Viral News: ಹೋಟೆಲ್​ನಲ್ಲಿ ಕ್ವಾರಂಟೈನ್​ ಆಗಿದ್ದ ವ್ಯಕ್ತಿ ಎಸ್ಕೇಪ್​! ಬೆಡ್​ಶೀಟ್​ನಿಂದ ಹಗ್ಗ ತಯಾರಿಸಿ 4ನೇ ಮಹಡಿಯಿಂದ ಇಳಿದು ಪರಾರಿ

| Updated By: shruti hegde

Updated on: Jul 22, 2021 | 9:58 AM

ರೂಮಿನಲ್ಲಿದ್ದ ಬೆಡ್​ಶೀಟ್​ಗಳನ್ನೆಲ್ಲಾ ಜೋಡಿಸಿ, ಬಿಗಿಯಾದ ಗಂಟು ಕಟ್ಟಿ ಹಗ್ಗ ತಯಾರಿಸಿ ಕಿಟಕಿಯಿಂದ ಇಳಿದಿದ್ದಾನೆ. ಆತನಿದ್ದ 4ನೇ ಮಹಡಿಯಿಂದ ಕೆಳಗಿಳಿದಿದ್ದಾನೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

Viral News: ಹೋಟೆಲ್​ನಲ್ಲಿ ಕ್ವಾರಂಟೈನ್​ ಆಗಿದ್ದ ವ್ಯಕ್ತಿ ಎಸ್ಕೇಪ್​! ಬೆಡ್​ಶೀಟ್​ನಿಂದ ಹಗ್ಗ ತಯಾರಿಸಿ 4ನೇ ಮಹಡಿಯಿಂದ ಇಳಿದು ಪರಾರಿ
ಹೋಟೆಲ್​ನಲ್ಲಿ ಕ್ವಾರಂಟೈನ್​ ಆಗಿದ್ದ ವ್ಯಕ್ತಿ ಎಸ್ಕೇಪ್​!
Follow us on

ಕೊವಿಡ್​19 ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ರಿಸ್ಬೇನ್​ನಿಂದ ಆಸ್ಟ್ರೇಲಿಯಾಕ್ಕೆ ಬಂದಿಳಿದ ಪ್ರಯಾಣಿಕರಿಗೆ ಹೋಟೆಲ್​ನಲ್ಲಿ ಕ್ವಾರಂಟೈನ್​ ವ್ಯವಸ್ಥೆ ಮಾಡಲಾಗಿತ್ತು. ಆದರೆ ಓರ್ವ ವ್ಯಕ್ತಿ ಹೋಟೆಲ್​ನಿಂದ ತಪ್ಪಿಸಿಕೊಂಡಿದ್ದು ಇದೀಗ ಪೊಲೀಸರು ಆತನ್ನು ಬಂಧಿಸಿದ್ದಾರೆ. ವ್ಯವಸ್ಥೆ ಮಾಡಲಾಗಿದ್ದ ಹೋಟೆಲ್​ ರೂಮಿನ ಕಿಟಕಿಯಿಂದ ವ್ಯಕ್ತಿ ಪರಾರಿಯಾಗಿದ್ದಾನೆ. ರೂಮಿನಲ್ಲಿದ್ದ ಬೆಡ್​ಶೀಟ್​ಗಳನ್ನೆಲ್ಲಾ ಜೋಡಿಸಿ, ಬಿಗಿಯಾದ ಗಂಟು ಕಟ್ಟಿ ಹಗ್ಗ ತಯಾರಿಸಿ ಕಿಟಕಿಯಿಂದ ಇಳಿದಿದ್ದಾನೆ. ಆತನಿದ್ದ 4ನೇ ಮಹಡಿಯಿಂದ ಕೆಳಗಿಳಿದಿದ್ದಾನೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಆತನು ಕೊವಿಡ್​ 19 ಪರೀಕ್ಷೆಗೆ ಒಳಗಾಗಿದ್ದು ನೆಗೆಟಿವ್​ ರಿಪೋರ್ಟ್​ ಬಂದಿದೆ. ಬಳಿಕ ಪೊಲೀಸರು ತನಿಖೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಫೇಸ್​ಬುಕ್​ನಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಕ್ವಾರಂಟೈನ್​ನಲ್ಲಿದ್ದ 39 ವರ್ಷದ ವ್ಯಕ್ತಿ ತಪ್ಪಿಸಿಕೊಂಡಿದ್ದು, ಬಳಿಕ ಆತನ್ನು ಬಂಧಿಸಲಾಗಿದೆ. ಇದೇ ತಿಂಗಳು 19ನೇ ತಾರೀಕು ಸೋಮವಾರ ಸಂಜೆ 4.15ರ ವೇಳೆಗೆ ವ್ಯಕ್ತಿ ಬ್ರಿಸ್ಬೇನ್​ನಿಂದ ವಿಮಾನದಲ್ಲಿ ಬಂದಿಳಿದಿದ್ದ. ಕ್ವಾರಂಟೈನ್​ಗಾಗಿ ಹೋಟೆಲ್​​ವೊಂದರಲ್ಲಿ ವ್ಯವಸ್ಥೆ ಮಾಡಲಾಯಿತು. ಆದರೆ ಜುಲೈ 20ರ ಬೆಳಗ್ಗಿನ ಜಾವ ಸುಮಾರು 12.45ರ ಸರಿಸುಮಾರಿಗೆ ಹೋಟೆಲ್​ ಕಿಟಕಿಯಿಂದ ಆಚೆ ಇಳಿದು ಪರಾರಿಯಾಗಿದ್ದಾನೆ. ಆತನಿರುವ ಜಾಗವನ್ನು ಪತ್ತೆ ಮಾಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊರೊನಾ ವೈರಸ್​ ಹರಡುವಿಕೆಯಿಂದ 2020ರಿಂದ ಆಸ್ಟ್ರೇಲಿಯಾ ಗಡಿಗಳನ್ನು ಮುಚ್ಚಲಾಗಿದೆ. ದೇಶಕ್ಕೆ ಪ್ರವೇಶಿಸಲು ಅನುಮತಿ ಪಡೆದವರು ಎರಡು ವಾರಗಳ ಕಾಲ ಕ್ವಾರಂಟೈನ್​ ಆಗಬೇಕು. ಆಸ್ಟ್ರೇಲಿಯಾದಲ್ಲಿ ಡೆಲ್ಟಾ ರೂಪಾಂತರದಿಂದಾಗಿ ನಿಯಂತ್ರಣಕ್ಕಾಗಿ ಹೆಣಗಾಡುವ ಪರಿಸ್ಥಿತಿ ಎದುರಾಗಿದೆ. ವಿಕ್ಟೋರಿಯಾ ಮತ್ತು ದಕ್ಷಿಣ ಆಸ್ಟ್ರೇಲಿಯಾ ಕೂಡಾ ನೂರಾರು ಕೊವಿಡ್​ ಪ್ರಕರಣಗಳನ್ನು ವರದಿ ಮಾಡುತ್ತಲೇ ಇದೆ.

ಇದನ್ನೂ ಓದಿ:

Rekha Kadiresh ರೇಖಾ ಕೊಲೆ ಬಳಿಕ ಎಸ್ಕೇಪ್ ಆಗಲು ಆರೋಪಿಗಳು ರೂಪಿಸಿದ್ದ ಪ್ಲ್ಯಾನ್ ಹೇಗಿತ್ತು? ಇಲ್ಲಿದೆ ಡಿಟೈಲ್ಸ್

ಬೈಕ್​ಗೆ ಡಿಕ್ಕಿ ಹೊಡೆದು ಎಸ್ಕೇಪ್​ ಆಗೋವಾಗ ಮನೆಗೆ ನುಗ್ಗಿದ ಕಾರು; ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Published On - 9:49 am, Thu, 22 July 21