಧರಿಸಿದ್ದು, ಇನ್ನೊಬ್ಬ ವ್ಯಕ್ತಿಯು ಪೀಚ್ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಸ್ಕರ್ಟ್ ಧರಿಸಿರುವುದು ಕಂಡುಬಂದಿದೆ. ಮಣಿ ಹಾರ ಮತ್ತು ಸನ್ ಗ್ಲಾಸ್ ಹಾಕಿಕೊಂಡು ಮೆಟ್ರೋದ ಜನರು ಕಣ್ಣು ಮಿಟುಕಿಸದೇ ತಮ್ಮನ್ನೇ ನೋಡುವಂತೆ ಮಾಡಿದ್ದಾರೆ. ಇದು ವೀಡಿಯೋ ನೋಡುವ ಎಲ್ಲರಿಗೂ ತಿಳಿಯುತ್ತದೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಕೆಫೆಯಲ್ಲಿ ವಾಲ್ಲೆಟ್ ಕಳೆದುಕೊಂಡ ವ್ಯಕ್ತಿ; ಹಿಂದಿರುಗಿಸಲು ಗೂಗಲ್ ಬಳಸಿದ ಕೆಫೆ ಸಿಬ್ಬಂದಿ!
ಈ ವಿಡಿಯೋವನ್ನು ಪೋಸ್ಟ್ ಮಾಡಿದಾಗಿನಿಂದ, ಏಳು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಲ್ಲದೆ ಈ ವೀಡಿಯೋ 69,000 ಲೈಕ್ ಪಡೆದಿದೆ. ವೀಡಿಯೋಗೆ ಪ್ರತಿಕ್ರಿಯಿಸುವಾಗ ಜನರು ವಿವಿಧ ಕಾಮೆಂಟ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರರು ಹೇಗೆ ಪ್ರತಿಕ್ರಿಯಿಸಿದರು ಎಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ: ಅದರಲ್ಲೊಬ್ಬರು ಈ ಉಡುಪನ್ನು ಆರಾಮದಾಯಕ ಮತ್ತು ಸ್ಟೈಲಿಶ್ ಆಗಿದೆ. ಎಲ್ಲರೂ ಇದನ್ನು ಏಕೆ ಧರಿಸಬಾರದು ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು “ಹುಡುಗಿಯರು ನಮ್ಮ ಪ್ಯಾಂಟ್ ಧರಿಸುವಾಗ ಹುಡುಗರು ಸ್ಕರ್ಟ್ ಧರಿಸಲು ಏಕೆ ಸಾಧ್ಯವಿಲ್ಲ” ಎಂದು ಕೇಳಿದ್ದಾರೆ. ಇನ್ನೊಬ್ಬರು “ಸ್ಟೀರಿಯೊಟೈಪ್ ಗಳನ್ನು ಕೊನೆಗೊಳಿಸುವುದು” ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: