ನವದೆಹಲಿ: ಮೊದಲ ಪತ್ನಿ (Wife) ಬದುಕಿರುವಾಗಲೇ ಇನ್ನೊಂದು ಮದುವೆಯಾಗುವುದು ಕಾನೂನು ಪ್ರಕಾರ ಅಪರಾಧ. ಮೊದಲ ಹೆಂಡತಿ ಬದುಕಿರುವಾಗಲೇ 2ನೇ ಮದುವೆ ಆಗಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದ್ರೆ, ನಿಖರ ಕಾರಣಗಳೊಂದಿಗೆ ಕಾನೂನಿನ ಪ್ರಕಾರ ಮೊದಲ ಪತ್ನಿ ವಿಚ್ಛೇದನ ಬಳಿಕ ಎರಡನೇ ಮದ್ವೆಯಾಗಬಹುದು.ಇನ್ನು ಮೊದಲ ಪತ್ನಿ ಇದ್ದು, ಕದ್ದುಮುಚ್ಚಿ ಇನ್ನೊಂದು ಮದುವೆಯಾದ ಬಳಿಕ ಸಂಸಾರದಲ್ಲಿ ರಂಪಾಟ ಆದ ಉದಾಹರಣೆಗಳು ಸಾಕಷ್ಟು ಇವೆ. ಆದ್ರೆ, ಇಲ್ಲೋರ್ವ ಮಹಿಳೆ ತನ್ನ ಗಂಡನಿಗ(Husband) ಖುದ್ದು ತಾನೇ ಮುಂದೆ ನಿಂತು ಎರಡನೇ ಮದುವೆ ಮಾಡಿಸಿದ್ದಾಳೆ. ಇದು ಅಚ್ಚರಿ ಅನ್ನಿಸಿದರೂ ಸತ್ಯ.
ಮಹಿಳೆಯೊಬ್ಬಳು ತನ್ನ ಗಂಡನಿಗೆ ತನ್ನ ಸ್ನೇಹಿತೆಯ ಜೊತೆ ಎರಡನೇ ಮದುವೆ ಮಾಡಿಸಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಮೂವರ ನಡುವೆ ನಡೆದಿರುವ ಸಂಭಾಷಣೆ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ಪತ್ನಿಯನ್ನು ಸಂತೋಷವಾಗಿ ಇಡಲೆಂದೇ ಆಕೆಯ ಸ್ನೇಹಿತೆಯನ್ನು ಎರಡನೇ ಮದುವೆ ಆಗಿದ್ದಾಗಿ ವಿಡಿಯೋದಲ್ಲಿರುವ ವ್ಯಕ್ತಿ ಹೇಳಿಕೊಂಡಿದ್ದಾನೆ.
Cute kalesh B/w Husband,Wife and her Friend pic.twitter.com/rnC92kiGpw
— Ghar Ke Kalesh (@gharkekalesh) February 14, 2023
ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿರುವ ವ್ಯಕ್ತಿ ಮೊದಲು ತನ್ನ ಹಿಂದಿರುವ ಮೊದಲ ಪತ್ನಿಯ ಪರಿಚಯ ಮಾಡುತ್ತಾನೆ. ಈಕೆ ನನ್ನ ಪತ್ನಿ ಎಂದು ಹೇಳುತ್ತಾನೆ. ಬಳಿಕ ನಿನ್ನ ಬಯಕೆ ಏನು ಎಂದು ಪತ್ನಿಯನ್ನು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಉತ್ತರಿಸಿದ ಮೊದಲ ಸಂಗಾತಿ, ನನ್ನ ಫ್ರೆಂಡ್ ಜೊತೆ ನಾನು ಹೆಚ್ಚಿಗೆ ಸಮಯ ಕಳೆಯಬೇಕೆಂದು ಕೇಳುತ್ತಾಳೆ. ಇದಕ್ಕೆ ಮರು ಪ್ರಶ್ನಿಸಿದ ಗಂಡ ನಿನ್ನ ಸಮಸ್ಯೆಯನ್ನು ನಾನು ಬಗೆಹರಿಸಿದ್ದೇನೆಯೇ? ಎನ್ನುತ್ತಾನೆ. ಅದಕ್ಕೆ ಪತ್ನಿ ಹೌದು ಎನ್ನುತ್ತಾಳೆ.
ಇದಾದ ಬಳಿಕ ಆ ವ್ಯಕ್ತಿ ತನ್ನ ಕ್ಯಾಮೆರಾವನ್ನು ತನ್ನ ಪಕ್ಕದಲ್ಲಿ ಕುಳಿತಿರುವ ಇನ್ನೋರ್ವ ಮಹಿಳೆ ಕಡೆ ತಿರುಗಿಸಿ ಇವಳೇ ಇವಳೇ ನನ್ನ ಎರಡನೇ ಪತ್ನಿ. ಹೆಸರು ಸಕಿನಾತ್. ನನ್ನ ಮೊದಲ ಪತ್ನಿಯ ಸ್ನೇಹಿತೆ ಎಂದು ಪರಿಚಯಿಸುತ್ತಾನೆ. ಈ ವೇಳೆ ಮೊದಲ ಪತ್ನಿ ಜವಿಮ್ ಅದು ನಾನಲ್ಲ ಎಂದು ಹೇಳಿದಾಗ ಸುಮ್ಮನೇ ಇರವಂತೆ ಕೊಂಚ ಧ್ವನಿಯೇರಿಸುತ್ತಾನೆ. ಕೊನೆಗೆ ಕ್ಯಾಮೆರಾವನ್ನು ಎರಡನೇ ಪತ್ನಿಯ ಕಡೆ ತಿರುಗಿಸಿ, ನನ್ನ ಕುಟುಂಬಕ್ಕೆ ಸ್ವಾಗತ ಸಕಿನಾತ್ ಎಂದು ಹೇಳುತ್ತಾನೆ. ಈ ವೇಳೆ ಎರಡನೇ ಪತ್ನಿ ನಾಚಿಕೊಂಡಿರುವುದು ವಿಡಿಯೋನಲ್ಲಿದೆ.
ಈ ವಿಡಿಯೋವನ್ನು ಘರ್ ಕೆ ಕಲೇಶ್ ಹೆಸರಿನ ಟ್ವಿಟರ್ ಖಾತೆಯಿಂದ ಶೇರ್ ಆಗಿದ್ದು, ಈವರೆಗೂ 45 ಸಾವಿರಕ್ಕೂ ಅಧಿಕ ವೀಕ್ಷಣೆ ಮಾಡಿದ್ದಾರೆ. 1,283 ಲೈಕ್ಸ್ ಬಂದಿವೆ. ಇನ್ನು 212 ಜನರು ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ಕೆಲವರು ಇದಕ್ಕೆ ಫನ್ನಿಯಾಗಿ ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಸಿಟ್ಟಿನಿಂದ ಬೈದಿದ್ದಾರೆ. ಆದರೆ, ವಿಡಿಯೋ ಅಸಲಿಯತ್ತೇನು? ಅವರು ಎಲ್ಲಿಯವರು? ಎನ್ನುವುದು ತಿಳಿದುಬಂದಿಲ್ಲ.ವಿಡಿಯೋ ಮಾತ್ರ ಸಖತ್ ವೈರಲ್ ಆಗಿದೆ.
ಇನ್ನಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:12 pm, Wed, 15 February 23