ಮತ್ತೆ ದಕ್ಷಿಣ ಭಾರತ ನಿರ್ಮಾಪಕನಿಗೆ ಅಪಮಾನ ಮಾಡಿದ ಬಾಲಿವುಡ್, ಫಿಲ್ಮ್​ಫೇರ್​ಗೆ ಆಹ್ವಾನವೇ ಇಲ್ಲ

The Kashmir Files: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಏಳು ವಿಭಾಗದಲ್ಲಿ ನಾಮಿನೇಟ್ ಆಗಿದ್ದರೂ ಸಹ ಸಿನಿಮಾದ ನಿರ್ಮಾಪಕ ತೇಜ್ ನಾರಾಯಣ್​ಗೆ ಆಹ್ವಾನ ನೀಡಲಾಗಿರಲಿಲ್ಲ. ದಕ್ಷಿಣ ಭಾರತದವ ಎಂಬ ಕಾರಣಕ್ಕೆ ಈ ಅಸಡ್ಡೆಯೇ? ನಿರ್ಮಾಪಕ ಪ್ರಶ್ನೆ.

ಮತ್ತೆ ದಕ್ಷಿಣ ಭಾರತ ನಿರ್ಮಾಪಕನಿಗೆ ಅಪಮಾನ ಮಾಡಿದ ಬಾಲಿವುಡ್, ಫಿಲ್ಮ್​ಫೇರ್​ಗೆ ಆಹ್ವಾನವೇ ಇಲ್ಲ
ದಿ ಕಾಶ್ಮೀರ್ ಫೈಲ್ಸ್ ನಿರ್ಮಾಪಕ
Follow us
ಮಂಜುನಾಥ ಸಿ.
|

Updated on: Apr 28, 2023 | 4:24 PM

ಭಾರತೀಯ ಸಿನಿಮಾ (Indian Cinema) ಎಂದರೆ ಬಾಲಿವುಡ್ (Bollywood) ಎಂಬ ಹುಸಿ ಹಮ್ಮಿನಲ್ಲಿ ಮೆರೆಯುತ್ತಿದ್ದ ಬಾಲಿವುಡ್​ಗೆ ದಕ್ಷಿಣ ಭಾರತದ ಬಾಹುಬಲಿ, ಕೆಜಿಎಫ್ ಸರಣಿ, ಪುಷ್ಪ, ಆರ್​ಆರ್​ಆರ್, ಕಾಂತಾರ ಸಿನಿಮಾಗಳು ಸರಿಯಾದ ಪಾಠ ಕಲಿಸಿವೆ. ದಕ್ಷಿಣ ಭಾರತದ ಸಿನಿಮಾಗಳ ಮುಂದೆ ಬಾಲಿವುಡ್ ಸತತವಾಗಿ ಸೋಲುತ್ತಲೇ ಇವೆ. ಹೀಗಿದ್ದರೂ ಬಾಲಿವುಡ್​ ತನ್ನ ಅಹಂಭಾವದಿಂದ ಹೊರಗೆ ಬಂದಂತಿಲ್ಲ. ನಿನ್ನೆಯಷ್ಟೆ ಫಿಲ್ಮ್​ಫೇರ್ ನಡೆದಿದ್ದು, ಹಲವು ಬಾಲಿವುಡ್ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆದರೆ ಏಳು ನಾಮಿನೇಶನ್​ಗಳನ್ನು ಗಳಿಸಿದ್ದ ಸಿನಿಮಾದ ನಿರ್ಮಾಪಕನಿಗೆ ಆಹ್ವಾನವನ್ನೇ ನೀಡಿಲ್ಲ. ಆ ನಿರ್ಮಾಪಕ ದಕ್ಷಿಣ ಭಾರತದವರು ಎಂಬ ಕಾರಣಕ್ಕೆ ಈ ಧೋರಣೆಯೇ? ನೆಟ್ಟಿಗರು ಹಾಗೂ ಸ್ವತಃ ನಿರ್ಮಾಪಕ ಪ್ರಶ್ನೆ ಮಾಡಿದ್ದಾರೆ.

68ನೇ ಫಿಲ್ಮ್​ಫೇರ್​ನಲ್ಲಿ (Filmfare) ಹಿಂದಿಯ ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ಬರೋಬ್ಬರಿ ಏಳು ವಿಭಾಗದಲ್ಲಿ ನಾಮಿನೇಶನ್​ಗಳನ್ನು ಗಳಿಸಿಕೊಂಡಿತ್ತು. ಹೀಗಿದ್ದರೂ ಸಹ ಈ ಸಿನಿಮಾದ ನಿರ್ಮಾಪಕರಾದ ತೇಜ್ ನಾರಾಯಣ್ ಅಗರ್ವಾಲ್ ಅವರಿಗೆ ಆಹ್ವಾನ ನೀಡಿರಲಿಲ್ಲ. ಒಂದೂ ಸಿನಿಮಾ ಸ್ಪರ್ಧೆಯಲ್ಲಿಲ್ಲದ ಹಲವರು ನಿನ್ನೆ ನಡೆದ ಫಿಲಂಫೇರ್​ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು, ಆದರೆ ಏಳು ವಿಭಾಗದಲ್ಲಿ ನಾಮಿನೇಶನ್ ಆಗಿದ್ದರೂ ಸಹ ನಿರ್ಮಾಪಕ ತೇಜ್ ನಾರಾಯಣ್ ಅಗರ್ವಾಲ್ ಅವರಿಗೆ ಆಹ್ವಾನ ನೀಡಲಾಗಿರಲಿಲ್ಲ.

ಈ ಬಗ್ಗೆ ವಿಡಿಯೋ ಮೂಲಕ ಅಸಮಾಧಾಣ ಹೊರಹಾಕಿರುವ ನಿರ್ಮಾಪಕ ತೇಜ್ ನಾರಾಯಣ್, ”ದಿ ಕಾಶ್ಮೀರ್ ಫೈಲ್ಸ್​ ಸಿನಿಮಾಕ್ಕೆ ಫಿಲ್ಮ್​ಫೇರ್ ಏಳು ನಾಮಿನೇಶನ್ ನೀಡಿದೆ. ಸಂತೋಷ, ಆದರೆ ಅವರ ಬಳಿ ಬೇರೆ ದಾರಿ ಇರಲಿಲ್ಲ. ಜನ ಓಟು ಮಾಡಿದ ರೀತಿಗೆ ಅವರು ನಮಗೆ ನಾಮಿನೇಶನ್ ನೀಡಲೇ ಬೇಕಾಯ್ತು. ಒಲ್ಲದ ಮನಸ್ಸಿನಿಂದಲೇ ನಾಮಿನೇಶನ್ ನೀಡಿದ್ದಾರೆ ಎನಿಸುತ್ತದೆ. ಫಿಲ್ಮ್​ಫೇರ್​ನ ಉದ್ದೇಶ ಏನೆನನ್ನುವುದು ನನಗೆ ತಿಳಿಯುತ್ತಿಲ್ಲ. ನಾನು ದಕ್ಷಿಣ ಭಾರತದ ನಿರ್ಮಾಪಕ. ನಮ್ಮ ಸಿನಿಮಾ ಏಳು ವಿಭಾಗದಲ್ಲಿ ನಾಮಿನೇಟ್ ಆಗಿದ್ದರೂ ನನಗೆ ಆಹ್ವಾನ ಬಂದಿಲ್ಲ” ಎಂದಿದ್ದಾರೆ.

”ನಿರ್ದೇಶಕ ಇಲ್ಲದೆ ಸಿನಿಮಾ ಆಗುವುದಿಲ್ಲ, ಹೀರೋ ಇಲ್ಲದೆ ಸಿನಿಮಾ ಆಗುವುದಿಲ್ಲ ಹಾಗೆಯೇ ನಿರ್ಮಾಪಕ ಇಲ್ಲದೆಯೂ ಸಿನಿಮಾ ಆಗುವುದಿಲ್ಲ. ನಿರ್ಮಾಪಕ ಇಲ್ಲದೆ ಯಾವ ನಟರೂ ಸ್ಟಾರ್ ಆಗಲಾರ. ಈ ಸತ್ಯವನ್ನು ಫಿಲ್ಮ್​ಫೇರ್ ಅರ್ಥ ಮಾಡಿಕೊಳ್ಳಬೇಕು. ನಾನಂತೂ ಹೇಳುತ್ತೇನೆ, ಇದು ಫಿಲ್ಮ್​ಫೇರ್ ಅಲ್ಲ ಅನ್​ಫೇರ್ ಅವಾರ್ಡ್ಸ್. ನಮ್ಮ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಹ ಪ್ರಶಸ್ತಿ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ, ನನಗಂತೂ ಆಹ್ವಾನವೇ ಇಲ್ಲ. ಈ ವಿಷಯವನ್ನು ಜನಗಳ ಅವಗಾಹನೆಗೆ ಬಿಡುತ್ತೀನಿ, ಆಹ್ವಾನ ನೀಡದೇ ಇರುವುದು ಸರಿಯೋ-ತಪ್ಪೋ ಅವರೇ ನಿರ್ಧರಿಸಲಿ. ನನಗೆ ಈ ಪ್ರಶಸ್ತಿಗಳ ನಿರೀಕ್ಷೆ ಇಲ್ಲ. ಜನರ ಪ್ರೀತಿ ಇರುವವರೆಗೆ ನಾನು ಸಿನಿಮಾ ಮಾಡುತ್ತಲೇ ಇರುತ್ತೀನಿ” ಎಂದಿದ್ದಾರೆ ತೇಜ್ ನಾರಾಯಣ್.

ಇದನ್ನೂ ಓದಿ:Filmfare Awards 2023: 68ನೇ ಫಿಲ್ಮ್​ಫೇರ್ ಪ್ರಶಸ್ತಿ ಗೆದ್ದವರ ಪಟ್ಟಿ ಇಲ್ಲಿದೆ

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಹ ಫಿಲ್ಮ್​ಫೇರ್​ ವಿರುದ್ಧ ವಾಗ್ದಾಳಿ ನಡೆಸಿದ್ದರು, ”‘68ನೇ ಫಿಲ್ಮ್​ಫೇರ್​ ಅವಾರ್ಡ್ಸ್​​ನಲ್ಲಿ ನನ್ನ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ 7 ವಿಭಾಗಗಳಲ್ಲಿ ನಾಮಿನೇಟ್​ ಆಗಿದೆ ಎಂಬುದು ಮಾಧ್ಯಮಗಳಿಂದ ತಿಳಿಯಿತು. ಆದರೆ ನೈತಿಕತೆ ಇಲ್ಲದ, ಸಿನಿಮಾವಿರೋಧಿಯಾದ ಈ ಪ್ರಶಸ್ತಿತನ್ನು ನಯವಾಗಿ ತಿರಸ್ಕರಿಸುತ್ತೇನೆ ಫಿಲ್ಮ್​ಫೇರ್​ ಆಯೋಜಕರ ಪ್ರಕಾರ ಸ್ಟಾರ್​ ಕಲಾವಿದರನ್ನು ಹೊರತುಪಡಿಸಿ ಇನ್ನುಳಿದವರ ಮುಖಕ್ಕೆ ಬೆಲೆ ಇಲ್ಲ. ಬೇರೆ ಯಾರೂ ಮುಖ್ಯರಲ್ಲ. ಫಿಲ್ಮ್​ಫೇರ್​ನಿಂದ ನಿರ್ದೇಶಕರಿಗೆ ಘನತೆ ಬರೋದಿಲ್ಲ. ಬದಲಿಗೆ, ಅವಮಾನಿಸುವ ಈ ವ್ಯವಸ್ಥೆ ಅಂತ್ಯವಾಗಬೇಕು. ಹಾಗಾಗಿ ನಾನು ಇದನ್ನು ವಿರೋಧಿಸುತ್ತಿದ್ದೇನೆ. ಬರಹಗಾರರು, ನಿರ್ದೇಶಕರು ಮತ್ತು ಇತರೆ ವಿಭಾಗಗಳ ಮುಖ್ಯಸ್ಥರನ್ನು ಕೀಳಾಗಿ ಕಾಣುವ ವ್ಯವಸ್ಥೆಯ ಭಾಗವಾಗಲು ನಾನು ನಿರಾಕರಿಸುತ್ತೇನೆ’’ ಎಂದು ನಿನ್ನೆ (ಏಪ್ರಿಲ್ 27) ಟ್ವೀಟ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?