Viral Video: ಸಗಣಿ ತಿಂದು, ಎಲ್ಲರಿಗೂ ಸಗಣಿ ತಿನ್ನಲು ಸಲಹೆ ನೀಡಿದ ಡಾಕ್ಟರ್..!

| Updated By: ಝಾಹಿರ್ ಯೂಸುಫ್

Updated on: Nov 18, 2021 | 9:59 PM

Viral News: ಹಸುವಿನ ಸಗಣಿಯು ಮನುಷ್ಯನ ದೇಹ ಮತ್ತು ಆತ್ಮವನ್ನು ಶುದ್ದೀಕರಿಸುತ್ತದೆ ಎಂದಿರುವ ಡಾ. ಮನೋಜ್ ಮಿತ್ತಲ್, ಸಾಮಾನ್ಯ ಹೆರಿಗೆಗಾಗಿ ಮಹಿಳೆಯರು ಸಗಣಿ ಸೇವಿಸುವುದು ಉತ್ತಮ ಎಂದು ತಿಳಿಸಿದ್ದಾರೆ.

Viral Video: ಸಗಣಿ ತಿಂದು, ಎಲ್ಲರಿಗೂ ಸಗಣಿ ತಿನ್ನಲು ಸಲಹೆ ನೀಡಿದ ಡಾಕ್ಟರ್..!
ಡಾ. ಮನೋಜ್ ಮಿತ್ತಲ್
Follow us on

ವೈದ್ಯರು ನಿಮಗೆ ಸಗಣಿ ತಿನ್ನಲು ಹೇಳಿದರೆ ಹೇಗಿರಬಹುದು..? ಹೀಗೆ ಹೇಳಲ್ಲ ಎಂದು ನೀವು ಅಂದುಕೊಳ್ಳುವುದಾದರೆ, ಇಲ್ಲೊಬ್ಬರು ವೈದ್ಯರು ಈಗಾಗಲೇ ಸೋಷಿಯಲ್ ಮೀಡಿಯಾ ಮೂಲಕ ಸಗಣಿ ತಿನ್ನಲು ಹೇಳಿ ಸುದ್ದಿಯಾಗಿದ್ದಾರೆ. ಅದು ಕೂಡ ಗರ್ಭಿಣಿಯರು ತಿನ್ನಬೇಕೆಂದು ವಿಶೇಷ ಸೂಚನೆ ನೀಡಿದ್ದಾರೆ. ಹರಿಯಾಣದ ಕರ್ನಾಲ್ ಮೂಲದ ವೈದ್ಯ ಮನೋಜ್ ಮಿತ್ತಲ್ ಗರ್ಭಿಣಿಯರು ಸಗಣಿ ತಿನ್ನುವುದರಿಂದ ಸಾಮಾನ್ಯ ಹೆರಿಗೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಹಸುವಿನ ಸಗಣಿಯು ಮನುಷ್ಯನ ದೇಹ ಮತ್ತು ಆತ್ಮವನ್ನು ಶುದ್ದೀಕರಿಸುತ್ತದೆ ಎಂದಿರುವ ಡಾ. ಮನೋಜ್ ಮಿತ್ತಲ್, ಸಾಮಾನ್ಯ ಹೆರಿಗೆಗಾಗಿ ಮಹಿಳೆಯರು ಸಗಣಿ ಸೇವಿಸುವುದು ಉತ್ತಮ ಎಂದು ತಿಳಿಸಿದ್ದಾರೆ. ಅಷ್ಟೇ ಮಾತನಾಡುತ್ತಾ ಖುದ್ದು ಸಗಣಿ ತಿಂದು ಕೂಡ ತೋರಿಸಿದ್ದಾರೆ. ಗೋಮೂತ್ರವನ್ನು ಕುಡಿಯುವುದು ಮತ್ತು ಗೋವಿನ ಸಗಣಿ ತಿನ್ನುವುದರಿಂದ ಅನೇಕ ಗಂಭೀರ ಕಾಯಿಲೆಗಳು ದೂರವಿಡಬಹುದು ಎಂದು ತಿಳಿಸಿದ್ದಾರೆ.

‘ಗೋವಿನಿಂದ ಪಂಚಗವ್ಯದ ಪ್ರತಿಯೊಂದು ಭಾಗವೂ ಮನುಕುಲಕ್ಕೆ ಅತ್ಯಮೂಲ್ಯವಾಗಿದೆ’ ಎಂದು ವಿಡಿಯೋದಲ್ಲಿ ಹೇಳಿರುವ ಡಾ. ಮನೋಜ್, ಗೋವಿನ ಸಗಣಿ ತಿಂದರೆ ನಮ್ಮ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ. ನಮ್ಮ ಆತ್ಮ ಕೂಡ ಶುದ್ಧವಾಗುತ್ತದೆ. ಅದು ನಮ್ಮ ದೇಹವನ್ನು ಪ್ರವೇಶಿಸಿದ ನಂತರ, ಅದು ನಮ್ಮ ದೇಹವನ್ನು ಒಂದು ರೀತಿಯಲ್ಲಿ ಶುದ್ಧೀಕರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಅನೇಕರು ಚಿತ್ರ ವಿಚಿತ್ರವಾಗಿ ಕಮೆಂಟಿಸಿದ್ದಾರೆ. ಅದರಲ್ಲೊಬ್ಬರು ಮೊದಲ ಈತನ ಎಂಬಿಬಿಎಸ್​ ಪದವಿಯನ್ನು ಇನ್ನೊಮ್ಮೆ ಪರಿಶೀಲಿಸುವಂತೆ ಭಾರತೀಯ ವೈದ್ಯಕೀಯ ಸಂಸ್ಥೆಗೆ ಮನವಿ ಮಾಡಿರುವುದು ವಿಶೇಷ. ಒಟ್ಟಿನಲ್ಲಿ ಡಾಕ್ಟರ್​ರೊಬ್ಬರು ಸಗಣಿ ತಿನ್ನಲು ಹೇಳಿ ಇದೀಗ ವಿಶ್ವ ಪ್ರಸಿದ್ಧಿ ಪಡೆದಿದ್ದಾರೆ.

ಇದನ್ನೂ ಓದಿ: Mahindra Roxor: ಮಹೀಂದ್ರಾ ರೋಕ್ಸರ್: ಜಬರ್ದಸ್ತ್ ಎಸ್​ಯುವಿ ಬಿಡುಗಡೆ

ಇದನ್ನೂ ಓದಿ: 18 GB RAM, 1000 GB ಸ್ಟೋರೇಜ್‌: ದಾಖಲೆ ನಿರ್ಮಿಸಲಿದೆ ಹೊಸ ಸ್ಮಾರ್ಟ್​ಫೋನ್

ಇದನ್ನೂ ಓದಿ: IPL 2022: ರಾಜಸ್ಥಾನ್ ರಾಯಲ್ಸ್​ ತಂಡದಿಂದ ಪ್ರಮುಖ ಆಟಗಾರ ಔಟ್: ಬೇರೆ ತಂಡಕ್ಕೆ ನಾಯಕ?

(Mbbs doctor eating cow dung goes viral social media users reacted)