ಗಾಳಿಪಟದ ಹಗ್ಗದೊಂದಿಗೆ ಹಾರಿ ಹೋದ ವ್ಯಕ್ತಿ: ವೀಡಿಯೋ ವೈರಲ್​

ಗಾಳಿ ಬಲವಾಗಿ ಬೀಸಿದ ಕಾರಣ ಗಾಳಿಪಟದಂತೆ ಹಗ್ಗ ಹಿಡಿದ ವ್ಯಕ್ತಿಯೂ ಹಾರಿಹೋದ ವಿಲಕ್ಷಣ ಘಟನೆ ನಡೆದಿದೆ. ಈ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಗಾಳಿಪಟದ ಹಗ್ಗದೊಂದಿಗೆ ಹಾರಿ ಹೋದ ವ್ಯಕ್ತಿ: ವೀಡಿಯೋ ವೈರಲ್​
ವೀಡಿಯೋದಿಂದ ಸೆರೆಹಿಡಿದ ಚಿತ್ರ
Edited By:

Updated on: Dec 25, 2021 | 5:12 PM

ಕೆಲವು ದಿನಗಳ ಹಿಂದೆ ಪ್ಯಾರಾಚೂಟ್​ನಿಂದ ಇಬ್ಬರು ಮಹಿಳೆಯರು ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ವೀಡಿಯೋ ವೈರಲ್​ ಆಗಿತ್ತು. ಇದೀಗ ವ್ಯಕ್ತಿಯೊಬ್ಬ ಗಾಳಿಪಟದ ದಾರದೊಂದಿಗೆ ಹಾರಿ ಹೋಗಿ  ಕೆಲವು ಸೆಕೆಂಡುಗಳ ಗಾಳಿಯಲ್ಲಿ ಹಾರಾಡಿ ನಂತರ ನೆಲಕ್ಕೆ ಬಿದ್ದ  ವೀಡಿಯೋ ವೈರಲ್​ ಅಗಿದೆ. ಹೌದು ನೀವು ಓದಿದ್ದು ನಿಜ ಇಲ್ಲೊಬ್ಬ ವ್ಯಕ್ತಿ ಗಾಳಿಪಟ ಹಾರಿಸುತ್ತಿದ್ದಾಗ ಸೆಣಬಿನ ದಾರ ಹಿಡಿದುಕೊಂಡಿದ್ದ. ಆದರೆ ಗಾಳಿ ಬಲವಾಗಿ ಬೀಸಿದ ಕಾರಣ ಗಾಳಿಪಟದಂತೆ ಹಗ್ಗ ಹಿಡಿದ ವ್ಯಕ್ತಿಯೂ ಹಾರಿಹೋದ ವಿಲಕ್ಷಣ ಘಟನೆ ನಡೆದಿದೆ. ಈ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವೀಡಿಯೋದಲ್ಲಿ ಗಾಳಪಟದಂತೆ ವ್ಯಕ್ತಿ ತೂಗಾಡುತ್ತಿರುವುದು ಕಾಣಬಹುದು. ವರದಿಯ ಪ್ರಕಾರ, ಸೆಣಬಿನ ದಾರದಲ್ಲಿ ಗಾಳಿಪಟವನ್ನು ಕಟ್ಟಲು ವ್ಯಕ್ತಿ ದಾರವನ್ನು ಹಿಡಿದುಕೊಂಡಿದ್ದರು. ಆದರೆ ಅವನ ಹಿಂದೆ ನಿಂತಿದ್ದ ಕೆಲವು ಹುಡುಗರು ದಾರವನ್ನು ಕೈಬಿಟ್ಟಿದ್ದಾರೆ. ಈ ವೇಳೆ ಗಾಳಿ ಜೋರಾಗಿ ಬೀಸಿದೆ ಇದರಿಂದ ಹಗ್ಗದ ಜತೆಗೆ ವ್ಯಕ್ತಿಯೂ ಹಾರಿಹೋಗಿದ್ದಾನೆ. ಇದರಿಂದ ಗಾಬರಿಗೊಂಡ ಹುಡುಗರು ಕೆಳಗಿರುವ ದಾರವನ್ನು ಹಿಡಿದು ಎಳೆದು ಮರಕ್ಕೆ ಕಟ್ಟಿದ್ದಾರೆ. ಇದರಿಂದ ದಾರ ಹಿಡಿದಿದ್ದ ವ್ಯಕ್ತಿ ನಿಧಾನವಾಗಿ ಕೆಳಗೆ ಬಂದಿದ್ದಾನೆ. ಆದರೆ ಪೂರ್ತಿಯಾಗಿ ದಾರ ಕೆಳಗೆ ಬರುವ ಮೊದಲೇ ವ್ಯಕ್ತಿ ದಾರವನ್ನು ಕೈಬಿಟ್ಟಿದ್ದು ನೆಲಕ್ಕೆ ಬಿದ್ದಿದ್ದಾರೆ. ನೆಲಕ್ಕೆ ಬಿದ್ದ ವೇಳೆ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್​ ಆಗಿದೆ. ಭಯಾನಕ ವೀಡಿಯೋ ನೋಡಿ ನೆಟ್ಟಿಗರು ಕೂಡ ಗಾಬರಿಯಾಗಿದ್ದಾರೆ.  ಒಂದು ವಾರದ ಹಿಂದೆ ಶ್ರೀಲಂಕಾ ಮಾಧ್ಯಮಗಳು ಈ ವಿಡಿಯೋವನ್ನು ಪ್ರಸಾರ ಮಾಡಿವೆ. ಆ ಬಳಿಕ ವಿಶ್ವದಾದ್ಯಂತ ವೀಡಿಯೋ ವೈರಲ್​ ಆಗಿದೆ.

ನಾಯಿಯನ್ನು ಕ್ರಿಸ್​ಮಸ್​ ಗಿಫ್ಟ್​ನಂತೆ ಪ್ಯಾಕ್​ ಮಾಡಿದ ಮಾಲೀಕ: ಕ್ಯೂಟ್​ ಡಾಗ್​ ವೀಡಿಯೋ ವೈರಲ್​​