Viral Video: ರೈಲು ಚಲಿಸುತ್ತಿರುವಾಗಲೇ ಭಯಾನಕ ಸ್ಟಂಟ್; ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ಜೀವ ಉಳಿಯೋದೆ ಡೌಟ್​!

Shocking Video: ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದಾನೆ. ಇದು ಹಳೇಯ ವಿಡಿಯೋ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.

Viral Video: ರೈಲು ಚಲಿಸುತ್ತಿರುವಾಗಲೇ ಭಯಾನಕ ಸ್ಟಂಟ್; ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ಜೀವ ಉಳಿಯೋದೆ ಡೌಟ್​!
ರೈಲು ಚಲಿಸುತ್ತಿರುವಾಗಲೇ ಭಯಾನಕ ಸ್ಟಂಟ್
Edited By:

Updated on: Sep 17, 2021 | 10:50 AM

ಸೋಷಿಯಲ್ ಮೀಡಿಯಾದಲ್ಲಿ ಭಯಾನಕ ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವೊಂದಿಷ್ಟು ವಿಡಿಯೋಗಳು ಆಶ್ಚರ್ಯವೆನಿಸಿದರೂ ಅಚ್ಚರಿಕೆಯ ಸಂದೇಶವನ್ನು ಸಾರುತ್ತವೆ. ಇದೀಗ ವೈರಲ್ ಆದ ವಿಡಿಯೋದಲ್ಲಿ ಗಮನಿಸುವಂತೆ ಕೆಲವೊಂದಿಷ್ಟು ಹುಡುಗರು ಸೇರಿ ಚಲಿಸುತ್ತಿರುವ ರೈಲಿನಲ್ಲಿ ಸ್ಟಂಟ್ ಮಾಡುತ್ತಿದ್ದಾರೆ. ಇಂಥಹ ಸಾಹಸ ಎಷ್ಟು ಅಪಾಯಕಾರಿ ಎಂಬುದು ದೃಶ್ಯ ನೋಡಿದಾಕ್ಷಣ ಅನಿಸುತ್ತದೆ. ವಿಡಿಯೋ ನೋಡಿ ಆದರೆ ನೀವು ಹೀಗೆಲ್ಲಾ ಮಾಡದಿರಿ.

ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದಾನೆ. ಇದು ಹಳೇಯ ವಿಡಿಯೋ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಆಘಾತಕಾರಿ ವಿಡಿಯೋದಲ್ಲಿ ರೈಲು ಹೊರಡುತ್ತಿದ್ದಂತೆಯೇ ಓಡಿ ಹೋಗಿ ಬಾಗಿಲ ಪಕ್ಕದಲ್ಲಿ ಇರುವ ಸರಳನ್ನು ಹಿಡಿದುಕೊಂಡು ಸ್ಟಂಟ್ ಮಾಡುತ್ತಾನೆ. ರೈಲು ಮುಂದೆ ಸಾಗುತ್ತಿದ್ದಂತೆಯೇ ಒಂದೇ ಕೈಯಲ್ಲಿ ಸರಳು ಹಿಡಿದು ಬಾಗಿಲಿನ ಆಚೆಗೆ ಜೋತು ಬಿದ್ದಿದ್ದಾನೆ. ಮಧ್ಯದಲ್ಲಿ ಎತ್ತರದ ಕಟ್ಟೆಗಳು ಬಂದರೆ ಅದರ ಮೇಲೆ ಹತ್ತಿ ಓಡುತ್ತಾನೆ ಮತ್ತೆ ರೈಲಿನೊಳಕ್ಕೆ ನುಗ್ಗುತ್ತಾನೆ. ವಿಡಿಯೋ ಮಾತ್ರ ಭಯಾನವಾಗಿದೆ.

ವಿಡಿಯೋ ನೋಡಿದ ನಂತರ ಹುಡುಗನು ಜೀವದ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರುತ್ತಿದ್ದಾನೆ ಎಂದು ಓರ್ವರು ಹೇಳಿದ್ದಾರೆ. ಯುವಕನ ಸ್ಟಂಟ್ ನೋಡಿದ ಕೆಲವು ದಿಗ್ಭ್ರಮೆಗೊಂಡರು. ಕೆಲವರು, ಯುವಕನನಿಗೆ ಸಿಟ್ಟಿನಿಂದ ಬೈದಿದ್ದಾರೆ. ಇದು ನಿಜವಾಗಿಯೂ ಅಪಾಯಕಾರಿ, ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ಜೀವ ಉಳಿಸಿಯೋದೇ ಡೌಟು ಎಂಬ ಪ್ರತಿಕ್ರಿಯೆಗಳು ಕೇಳಿಬಂದಿವೆ.

ಇದನ್ನೂ ಓದಿ:

Shocking Video: ಜಾರು ಮಣ್ಣಿನಲ್ಲಿ ಸಾಗುತ್ತಿರುವಾಗ ಉರುಳಿ ಬಿದ್ದ ಟ್ರಕ್​ನ ಭಾಗಗಳೆಲ್ಲಾ ಛಿದ್ರ ಛಿದ್ರ; ವಿಡಿಯೋ ನೋಡಿ

Shocking Video: ಬಸ್ಸನ್ನು ಓವರ್ ​ಟೇಕ್​ ಮಾಡೋಕೆ ಹೋಗಿ ಆಗಿದ್ದೇ ಬೇರೆ! ಒಂದು ಸೆಕೆಂಡ್​ ತಡವಾಗಿದ್ರೂ ವ್ಯಕ್ತಿಯ ಮೈಮೇಲೆ ಹತ್ತುತ್ತಿತ್ತು ಬಸ್

(Man stunt on moving train shocking video goes viral)