Viral Video: ’ಅವಸರವೇ ಅಪಘಾತಕ್ಕೆ ಕಾರಣ’ ಸಮಯಕ್ಕೆ ಸರಿಯಾಗಿ ಎಚ್ಚರಿಸಿದ ಬೇಸ್​ ಜಂಪರ್​ ಸ್ನೇಹಿತನಿಗೆ ಕೊಡಬೇಕಿದೆ ಉಡುಗೊರೆ

| Updated By: shruti hegde

Updated on: Jun 08, 2021 | 3:21 PM

ಕೆಲವು ಅವರಸ, ಗಡಿಬಿಡಿಯ ಜತೆಗೆ ಅಜಾಗರೂಕತೆಯಿಂದ ಆಗುವ ಅವಘಢಗಳನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೋರ್ವ ಬೇಸ್​ ಜಂಪಿಂಗ್​ಗೆ ಮುಂದಾಗಿದ್ದಾನೆ. ಪಕ್ಕದಲ್ಲಿದ್ದ ಸ್ನೇಹಿತ ಸಮಯಕ್ಕೆ ಸರಿಯಾಗಿ ಎಚ್ಚರಿಸಿ ಜೀವಕ್ಕೇ ಹಾನಿಯಾಗುವ ಭಯಾನಕ ಘಟನೆಯನ್ನು ತಪ್ಪಿಸಿದ್ದಾನೆ.

Viral Video: ’ಅವಸರವೇ ಅಪಘಾತಕ್ಕೆ ಕಾರಣ’ ಸಮಯಕ್ಕೆ ಸರಿಯಾಗಿ ಎಚ್ಚರಿಸಿದ ಬೇಸ್​ ಜಂಪರ್​ ಸ್ನೇಹಿತನಿಗೆ ಕೊಡಬೇಕಿದೆ ಉಡುಗೊರೆ
Follow us on

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವೀಡಿಯೋಗಳು ರಾತ್ರಿ ಬೆಳಗಾಗುವವರೆಗೆ ವೈರಲ್​ ಆಗಿಬಿಡುತ್ತವೆ. ಕೆಲವು ತಮಾಷೆಯ ವಿಡಿಯೋಗಳಾಗಿದ್ದರೆ ಇನ್ನು ಕೆಲವು ಸ್ಪೂರ್ತಿದಾಯಕವಾಗಿರುತ್ತದೆ. ಇವುಗಳ ಮಧ್ಯದಲ್ಲಿ ಜನರಿಗೆ ಎಚ್ಚರಿಕೆ ನೀಡುವ ಕೆಲವು ವಿಡಿಯೋಗಳೂ ಸಹ ಹರಿದಾಡುತ್ತವೆ. ಕೆಲವು ಅವರಸ, ಗಡಿಬಿಡಿಯ ಜತೆಗೆ ಅಜಾಗರೂಕತೆಯಿಂದ ಆಗುವ ಅವಘಢಗಳನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೋರ್ವ ಬೇಸ್​ ಜಂಪಿಂಗ್​ಗೆ ಮುಂದಾಗಿದ್ದಾನೆ. ಪಕ್ಕದಲ್ಲಿದ್ದ ಸ್ನೇಹಿತ ಸಮಯಕ್ಕೆ ಸರಿಯಾಗಿ ಎಚ್ಚರಿಸಿ ಜೀವಕ್ಕೇ ಹಾನಿಯಾಗುತ್ತಿದ್ದ ಭಯಾನಕ ಘಟನೆಯನ್ನು ತಪ್ಪಿಸಿದ್ದಾನೆ.

ಬೇಸ್​ ಜಂಪಿಗ್​ ಒಂದು ಮನೋರಂಜನಾ ಕ್ರೀಡೆ. ಹೆಚ್ಚು ಆಸಕ್ತಿಯುಳ್ಳವರು ಧುಮುಕು ಕೊಡೆಗಳನ್ನು ಬಳಸಿಕೊಂಡು ಎತ್ತರದ ಕಟ್ಟಡಗಳಿಂದ ಕೆಳಗಡೆ ಹಾರುತ್ತಾರೆ. ಧುಮುಕುಕೊಡೆಯ ಮೂಲಕ ನಿಧಾನವಾಗಿ ನೆಲಕ್ಕೆ ಬಂದು ಇಳಿಯುತ್ತಾರೆ. ಆದ್ದರಿಂದ ಬೇಸ್​ ಜಂಪಿಂಗ್​ ಎಂಬ ಹೆಸರು ಬಂದಿದೆ.

ಟಿಕ್​ಟಾಕ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ನೀವು ಗಮನಿಸುವಂತೆ, ಯುವಕನೋರ್ವ ಎತ್ತರದ ಕಟ್ಟಡದ ಮೇಲೆ ನಿಂತು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡು ಇನ್ನೇನು ಕೆಳಗೆ ಜಂಪ್​ ಮಾಡಬೇಕೆಂದು ತುದಿಗಾಲಿನಲ್ಲಿ ನಿಂತಿರುತ್ತಾನೆ. ಆದರೆ ಆತ ಧುಮುಕುಕೊಡೆಯನ್ನು ಸರಿಯಾಗಿ ಧರಿಸಿರುವುದಿಲ್ಲ. ಪಕ್ಕದಲ್ಲಿದ್ದ ಆತನ ಸ್ನೇಹಿತ ಸಮಯಕ್ಕೆ ಸರಿಯಾಗಿ ಎಚ್ಚರಿಸಿದ್ದರಿಂದ ನಡೆಯುತ್ತಿದ್ದ ಭಯಾನಕ ಘಟನೆಯಿಂದ ಯುವಕ ಪಾರಾಗಿದ್ದಾನೆ. ವಿಡಿಯೋ ನೋಡುತ್ತಿದ್ದಂತೆಯೇ ಮುಂದಿನ ಕ್ಷಣವನ್ನು ಊಹಿಸಲೂ ಸಾಧ್ಯವಿಲ್ಲ.

ಯುವಕ ಆಸ್ಟ್ರೇಲಿಯಾದವನು ಎಂಬುದು ವಿಡಿಯೋದಿಂದ ತಿಳಿದು ಬಂದಿದೆ. ವಿಡಿಯೋ, ಜನರಿಗೆ ಎಚ್ಚರಿಕೆಯ ಅಂದೆಶವನ್ನು ಹೇಳುತ್ತಿದೆ. ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿದೆ. ಅದರಲ್ಲಿಯೂ ಕೊಂಚ ಎಡವಟ್ಟಾದರೆ ಜೀವಕ್ಕೇ ಹಾನಿಯುಂಟಾಗುವ ಘಟೆ ನಡೆದುಬಿಡುತ್ತದೆ. ಬೇಸ್​ ಜಂಪಿಂಗ್​ ಮಾಡುವಾಗ ಎಷ್ಟು ಎಚ್ಚರವಹಿಸಿದರೂ ಸಾಲದು. ಅವಸರ, ಗಡಿಬಿಡಿ ಹಾಗೂ ಅಜಾಗರೂಕತೆಯಿಂದ ಅದೆಷ್ಟೋ ಅನಾಹುತಗಳು ಸಂಭವಿಸಬಹುದು.

ಸಮಯಕ್ಕೆ ಸರಿಯಾಗಿ ಎಚ್ಚರಿಸಿದ್ದರಿಂದ ಸ್ನೇಹಿತನಿಗೆ ನೆಟ್ಟಿಗರು ಶ್ಲಾಘಿಸಿದ್ದಾರೆ. ಬೇಸ್​ ಜಂಪಿಂಗ್​ ಮಾಡುವಾಗ ಜಾಗರೂಕರಾಗಿರಬೇಕು ಎಂದು ಇನ್ನು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಸಾಕಿದ ನಾಯಿಯನ್ನು ರಕ್ಷಿಸಲು ದೈತ್ಯಾಕಾರದ ಕರಡಿಯನ್ನು ತಳ್ಳುತ್ತಿರುವ ಬಾಲಕಿ; ಆಘಾತಕಾರಿ ವಿಡಿಯೋ ವೈರಲ್​

ಹರಿತ ಆಯುಧದಿಂದ ಹೊಡೆದು ನಾಯಿಯನ್ನು ಕೊಂದ ವಿಡಿಯೋ ವೈರಲ್​; ವ್ಯಕ್ತಿ ಬಂಧನ