ಇಂದಿನ ಕಾಲದಲ್ಲಿ ವಿಚ್ಛೇದನದ ಸಂಖ್ಯೆ ಬಹಳ ಹೆಚ್ಚಾಗುತ್ತಿದೆ. ಆಸ್ತಿ, ಹಣ ಕಸಿದುಕೊಳ್ಳುವ ಸಲುವಾಗಿಯೂ ಡಿವೋರ್ಸ್ ಪಡೆದುಕೊಳ್ಳುವವರಿದ್ದಾರೆ. ಹೀಗೆ ಪತಿ ಪತ್ನಿಯರ ನಡುವೆ ಡಿವೋರ್ಸ್ ಆದ್ರೆ ಪತಿಯಾದವನು ಮಾಜಿ ಪತ್ನಿಗೆ ಇಂತಿಷ್ಟು ಜೀವನಾಂಶ ನೀಡಬೇಕು ಎಂಬ ಕಾನೂನು ಇದೆ. ನಿಜಕ್ಕೂ ಈ ಕೆಲವು ಕಾನೂನುಗಳು ಕೆಲ ಅಮಾಯಕ ಪುರುಷರನ್ನು ಕಷ್ಟಕ್ಕೆ ತಳ್ಳುತ್ತವೆ ಮತ್ತು ಅವರನ್ನು ಶೋಷಿಸುತ್ತಿವೆ ಎಂದು ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ.
ವ್ಯಕ್ತಿಯೊಬ್ಬರು ಪತ್ನಿಯ ಕ್ರೌರ್ಯದಿಂದ ಬೇಸತ್ತು, 2014 ರಲ್ಲಿ ಕಾನೂನು ಹೋರಾಟಕ್ಕೆ ಇಳಿದು ಕೊನೆಗೂ ಇದೀಗ ಪತ್ನಿಯ ಕ್ರೌರ್ಯತೆಯ ಆಧಾರದ ಮೇಲೆ ಡಿವೋರ್ಸ್ ಪಡೆದುಕೊಂಡಿದ್ದಾರೆ. ಆದ್ರೆ ಮಕ್ಕಳಿಲ್ಲದಿದ್ದರೂ, ಆಕೆ ತಿಂಗಳಿಗೆ 60 ಸಾವಿರ ಸಂಪಾದನೆ ಮಾಡಿ, ಆರ್ಥಿಕವಾಗಿ ಸಬಲೆಯಾಗಿದ್ದರೂ ಅಕೆಗೆ 30 ಲಕ್ಷ ರೂಪಾಯಿ ಜೀವನಾಂಶ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.
ದೀಪಿಕಾ ನಾರಾಯಣ ಭಾರದ್ವಾಜ್ (DeepikaBhardwaj) ಎಂಬವರು ಈ ಕುರಿತ ವಾಟ್ಸಾಪ್ ಚಾಟ್ ಸ್ಕ್ರೀನ್ ಶಾಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, ಈ ವ್ಯಕ್ತಿ 10 ವರ್ಷಗಳ ಕಾನೂನು ಹೋರಾಟ ಮಾಡಿ ಕೊನೆಗೂ ಪತ್ನಿಯ ಕ್ರೌರ್ಯತೆಯ ಆಧಾರದ ಮೇಲೆ ಡಿವೋರ್ಸ್ ಪಡೆದುಕೊಂಡ. ಆದ್ರೆ ಆತನ ಮಾಜಿ ಪತ್ನಿ ತಿಂಗಳಿಗೆ 60 ಸಾವಿರ ದುಡಿದರೂ ಆಕೆಗೆ 30 ಲಕ್ಷ ರೂಪಾಯಿ ಜೀವನಾಂಶ ಕೊಡಬೇಕಂತೆ. ಮಹಿಳೆಯರ ಸಬಲೀಕರಣಕ್ಕಾಗಿ ರಚಿಸಲಾದ ಕಾನೂನುಗಳು ಪುರುಷರನ್ನು ದುರ್ಬಲಗೊಳಿಸುತ್ತಿವೆ ಮತ್ತು ಶೋಷಿಸುತ್ತಿವೆ ಎಂದು ಸುದೀರ್ಘ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಈ ಮೂಲಕ ಪುರುಷರಿಗೂ ಸಮಾನ ನ್ಯಾಯವನ್ನು ನೀಡಬೇಕು ಎಂಬುದನ್ನು ಕೇಳಿಕೊಂಡಿದ್ದಾರೆ.
He fought for 10 years
Won Divorce on grounds of Cruelty
His wife earns 60K per month
He still has to pay her 30 Lacs AlimonyLaws that were made to empower women being used to disempower and exploit men
Looking at such cases we question why to ask someone to fight 😏 pic.twitter.com/XyOPNK66IP
— Deepika Narayan Bhardwaj (@DeepikaBhardwaj) October 8, 2024
ವೈರಲ್ ಫೋಟೋದಲ್ಲಿ ಡಿವೋರ್ಸ್ ಪಡೆದುಕೊಂಡ ವ್ಯಕ್ತಿ, ಕೊನೆಗೂ 2014 ರಲ್ಲಿ ಆರಂಭವಾದ ಕಾನೂನು ಹೋರಾಟದಲ್ಲಿ ಗೆದ್ದು, ಪತ್ನಿಯಿಂದ ಡಿವೋರ್ಸ್ ಪಡೆದುಕೊಂಡಿದ್ದೇನೆ. ಆಕೆ ತಿಂಗಳಿಗೆ 60 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದರೂ, ಆಕೆಗೆ ನಾನು 30 ಲಕ್ಷ ಜೀವನಾಂಶ ಕೊಡಬೇಕೆಂದು ಕೋರ್ಟ್ ಆದೇಶಿಸಿದೆ ಎಂದು ಹೇಳುವ ವಾಟ್ಸಾಪ್ ಸಂಭಾಷಣೆಯ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಇಂಗ್ಲೀಷ್ ಪದವನ್ನು 8 ಸೆಕೆಂಡುಗಳಲ್ಲಿ ಕಂಡುಹಿಡಿಯಬಲ್ಲಿರಾ?
ಅಕ್ಟೋಬರ್ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 58 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼ10 ವರ್ಷ ಹೋರಾಡಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಾಬೀತಾಗಿ ಪತ್ನಿಯಿಂದ ಡಿವೋರ್ಸ್ ಪಡೆದುಕೊಂಡ್ರೂ ಜೀವನಾಂಶ ನೀಡಬೇಕೇ? ಹಾಗಾದ್ರೆ ಪುರುಷರ ಪರವಾಗಿ ಯಾವುದೇ ಕಾನೂನು ಇಲ್ವೇʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದು ತುಂಬಾ ಭಯಾನಕವಾಗಿದೆ, ಕಾನೂನು ಕೂಡಾ ಏಕಪಕ್ಷೀಯವಾಗಿದೆʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ