Viral Video: ಜೀವದ ಹಂಗು ತೊರೆದು ರೈಲಿನಡಿಗೆ ಸಿಲುಕುತ್ತಿದ್ದ ನಾಯಿ ರಕ್ಷಣೆ; ಮಾನವೀಯತೆಯೇ ಧರ್ಮ ಎಂದ ನೆಟ್ಟಿಗರು

ವೈರಲ್​ ಆದ ವಿಡಿಯೋದಲ್ಲಿ ರೈಲ್ವೇ ಹಳಿ ಮೇಲೆ ಸಿಲುಕಿದ ನಾಯಿಯ ರಕ್ಷಣೆಗೆ ಮುಂದಾದ ವ್ಯಕ್ತಿಯನ್ನು ನೋಡಬಹುದು. ಅದರಲ್ಲೂ ರೈಲು ಇನ್ನೇನು ನಾಯಿ ಬಳಿಗೆ ಸಮೀಪಿಸುತ್ತಿದೆ ಎನ್ನುವ ಹಂತದಲ್ಲಿ ವ್ಯಕ್ತಿ ಹಿಂದಿನಿಂದ ಓಡಿ ಬಂದು ತನ್ನ ಜೀವದ ಹಂಗು ತೊರೆದು ನಾಯಿಯ ರಕ್ಷಣೆಗೆ ಮುಂದಾಗಿದ್ದಾರೆ.

Viral Video: ಜೀವದ ಹಂಗು ತೊರೆದು ರೈಲಿನಡಿಗೆ ಸಿಲುಕುತ್ತಿದ್ದ ನಾಯಿ ರಕ್ಷಣೆ; ಮಾನವೀಯತೆಯೇ ಧರ್ಮ ಎಂದ ನೆಟ್ಟಿಗರು
ನಾಯಿ ರಕ್ಷಣೆ
Edited By:

Updated on: Dec 28, 2021 | 3:50 PM

ಮಾನವೀಯತೆಯೇ ದೊಡ್ಡ ಧರ್ಮ. ಅದಕ್ಕಿಂತ ಮೇಲ್ಪಟ್ಟು ಏನೂ ಇಲ್ಲ. ಆದರೆ, ಇಂದಿನ ಕಾಲದಲ್ಲಿ ಮನುಷ್ಯರಲ್ಲಿ ಮಾನವೀಯತೆ ಕಾಣುವುದು ಅಪರೂಪ. ಎಲ್ಲೆಡೆ ಮಾನವೀಯತೆಯ ಕತ್ತು ಹಿಸುಕಲಾಗುತ್ತಿದೆ. ಜನರು ಪರಸ್ಪರ ವಿರೋಧಿಗಳಾಗುತ್ತಿದ್ದಾರೆ. ಸಹಾಯದ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆ. ಸ್ವಂತ ಸಹೋದರನನ್ನೇ ಮೋಸ ಮಾಡುವ ಕಾಲ ಇದಾಗಿದೆ. ಆದಾಗ್ಯೂ, ಇಂದಿಗೂ ಈ ಜಗತ್ತಿನಲ್ಲಿ ಮಾನವೀಯತೆಯನ್ನು ಪಾಲಿಸುವ ಜನರಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್​ ಆಗಿದೆ. ಮನುಷ್ಯರನ್ನು ಕಂಡರೆ ಮನುಷ್ಯರಿಗೆ ಆಗದ ಈ ಸಮಯದಲ್ಲಿ ಒಬ್ಬ ವ್ಯಕ್ತಿ, ರೈಲಿನಡಿಗೆ ಸಿಲುಕುತ್ತಿದ್ದ ನಾಯಿಯ (Dog) ರಕ್ಷಣೆಗೆ ಮುಂದಾಗಿದ್ದಾನೆ. ವೈರಲ್​ ಆದ ಈ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು, ವ್ಯಕ್ತಿಯ ಧೈರ್ಯಕ್ಕೆ ಜೈ ಎಂದಿದ್ದಾರೆ.

ವೈರಲ್​ ಆದ ವಿಡಿಯೋದಲ್ಲಿ ರೈಲ್ವೇ ಹಳಿ ಮೇಲೆ ಸಿಲುಕಿದ ನಾಯಿಯ ರಕ್ಷಣೆಗೆ ಮುಂದಾದ ವ್ಯಕ್ತಿಯನ್ನು ನೋಡಬಹುದು. ಅದರಲ್ಲೂ ರೈಲು ಇನ್ನೇನು ನಾಯಿ ಬಳಿಗೆ ಸಮೀಪಿಸುತ್ತಿದೆ ಎನ್ನುವ ಹಂತದಲ್ಲಿ ವ್ಯಕ್ತಿ ಹಿಂದಿನಿಂದ ಓಡಿ ಬಂದು ತನ್ನ ಜೀವದ ಹಂಗು ತೊರೆದು ನಾಯಿಯ ರಕ್ಷಣೆಗೆ ಮುಂದಾಗಿದ್ದಾರೆ. ಪ್ರಾಣವನ್ನು ಲೆಕ್ಕಿಸದೆ ವ್ಯಕ್ತಿಯೊಬ್ಬ ನಾಯಿಯ ಜೀವ ಉಳಿಸಿದ ಪರಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರೈಲು ಹಿಂದಿನಿಂದ ಅತಿ ವೇಗವಾಗಿ ಬರುತ್ತಿರುವುದನ್ನು ನೋಡಿದರೂ, ಸಕಾಲದಲ್ಲಿ ಆ ವ್ಯಕ್ತಿ ನಾಯಿಯ ಹಗ್ಗವನ್ನು ಬಿಚ್ಚಿ ರೈಲ್ವೇ ಟ್ರ್ಯಾಕ್‌ನಿಂದ ದೂರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಸ್ವಲ್ಪವಾದರೂ ತಡ ಮಾಡಿದ್ದರೆ ನಾಯಿ ಮತ್ತು ವ್ಯಕ್ತಿ ಇಬ್ಬರ ಪ್ರಾಣ ಹೋಗುವ ಸಾಧ್ಯತೆ ಇತ್ತು ಎನ್ನುವುದು ಈ ವಿಡಿಯೋ ನೋಡಿದ ನೆಟ್ಟಿಗರ ಮಾತಾಗಿದೆ.

ನಾಯಿಯ ಜೀವ ಉಳಿಸಲು ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವುದು ಮಾನವೀಯತೆಗೆ ನಿಜವಾದ ನಿದರ್ಶನ. ಈ ಆಘಾತಕಾರಿ ವೀಡಿಯೊವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು  ತಮ್ಮ ಟ್ವಿಟರ್​ ಖಾತೆಯಲ್ಲಿ, ನಾಯಿಯನ್ನು ಉಳಿಸಲು ವ್ಯಕ್ತಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ ಎಂಬ ಶೀರ್ಷಿಕೆಯಡಿ ಹಂಚಿಕೊಂಡಿದ್ದಾರೆ ಮತ್ತು ಮಾನವೀಯತೆಯ ನಿಜವಾದ ನಾಯಕ ಎಂದು ಹೇಳಿದ್ದಾರೆ.

ಈ ಹೃದಯಸ್ಪರ್ಶಿ ವಿಡಿಯೋ ಇಲ್ಲಿಯವರೆಗೆ 9 ಸಾವಿರಕ್ಕೂ ಹೆಚ್ಚು ವ್ಯೂವ್ಸ್​ ಪಡೆದಿದೆ. ಕಮೆಂಟ್​ ಮೂಲಕ ಅನೇಕರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ಮನುಷ್ಯನಿಗೆ ಹೆಚ್ಚಿನ ಗೌರವ ಸಲ್ಲಬೇಕು ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಮನುಷ್ಯ ಮತ್ತೊಬ್ಬ ಮನುಷ್ಯನ ಬಗ್ಗೆ ತಲೆಕೆಡಿಸಿಕೊಳ್ಳದ ಇಂದಿನ ಕಾಲದಲ್ಲಿ ನಾಯಿಯ ಜೀವ ಉಳಿಸಲು ತನ್ನ ಪ್ರಾಣದ ಬಗ್ಗೆ ತಲೆಕೆಡಿಸಿಕೊಂಡ ಆತನಿಗೆ ಸಲಾಂ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:
Viral Video: ಸಾಂತಾಕ್ಲಾಸ್​ ಟೋಪಿ ಧರಿಸಿ ತಿರುಗಾಡಿದ ಹಾವು; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು

Viral Video: ಯುವತಿ ಮತ್ತು ಸಾಕು ನಾಯಿ ಮೇಲೆ ದಾಳಿ ಮಾಡಿದ ಪಿಟ್ ಬುಲ್; ಮುಂದೇನಾಯ್ತು ನೋಡಿ