ಕೆಲ ಬಿಸಿ ರಕ್ತದ ಯುವಕರು ಇವೆಲ್ಲಾ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತವೆ ಎಂದು ಗೊತ್ತಿದ್ದರೂ ಕೂಡಾ ರಸ್ತೆಗಿಳಿದು ಬೈಕ್, ಕಾರ್‌ಗಳಲ್ಲಿ ಡೇಂಜರಸ್ ಸ್ಟಂಟ್‌ಗಳನ್ನು ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹುಚ್ಚಾಟವನ್ನು ಮೆರೆಯುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಕಸರತ್ತು ಮಾಡಿದ್ದಾನೆ. ಹೌದು ಆತ ಚಲಿಸುತ್ತಿರುವ ಆಟೋದ ಮೇಲೆ ಮಲಗಿ ಪ್ರಯಾಣಿಸಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಈತನ ಹುಚ್ಚಾಟವನ್ನು ಕಂಡು ನೆಟ್ಟಿಗರಂತೂ ಬೆಚ್ಚಿ ಬಿದ್ದಿದ್ದಾರೆ.
ಯುವಕನೊಬ್ಬ ಆಟೋದೊಳಗೆ ಕುಳಿತು ಪ್ರಯಾಣಿಸುವ ಬದಲು ಸೂಪರ್ ಮ್ಯಾನ್‌ನಂತೆ ಆಟೋ ರಿಕ್ಷಾದ ಟಾಪ್ ಮೇಲೆ ಮಲಗಿ ಪ್ರಯಾಣಿಸಿದ್ದಾನೆ. ಈ ಘಟನೆ ಎರಡು ವರ್ಷಗಳ ಹಿಂದೆ ಬಿಹಾರದಲ್ಲಿ ನಡೆದಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಮತ್ತೊಮ್ಮೆ ವೈರಲ್ ಆಗಿದೆ.
Auto Ran out of Seats😭 pic.twitter.com/Z2wr4fPqkC
— Ghar Ke Kalesh (@gharkekalesh) January 15, 2025
ಈ ದೃಶ್ಯವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹೈವೇ ರೋಡ್‌ನಲ್ಲಿ ಯುವಕನೊಬ್ಬ ಆಟೋದ ಮೇಲೆ ಮಲಗಿ ಪ್ರಯಾಣಿಸುತ್ತಿರುವ ದೃಶ್ಯವನ್ನು ಕಾಣಬಹುದು. ಸೀಟ್‌ನಲ್ಲಿ ಕುಳಿತು ಪ್ರಯಾಣಿಸುವ ಬದಲು ಆ ಯುವಕ ಭಂಡ ಧೈರ್ಯ ಮಾಡಿ ಆಟೋ ರಿಕ್ಷಾದ ಟಾಪ್ ಮೇಲೆ ಮಲಗಿ ಪ್ರಯಾಣಿಸಿದ್ದಾನೆ.
ಇದನ್ನೂ ಓದಿ: 12 ಗಂಟೆಯಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗುವ ಮೂಲಕ ವಿಶ್ವ ದಾಖಲೆ ಬರೆದ ನೀಲಿ ತಾರೆ
ಜನವರಿ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 21 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಮ್ಮ ಭಾರತದಲ್ಲಿ ಸಾಧ್ಯವಾಗದಿರುವುದು ಯಾವುದೂ ಇಲ್ಲʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹ ವಿಚಿತ್ರ ಜನ ಕೂಡಾ ಇದ್ದಾರಾ?ʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇವನು ಸೂಪರ್ ಮ್ಯಾನ್ ಇರ್ಬೇಕುʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಯುವಕನ ಹುಚ್ಚಾಟವನ್ನು ಕಂಡು ಫುಲ್ ಶಾಕ್ ಆಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ