Viral: ವಿಧವೆ, ವಿಚ್ಛೇದಿತ ಮಹಿಳೆಯರೇ ಈತನ ಟಾರ್ಗೆಟ್; ಶ್ರೀಮಂತಿಕೆಯ ಆಸೆಗೆ 9 ವರ್ಷದಲ್ಲಿ 20 ಮದುವೆ
ಹಣದಾಸೆಗೆ ಬಿದ್ದು ಅಥವಾ ಬೇಗ ಶ್ರೀಮಂತನಾಗಬೇಕು ಎಂದು ಕೆಲವರು ಕಳ್ಳತನ ಇತ್ಯಾದಿ ಅಡ್ಡ ದಾರಿಗಳನ್ನು ಹಿಡಿಯುತ್ತಾರೆ. ಅದೇ ರೀತಿ ಇಲ್ಲೊಬ್ಬ ಸುಲಭ ದಾರಿಯಲ್ಲಿ ಹಣ ಗಳಿಸಲು ವಿಧವೆ ಮತ್ತು ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಅವರನ್ನು ಮದುವೆಯಾಗಿ ಕೊನೆಗೆ ಚಿನ್ನ, ಹಣ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ. ಹೀಗೆ 9 ವರ್ಷದಲ್ಲಿ 20 ಮಹಿಳೆಯನ್ನು ಮದುವೆಯಾಗಿ ಯಾಮಾರಿಸಿದ ಈ ಖತರ್ನಾಕ್ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ.
ಹಣದಾಸೆಗೆ ಬಿದ್ದು ಅಥವಾ ಸುಲಭ ದಾರಿಯಲ್ಲಿ ಶ್ರೀಮಂತಿಕೆಯನ್ನು ಗಳಿಸಲು ಈ ಕೆಲವೊಬ್ಬರು ಏನೂ ಬೇಕಾದರೂ ಮಾಡುತ್ತಾರೆ. ಕಳ್ಳತನ, ದರೋಡೆ ಸೇರಿದಂತೆ ಎಂತಹ ವಂಚನೆ ಮಾಡೋದಕ್ಕೂ ತಯಾರಿರುತ್ತಾರೆ. ಇತ್ತೀಚಿಗಷ್ಟೆ ಹಣದಾಸೆಗೆ ಬಿದ್ದ ಖತರ್ನಾಕ್ ಮಹಿಳೆಯೊಬ್ಬಳು ಬರೋಬ್ಬರಿ 50 ಜನರನ್ನು ಮದುವೆಯಾಗಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಳು. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಸುಲಭ ದಾರಿಯಲ್ಲಿ ಹಣ ಗಳಿಸಲು ವಿಧವೆ ಮತ್ತು ವಿಚ್ಛೇದಿತ ಮಹಿಳೆಯರನ್ನು ಟಾರ್ಗೆಟ್ ಮಾಡಿ, 9 ವರ್ಷದಲ್ಲಿ 20 ಮಹಿಳೆಯನ್ನು ಮದುವೆಯಾಗಿ ಯಾಮಾರಿಸಿದ್ದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ.
ಈ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದ್ದು, ಸುಲಭ ದಾರಿಯಲ್ಲಿ ಹಣ ಗಳಿಸಲು ವಿಧವೆ ಮತ್ತು ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಅವರನ್ನು ಮದುವೆಯಾಗಿ ಕೊನೆಗೆ ಚಿನ್ನ, ಹಣ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ ಆಸಾಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. 43 ವರ್ಷ ವಯಸ್ಸಿನ ಫಿರೋಜ್ ನಿಯಾಜ್ ಶೇಖ್ ಎಂಬಾತ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ವಿಧವೆ ಮತ್ತು ವಿಚ್ಛೇದಿತ ಮಹಿಳೆಯರನ್ನು ಟಾರ್ಗೆಟ್ ಮಾಡಿ, ಅವರೊಂದಿಗೆ ಸ್ನೇಹ ಬೆಳೆಸಿ ಮದುವೆಯಾಗಿ, ಕೆಲ ದಿನಗಳ ಬಳಿಕ ಹಣ, ಚಿನ್ನ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ. ಹೀಗೆ ಈತ 9 ವರ್ಷದಲ್ಲಿ 20 ಮಹಿಳೆಯರಿಗೆ ವಂಚನೆ ಮಾಡಿದ್ದಾನೆ.
ಇದನ್ನೂ ಓದಿ: ನವಜಾತ ಶಿಶುವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ಪೊದೆಯಲ್ಲಿ ಎಸೆದು ಹೋದ ಹೆತ್ತಮ್ಮ
ಮಹಾರಾಷ್ಟ್ರದ ನಲಸೋಪಾರ ಮೂಲದ ಮಹಿಳೆಯೊಬ್ಬರಿಗೂ ಕೂಡಾ ಇದೇ ರೀತಿ ಈತ ವಂಚನೆ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ, ಲ್ಯಾಪ್‌ಟಾಪ್ ಮತ್ತು ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ. ತನಗಾದ ವಂಚನೆಯ ಬಗ್ಗೆ ಆ ಮಹಿಳೆ ಪೊಲೀಸರಿಗೆ ದೂರನ್ನು ನೀಡಿದ್ದು, ದೂರಿನ ಆಧಾರದ ಮೇರೆಗೆ MBVV ಪೊಲೀಸರು ಆತನನ್ನು ಜುಲೈ 23 ರಂದು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆತನ ಕಳ್ಳಾಟ ಬಯಲಾಗಿದ್ದು, ಆರೋಪಿಯಿಂದ ಲ್ಯಾಪ್‌ಟಾಪ್, ಮೊಬೈಲ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ 2015 ರಿಂದ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ವಿವಿಧ ರಾಜ್ಯದ ಸುಮಾರು 20 ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದಾನೆ ಎಂಬುದು ತಿಳಿದು ಬಂದಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ