Updated on: Apr 28, 2023 | 9:55 AM
ಡಬೂ ರತ್ನಾನಿ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಬಾಲಿವುಡ್ನ ಖ್ಯಾತ ಫೋಟೋಗ್ರಾಫರ್. ಶಾರುಖ್ ಖಾನ್ ಸೇರಿ ಬಹುತೇಕ ಸೆಲೆಬ್ರಿಟಿಗಳ ಹಾಟ್ ಫೇವರಿಟ್ ಛಾಯಾಗ್ರಾಹಕ. ಅವರ ಬಗ್ಗೆ ಇಷ್ಟೊಂದು ವಿಚಾರ ಹೇಳಲು ಕಾರಣವೂ ಇದೆ.
‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಮೂಲಕ ಫೇಮಸ್ ಆದ ಸಾನ್ಯಾ ಐಯ್ಯರ್ ಅವರು ಡಬೂ ರತ್ನಾನಿ ಬಳಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ವೈರಲ್ ಆಗಿದೆ.
ಬಿಳಿ ಬಣ್ಣದ ಬಟ್ಟೆ ಧರಿಸಿ ಸಾನ್ಯಾ ಐಯ್ಯರ್ ಮಿಂಚಿದ್ದಾರೆ. ಈ ಫೋಟೋಗೆ 20 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನೂರಾರು ಮಂದಿ ಫೋಟೋಗೆ ಕಮೆಂಟ್ ಮಾಡಿದ್ದಾರೆ.
ದಿವ್ಯಾ ಉರುಡುಗ ಅವರು ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ. ‘ಕ್ರೇಜಿ’ ಎಂದು ಅವರು ಬರೆದುಕೊಂಡಿದ್ದಾರೆ. ಕೆಲವರು ಹಾಟ್ ಎಂದು ಕಮೆಂಟ್ ಮಾಡಿದ್ದಾರೆ.
ಸಾನ್ಯಾ ಐಯ್ಯರ್ ಅವರು ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಯಾವುದೇ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿಲ್ಲ. ಅವರು ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಲಿ ಎಂಬುದು ಫ್ಯಾನ್ಸ್ ಕೋರಿಕೆ.