ಹಾರುತ್ತಿದ್ದ ವಿಮಾನದ ಕಾಕ್​ಪಿಟ್​ಗೆ ನುಗ್ಗಿ ಬಾಗಿಲು ತೆಗೆಯಲು ಯತ್ನಿಸಿದ ಪ್ರಯಾಣಿಕ: ವಿಡಿಯೋ ವೈರಲ್​

| Updated By: Pavitra Bhat Jigalemane

Updated on: Feb 19, 2022 | 9:36 AM

ಸುಮಾರು 30 ಸಾವಿರಕ್ಕೂ ಹೆಚ್ಚು ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲನ್ನೆ ತೆರೆಯಲು ಯತ್ನಿಸಿದ್ದಾನೆ. ಇದರಿಂದ ವಿಮಾನವನ್ನು ಟೆಕ್ಸಾಸ್​ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್​ ಮಾಡಲಾಗಿದೆ.

ಹಾರುತ್ತಿದ್ದ ವಿಮಾನದ ಕಾಕ್​ಪಿಟ್​ಗೆ ನುಗ್ಗಿ ಬಾಗಿಲು ತೆಗೆಯಲು ಯತ್ನಿಸಿದ ಪ್ರಯಾಣಿಕ: ವಿಡಿಯೋ ವೈರಲ್​
ವಿಮಾನ
Follow us on

ಟೇಕ್​ಆಪ್​ ಆದ ವಿಮಾನದಲ್ಲಿ(Flight) ಪ್ರಯಾಣಿಕನೊಬ್ಬ ಕಾಕ್​ಪಿಟ್(Cockpit)​ ಪ್ರವೇಶಿಸಿ ಹಾರುತ್ತಿದ್ದ ವಿಮಾನದ ಬಾಗಿಲನ್ನು ತೆಗೆಯಲು ಯತ್ನಿಸಿದ ಘಟನೆ ಅಮೆರಿಕನ್​ ಏರ್​ಲೈನ್ಸ್​​ ವಿಮಾನದಲ್ಲಿ ನಡೆದಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲನ್ನು ತೆರೆಯಲು ಯತ್ನಿಸಿದ್ದಾನೆ. ಇದರಿಂದ ವಿಮಾನವನ್ನು ಕಾನ್ಸಾಸ್​ನಲ್ಲಿ (Kansas) ಎಮರ್ಜೆನ್ಸಿ ಲ್ಯಾಂಡಿಂಗ್​ ಮಾಡಲಾಗಿದೆ. ಸದ್ಯ ವಿಮಾನದಲ್ಲಿ ಅಶಿಸ್ತು ಪ್ರದರ್ಶಿಸಿದ ಪ್ರಯಾಣಿಕನನ್ನು ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

1775 ಸಂಖ್ಯೆ ವಿಮಾನ ಲಾಸ್​ ಎಂಜಲೀಸ್​ನಿಂದ ವಾಷಿಂಗ್ಟನ್​ಗೆ ಪ್ರಯಾಣಿಸುತ್ತಿತ್ತು. ಪ್ರಯಾಣಿಕನ ಅಶಿಸ್ತು ವರ್ತನೆಯಿಂದ ಮಧ್ಯದಲ್ಲಿಯೇ ಏಮರ್ಜೆನ್ಸಿ ಲ್ಯಾಂಡಿಂಗ್​ ಮಾಡಲಾಗಿದೆ. ವಿಮಾನದಲ್ಲಿ ಆತ ಕಾಕ್​ಪಿಟ್​ಗೆ ಪ್ರವೇಶಿಸಿ ಬಾಗಿಲನ್ನು ತೆರೆಯುತ್ತಿರುವ ದೃಶ್ಯವನ್ನು ಸಹಪ್ರಯಾಣಿಕರು ಸೆರೆಹಿಡಿದಿದ್ದು, ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ಇದೀಗ ವೈರಲ್​ ಆಗಿದೆ. ಈ ಕುರಿತು ಫೆಡರಲ್​ ಬ್ಯೂರೂ ಇನ್ವೆಸ್ಟಿಗೇಷನ್​ ಅಧಿಕಾರಿಗಳು ಘಟನೆಯನ್ನು ದೃಢೀಕರಿಸಿದ್ದು ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:

ಸಮುದ್ರದ ಮಧ್ಯೆ ಧಗಧಗನೆ ಹೊತ್ತಿ ಉರಿಯಿತು ಲ್ಯಾಂಬೋರ್ಗಿನಿ, ಆಡಿ ಸೇರಿ ಸಾವಿರಾರು ಕಾರುಗಳಿದ್ದ ಹಡಗು!