ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಖಾದ್ಯಗಳ ವಿಡಿಯೊ ಸಾಕಷ್ಟು ಹರಿದಾಡುತ್ತವೆ. ಅವುಗಳಲ್ಲಿ ಕೆಲವನ್ನು ಜನರು ಇಷ್ಟ ಪಟ್ಟಿದ್ದರೆ ಇನ್ನು ಕೆಲವು ವಿಲಕ್ಷಣ ಆಹಾರ ಸಂಯೋಜನೆಗಳು ಹೆಚ್ಚು ಇಷ್ಟವಾಗುವುದಿಲ್ಲ. ಇದೀಗ ಮತ್ತೊಂದು ಹೊಸ ತಿನಿಸಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಬಾಂಗ್ಲಾದೇಶದ ಸ್ಟ್ರೀಟ್ನಲ್ಲಿ ವ್ಯಾಪಾರಸ್ಥ ಸ್ಟ್ರಾಬೆರಿ ಮಸಾಲಾ ತಯಾರಿಸಿ ಮಾರಾಟ ಮಾಡುತ್ತಿದ್ದಾನೆ. ನೀವು ಎಂದಾದರೂ ಮಸಾಲಾ ಸ್ಟ್ರಾಬೆರಿ ತಿಂದಿದ್ದೀರಾ?
ಮಸಾಲಾ ಸ್ಟ್ರಾಬೆರಿ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ಸುಮಾರು 6.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಈ ಹೊಸ ಶೈಲಿಯ ಆಹಾರ ತಯಾರಿಸಲು ವ್ಯಾಪಾರಸ್ಥನು ಮೊದಲಿಗೆ ಸ್ಟ್ರಾಬೆರಿಗಳನ್ನು ಕತ್ತರಿಸುತ್ತಾನೆ. ಬಳಿಕ ಉಪ್ಪು, ಮಸಾಲಾ ಸೇರಿಸಿ ಜಾರ್ ಮುಚ್ಚಳವನ್ನು ಮುಚ್ಚುತ್ತಾನೆ. ಅದನ್ನು ಸರಿಯಾಗಿ ಮಿಶ್ರಣ ಮಾಡಿ ಜನರಿಗೆ ನೀಡುತ್ತಿದ್ದಾನೆ.
ಈ ಹೊಸ ವಿಧಾನದ ವಿಲಕ್ಷಣ ಆಹಾರ ಸಂಯೋಜನೆಯನ್ನು ನೆಟ್ಟಿಗರು ಇಷ್ಟಪಟ್ಟಿಲ್ಲ. ಈ ತಿನಿಸು ನೋಡಿ ಹಲವರು ಅಸಾಮಾಧಾನ ಹೊರಹಾಕಿದ್ದಾರೆ. ತಮ್ಮ ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ತಿಳಿಸಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು, ಕೆಲವರು ಆ ಹೊಸ ತಿನಿಸು ರುಚಿಯಾಗಿರಬಹುದೇ? ಎಂದು ಪ್ರಶ್ನಿಸಿದ್ದಾರೆ, ಇನ್ನು ಕೆಲವರು ನಗುವ ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯೆ ಹೊರಹಾಕಿದ್ದಾರೆ.
ಇದನ್ನೂ ಓದಿ:
Viral Video: ಕಲಾವಿದನ ಕೈಚಳಕದಿಂದ ಮೂಡಿದ ಕಣ್ಣಿನ ಚಿತ್ರ; ವಿಡಿಯೊ ವೈರಲ್
Published On - 9:10 am, Tue, 30 November 21