AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ಶಾರುಖ್​​-ಗೌರಿ ಖಾನ್ ಹನಿಮೂನ್​ ಫೋಟೋ ವೈರಲ್​; ಅಂದಿನ ಕಹಾನಿ ವಿವರಿಸಿದ ಸ್ನೇಹಿತ

Shah Rukh Khan Family: ಶಾರುಖ್​ ಖಾನ್​ ಅವರು 1991ರಲ್ಲಿ ಮದುವೆ ಮುಗಿಸಿಕೊಂಡು ಪತ್ನಿ ಗೌರಿ ಖಾನ್​ ಜೊತೆ ಸಿನಿಮಾದ ಚಿತ್ರೀಕರಣಕ್ಕೆ ತೆರಳಿದ್ದರು. ಆಗ ತೆಗೆದ ಫೋಟೋ ಈಗ ವೈರಲ್​ ಆಗಿದೆ.

Shah Rukh Khan: ಶಾರುಖ್​​-ಗೌರಿ ಖಾನ್ ಹನಿಮೂನ್​ ಫೋಟೋ ವೈರಲ್​; ಅಂದಿನ ಕಹಾನಿ ವಿವರಿಸಿದ ಸ್ನೇಹಿತ
ಶಾರುಖ್ ಖಾನ್, ಗೌರಿ ಖಾನ್
ಮದನ್​ ಕುಮಾರ್​
|

Updated on: Apr 29, 2023 | 7:00 AM

Share

ನಟ ಶಾರುಖ್​ ಖಾನ್​ (Shah Rukh Khan) ಅವರು ಅಪ್ಪಟ ಫ್ಯಾಮಿಲಿ ಮ್ಯಾನ್​. ಸಿನಿಮಾ ಕೆಲಸಗಳು ಇಲ್ಲದಿರುವಾಗ ಅವರು ಕುಟುಂಬದ ಜೊತೆ ಕಾಲ ಕಳೆಯಲು ಬಯಸುತ್ತಾರೆ. 1991ರಲ್ಲಿ ಗೌರಿ ಖಾನ್​ (Gauri Khan) ಜೊತೆ ಶಾರುಖ್​ ಖಾನ್​ ಮದುವೆ ನೆರವೇರಿತು. ಅಂದಿನಿಂದ ಇಂದಿನ ತನಕ ಇವರಿಬ್ಬರು ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳು. ಮದುವೆ ಆಗಿ 32 ವರ್ಷಗಳು ಕಳೆದ ಬಳಿಕ ಶಾರುಖ್​ ಮತ್ತು ಗೌರಿ ಖಾನ್​ ಅವರ ಒಂದು ಫೋಟೋ (Shah Rukh Khan Photo) ವೈರಲ್​ ಆಗಿದೆ. ಇದು ಅವರ ಹನಿಮೂನ್​ ವೇಳೆ ಕ್ಲಿಕ್ಕಿಸಿದ ಫೋಟೋ ಎಂಬುದು ವಿಶೇಷ. ಈ ಕ್ಯೂಟ್​ ಫೋಟೋ ಕಂಡು ಫ್ಯಾನ್ಸ್​ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಂದಹಾಗೆ, ಈ ಅಪರೂಪದ ಫೋಟೋವನ್ನು ಹಂಚಿಕೊಂಡಿದ್ದು ಶಾರುಖ್​ ಖಾನ್ ಅವರ ಸ್ನೇಹಿತ ವಿವೇಕ್ ವಸ್ವಾನಿ. ಗೌರಿ ಖಾನ್​ ಮತ್ತು ಶಾರುಖ್​ ಖಾನ್ ಅವರು ಮದುವೆಯ ನಂತರದ ದಿನಗಳು ಹೇಗಿತ್ತು ಎಂಬುದನ್ನು ವಿವೇಕ್​ ವಿವರಿಸಿದ್ದಾರೆ.

1991 ಎಂದರೆ ಅದು ಶಾರುಖ್​ ಖಾನ್​ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದ ಸಂದರ್ಭ. ಆಗ ‘ರಾಜು ಬನ್​ಗಯಾ ಜಂಟಲ್​ಮ್ಯಾನ್​’ ಸಿನಿಮಾದ ಶೂಟಿಂಗ್​ ನಡೆಯುತ್ತಿತ್ತು. ಮದುವೆ ಬಳಿಕ ಹನಿಮೂನ್​ಗೆ ತೆರಳಲು ಶಾರುಖ್​ ಖಾನ್​ ಅವರಿಗೆ ಸಮಯ ಇರಲಿಲ್ಲ. ಮದುವೆ ಮುಗಿಸಿಕೊಂಡು ಪತ್ನಿ ಸಮೇತರಾಗಿ ಅವರು ‘ರಾಜು ಬನ್​ಗಯಾ ಜಂಟಲ್​ಮ್ಯಾನ್​’ ಸಿನಿಮಾದ ಚಿತ್ರೀಕರಣಕ್ಕೆ ತೆರಳಿದ್ದರು. ಆಗ ತೆಗೆದ ಫೋಟೋ ಈಗ ವೈರಲ್​ ಆಗಿದೆ.

ಇದನ್ನೂ ಓದಿ
Image
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Image
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Image
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
Image
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

‘ದೆಹಲಿಗೆ ಹೋದೆವು. ಅಲ್ಲಿ ಅವರ ಮದುವೆ ಆಯಿತು. ಅಲ್ಲಿಂದ ನಾವು ಮಧುಮಗಳ ಜೊತೆ ನೇರವಾಗಿ ಡಾರ್ಜಲಿಂಗ್​ಗೆ ಬಂದೆವು. ರಾಜು ಬನ್​ಗಯಾ ಜಂಟಲ್​ಮ್ಯಾನ್​ ಚಿತ್ರದ ಮೊದಲ ಹಾಡಿನ ಶೂಟಿಂಗ್​ ನಡೆಯುತ್ತಿರುವಾಗಲೇ ಹನಿಮೂನ್​’ ಎಂದು ವಿವೇಕ್ ವಸ್ವಾನಿ ಅವರು ಈ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಇದು ವೈರಲ್​ ಆಗಿದೆ.

ಇದನ್ನೂ ಓದಿ: Gauri Khan: ಆಸ್ತಿ ವಿಚಾರದಲ್ಲಿ ಮೋಸ ಮಾಡಿದ ಆರೋಪ; ಶಾರುಖ್ ಪತ್ನಿ ಗೌರಿ ಖಾನ್​ ಮೇಲೆ ಎಫ್​ಐಆರ್​ ದಾಖಲು

ಶಾರುಖ್​ ಮೊದಲ ಮನೆ ಖರೀದಿಸಿದಾಗ:

ಶಾರುಖ್​ ಖಾನ್​ ಇಂದು ಬಹುಕೋಟಿ ರೂಪಾಯಿ ಒಡೆಯನಾಗಿದ್ದಾರೆ. ಹಲವಾರು ಕಡೆಗಳಲ್ಲಿ ಅವರು ಆಸ್ತಿ ಹೊಂದಿದ್ದಾರೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಸಿನಿಮಾಗಳಿಂದ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ಆರಂಭದ ದಿನಗಳಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಆರ್ಯನ್​ ಖಾನ್​ ಜನಿಸುವುದಕ್ಕೂ ಮುನ್ನ ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ದಂಪತಿ ಹೊಸ ಮನೆ ಖರೀದಿಸಿದ್ದರು. ಆಗ ಇಂಟೀರಿಯರ್​ ಡಿಸೈನ್​ ಮಾಡಿಸಲು ಅವರ ಬಳಿ ಹಣ ಇರಲಿಲ್ಲ. ಹಾಗಾಗಿ ಸ್ವತಃ ಗೌರಿ ಖಾನ್​ ಅವರೇ ಒಳಾಂಗಣ ವಿನ್ಯಾಸ ಮಾಡಿದ್ದರು. ನಂತರ ಅದನ್ನೇ ಅವರು ಉದ್ಯೋಗವಾಗಿ ಮಾಡಿಕೊಂಡರು. ಆ ಹಳೇ ದಿನಗಳನ್ನು ಶಾರುಖ್​ ಅವರು ಇತ್ತೀಚೆಗೆ ನೆನಪಿಸಿಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್