ವ್ಯಾಕ್ಸಿನೇಷನ್​ ಉತ್ತೇಜಿಸಲು 700 ಕುರಿಗಳನ್ನು ಸಿರಿಂಜ್​ ಆಕಾರದಲ್ಲಿ ನಿಲ್ಲಿಸಿ ಸಂದೇಶ ಸಾರಿದ ವ್ಯಕ್ತಿ

| Updated By: Pavitra Bhat Jigalemane

Updated on: Jan 07, 2022 | 10:33 AM

ಜರ್ಮನಿಯ ಕ್ಯಾಂಪೇನರ್​ ಒಬ್ಬರು 700 ಕುರಿಗಳನ್ನು ಸಿರಿಂಜ್​ ಆಕೃತಿಯಲ್ಲಿ ನಿಲ್ಲಿಸಿ ವ್ಯಾಕ್ಸಿನ್​ ತೆಗೆದುಕೊಳ್ಳುವಂತೆ ಜನರನ್ನು ಉತ್ತೇಜಿಸಿದ್ದಾರೆ. ಅದರ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವ್ಯಾಕ್ಸಿನೇಷನ್​ ಉತ್ತೇಜಿಸಲು 700 ಕುರಿಗಳನ್ನು ಸಿರಿಂಜ್​ ಆಕಾರದಲ್ಲಿ ನಿಲ್ಲಿಸಿ ಸಂದೇಶ ಸಾರಿದ ವ್ಯಕ್ತಿ
ಕುರಿಗಳು
Follow us on

ಕೊರೋನಾ ಸಾಂಕ್ರಾಮಿಕ ಜಗತ್ತಿನೆಲ್ಲೆಡೆ ಜನರನ್ನು ಆತಂಕಕ್ಕೀಡು ಮಾಡಿದೆ. ಈ ಹಿನ್ನಲೆಯಲ್ಲಿ ವ್ಯಾಕ್ಸಿನೇಷನ್​ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಹಲವು ರಾಷ್ಟ್ರಗಳಲ್ಲಿ ವ್ಯಾಕ್ಸಿನ್​ ತೆಗೆದುಕೊಳ್ಳಲು ಜನ ಇನ್ನೂ  ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜರ್ಮನಿಯ ಕ್ಯಾಂಪೇನರ್​ ಒಬ್ಬರು 700 ಕುರಿಗಳನ್ನು ಸಿರಿಂಜ್​ ಆಕೃತಿಯಲ್ಲಿ ನಿಲ್ಲಿಸಿ ವ್ಯಾಕ್ಸಿನ್​ ತೆಗೆದುಕೊಳ್ಳುವಂತೆ ಜನರನ್ನು ಉತ್ತೇಜಿಸಿದ್ದಾರೆ. ಅದರ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಜರ್ಮನಿಯಲ್ಲಿ ಕೊರೋನಾದಿಂದ ಲಕ್ಷಾಂತರ ಸಾವುಗಳು ಸಂಭವಿಸಿವೆ. ದಿನನಿತ್ಯದ ಪ್ರಕರಣಗಳೂ ಕೂಡ ಏರಿಕೆಯಲ್ಲೇ ಇವೆ. ಹೀಗಿದ್ದರೂ ಜನ ವ್ಯಾಕ್ಸಿನ್​ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.  ಜರ್ಮನಿಯಲ್ಲಿ ಕುರಿಗಳ ಬಗ್ಗೆ ಅಪಾರ ನಂಬಿಕೆಯಿದೆ. ಧನಾತ್ಮಕ ದೃಷ್ಟಿಕೋನದಲ್ಲಿ ಕುರಿಗಳನ್ನು ಜರ್ಮನಿಯ ಜನ ನೋಡುತ್ತಾರೆ ಈ ಹಿನ್ನಲೆಯಲ್ಲಿ ಎಟ್ಜೋಲ್ಡ್​ ಎನ್ನುವ ವ್ಯಕ್ತಿ ಜರ್ಮನ್ ಪಟ್ಟಣವಾದ ಷ್ನೆವರ್ಡಿಂಗನ್‌ನಲ್ಲಿ ತನ್ನದೇ ತಂಡವನ್ನು ಕಟ್ಟಿಕೊಂಡು ಕುರಿಗಳ ಮೂಲಕ ವ್ಯಾಕ್ಸಿನ್​ ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. 100 ಮೀ ಉದ್ದದ ಸಿರಿಂಜ್​ ಆಕೃತಿಯನ್ನು 700 ಕುರಿಗಳ ಮೂಲಕ ನಿರ್ಮಿಸಿದ್ದಾರೆ. ಈ ಕುರಿತು ರಾಯಿಟರ್ಸ್​ ವರದಿ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಜರ್ಮನ್​ನಲ್ಲಿ ಶೇ.71.3 ರಷ್ಟು ಜನ ಮಾತ್ರ ಕೊರೋನಾ ಲಸಿಕೆಯ ಎರಡೂ ಡೋಸ್​ನ್ನು ಪಡೆದಿದ್ದಾರೆ  ಹಾಗೂ 39.3 ಪ್ರತಿಶತದಷ್ಟು ಜನರು ಕಳೆದ ಎರಡು ದಿನಗಳ ಹಿಂದೆ ವ್ಯಕ್ಸಿನ್ ಪಡೆದಿದ್ದಾರೆ ಎಂದು ಜರ್ಮನ್ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ ಫಾರ್ ಇನ್ಫೆಕ್ಷನ್​ ಡಿಸೀಸ್​ ಸಂಸ್ಥೆ ವರದಿ ತಿಳಿಸಿದೆ. ಜತೆಗೆ ಶೇ5 ರಿಂದ 10 ಜನರು ವ್ಯಾಕ್ಸಿನ್​ ಪಡೆಯಲು ನಿರಾಕರಿಸುತ್ತಿದ್ದಾರೆ. ಯುರೋಪಿಯನ್​ ದೇಶಗಳಲ್ಲಿ ಜರ್ಮನಿಯಲ್ಲಿ ಅತೀ ಕಡಿಮೆ ಜನರು ವ್ಯಾಕ್ಸಿನೇಷನ್ ಪಡೆದುಕೊಂಡಿದ್ದಾರೆ​ ಎಂದು ಸಂಸ್ಥೆ ವರದಿ ತಿಳಿಸಿದೆ.

ಇದನ್ನೂ ಓದಿ:

Viral Video: ಮದುವೆಯಲ್ಲಿ ವರನನ್ನು ಪದೇಪದೆ ತಬ್ಬಿಕೊಂಡ ಬುರ್ಖಾಧಾರಿ ಮಹಿಳೆ; ಅಸಲಿ ವಿಚಾರ ತಿಳಿದು ಶಾಕ್ ಆದ ವಧು!

Published On - 9:40 am, Fri, 7 January 22