‘ಅರೆಂಜ್ಡ್​​ ಮ್ಯಾರೇಜ್​ನಿಂದ ನನ್ನನ್ನು ರಕ್ಷಿಸಿ’ ಎಂದು ಬಿಲ್​ ಬೋರ್ಡ್​ ಹಾಕಿ ಜಾಹೀರಾತು ನೀಡಿದ ವ್ಯಕ್ತಿ

ಮೊಹಮ್ಮದ್ ಅವರು ತಮ್ಮ  ಮದುವೆಯ ಕುರಿತು ವೆಬ್ಸೈಟ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೂಲತಃ ಲಂಡನ್​ನವರಾದ ಮೊಹಮ್ಮದ್​ ಮಲ್ಲಿಕ್​ ಅವರು ಬರ್ಮಿಂಗ್​ಹ್ಯಾಮ್​ಅನ್ನು ತಮ್ಮ ತವರು ಎಂದುಕೊಂಡಿದ್ದಾರೆ.

ಅರೆಂಜ್ಡ್​​ ಮ್ಯಾರೇಜ್​ನಿಂದ ನನ್ನನ್ನು ರಕ್ಷಿಸಿ ಎಂದು ಬಿಲ್​ ಬೋರ್ಡ್​ ಹಾಕಿ ಜಾಹೀರಾತು ನೀಡಿದ ವ್ಯಕ್ತಿ
ಬಿಲ್​ಬೋರ್ಡ್​ ಜಾಹೀರಾತು
Edited By:

Updated on: Jan 05, 2022 | 12:54 PM

ವ್ಯಕ್ತಿಯೊಬ್ಬ ಅರೆಂಜ್ಡ್​ ಮ್ಯಾರೇಜ್​ನಿಂದ ನನ್ನನ್ನು ರಕ್ಷಿಸಿ ಎಂದು ಬಿಲ್​ ಬೋರ್ಡ್​ ಹಾಕಿ ಜಾಹೀರಾತು ನೀಡಿದ ಘಟನೆ ನಡೆದಿದೆ. ಯುಕೆ ಮೂಲದ ಮೊಹಮ್ಮದ ಮಲ್ಲಿಕ್​ ಎನ್ನುವ ವ್ಯಕ್ತಿ  ತನಗೆ ಸರಿಯಾದ ಹುಡುಗಿ ಸಿಕ್ಕಿಲ್ಲ. ನಾನು ಪ್ರೀತಿಸಿ ಮದುವೆಯಾಗಬೇಕು. ಅದಕ್ಕೆ ಸರಿಯಾದ ಹುಡುಗಿ ಸಿಕ್ಕಿಲ್ಲ ಎಂದು ರೋಡ್​ ಮಧ್ಯೆ ದೊಡ್ಡದಾಗಿ ಬಿಲ್​ ಬೋರ್ಡ್​ ಹಾಕಿಸಿ ಅರೆಂಜ್​ ಮ್ಯಾರೆಜ್​ನಿಂದ ನನ್ನನ್ನು ರಕ್ಷಿಸಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಮೊಹಮ್ಮದ ಅವರು ತಮ್ಮ  Findmalikawife.com ಎನ್ನುವ ವೆಬ್ಸೈಟ್​ ನಲ್ಲೂ ಈ ಬಗ್ಗೆ  ಹಂಚಿಕೊಂಡಿದ್ದಾರೆ.

ಮೊಹಮ್ಮದ್ ಅವರು ತಮ್ಮ  ಮದುವೆಯ ಕುರಿತು ವೆಬ್ಸೈಟ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೂಲತಃ ಲಂಡನ್​ನವರಾದ ಮೊಹಮ್ಮದ್​ ಮಲ್ಲಿಕ್​ ಅವರು ಬರ್ಮಿಂಗ್​ಹ್ಯಾಮ್​ಅನ್ನು ತಮ್ಮ ತವರು ಎಂದುಕೊಂಡಿದ್ದಾರೆ. ವೆಬ್ಸೈಟ್​ನಲ್ಲಿ ತಮಗೆ 29 ವರ್ಷ ವಯಸ್ಸಾಗಿದೆ, ಈವರೆಗೆ ನನಗೆ ತಕ್ಕ ಸಂಗಾತಿ ಸಿಕ್ಕಿಲ್ಲ.  ನಾನು ಮದುವೆಯಾಗುವ ಹುಡುಗಿಗೆ 20 ವರ್ಷ ವಯಸ್ಸಾಗಿರಬೇಕು. ಯಾವ ಜಾತಿ, ಧರ್ಮವಾದರೂ ನನಗೆ ಅಡ್ಡಿಯಿಲ್ಲ. ಆದರೆ ನಾನು ಹೆಚ್ಚು ಪಂಜಾಬಿ ಸಂಪ್ರದಾಯವನ್ನು ನಂಬುತ್ತೇನೆ.  ನಾನು ಮದುವೆಯನ್ನು ವಿರೋಧಿಸುವುದಿಲ್ಲ. ನನಗೆ ಒಪ್ಪುವ ಸಂಗಾತಿಯನ್ನು ಹುಡುಕುತ್ತಿದ್ದೇನೆ ಎಂದಿದ್ದಾರೆ.

ಬಿಲ್​ ಬೋರ್ಡ್​ ಮೂಲಕ ಜಾಹೀರಾತು ನೀಡಿದ ಬಳಿಕ ಮೊಹಮ್ಮದ್​ ಮಲ್ಲಿಕ್​ ಅವರಿಗೆ ನೂರಾರು ಮದುವೆಯ ಆಪರ್​ಗಳು, ಸಂದೇಶಗಳು ಬಂದಿವೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲೂ ಮದುವೆಯ ಈ ಪೋಸ್ಟರ್​ ಸಖತ್​ ವೈರಲ್​ ಆಗಿದೆ. ಈ ಹಿಂದೆ ಮಲ್ಲಿಕ್​ ಅವರು ಸೂಕ್ತ ಸಂಗಾತಿಗಾಗಿ ಹಲವು ವಿಧಾನಗಳನ್ನು ಪ್ರಯತ್ನಿಸಿದ್ದಾರಂತೆ. ಡೇಟಿಂಗ್​ ಆ್ಯಪ್​ ಹಾಗೂ ಡೇಟಿಂಗ್​ ಈವೆಂಟ್ಸ್ ಮೂಲಕವೂ ಮಲ್ಲಿಕ್​ ತಮ್ಮ ಸಂಗಾತಿಯನ್ನು ಹುಡುಕಿದ್ದಾರೆ. ಆದರೂ ಸರಿಯಾದ ಸಂಗಾತಿ ಸಿಗದ ಕಾರಣ ಬಿಲ್​ಬೋರ್ಡ್​ ಮೂಲಕ ಜಾಹೀರಾತನ್ನು ನೀಡಿದ್ದಾರೆ.
ಈ ಬಗ್ಗೆ ಮೊಹಮದ್​ ಅವರು ನಾನು ಸದಾ ಕ್ರಿಯೇಟಿವ್​ ಆಗಿ ಯೋಚಿಸಲು ಬಯಸುತ್ತೇನೆ. ಆದ್ದರಿಂದ ನನ್ನ ಸಂಗಾತಿ ಹುಡುಕಲು ಬಿಲ್​ ಬೋರ್ಡ್​ ಹಾಕಿದ್ದೇನೆ. ಅದು ಜವರಿ 14ರವರೆಗೆ ಇರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಓಮಿಕ್ರಾನ್ ಬಳಿಕ ಕೊರೋನಾ ರೂಪಾಂತರಕ್ಕೆ ಯಾವ ಹೆಸರಿಡಬಹುದು? ಗೂಗಲ್​ನಲ್ಲಿ ಜೋರಾದ ಹುಡುಕಾಟ