Men Not Allowed: ಭಾರತದ ಈ ದೇವಾಲಯಗಳಿಗೆ ಪುರುಷರಿಗೆ ಪ್ರವೇಶವಿಲ್ಲ

|

Updated on: Jan 31, 2024 | 12:22 PM

ಸಾಮಾನ್ಯವಾಗ ಮಹಿಳೆಯರಿಗೆ ಕೆಲವು ದೇವಾಲಯಗಳಿಗೆ ಪ್ರವೇಶವಿಲ್ಲ ಎಂಬುದನ್ನು ನೀವು ಕೇಳಿರುತ್ತೀರಿ. ಆದರೆ ಎಂದಾದರೂ ಪುರುಷರಿಗೆ ಪ್ರವೇಶವಿಲ್ಲದ ದೇವಾಲಗಳ ಬಗ್ಗೆ ಕೇಳಿದ್ದೀರಾ? ಭಾರತದ ಕೆಲವು ದೇವಾಲಯಗಳಿಗೆ ಮಹಿಳೆಯರಿಗೆ ಮಾತ್ರ ಪ್ರವೇಶಿಸಲು ಅವಕಾಶವಿದ್ದು,ಪುರುಷರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

Men Not Allowed: ಭಾರತದ ಈ ದೇವಾಲಯಗಳಿಗೆ ಪುರುಷರಿಗೆ ಪ್ರವೇಶವಿಲ್ಲ
Men Not Allowed
Image Credit source: Pinterest
Follow us on

ಕೆಲವು ವರ್ಷಗಳ ಹಿಂದೆ ಶಬರಿಮಲೆ ವಿವಾದ ಸಂಭವಿಸಿದಾಗ ಹಲವಾರು ಪ್ರತಿಭಟನೆಗಳು ಮತ್ತು ಪ್ರಕರಣಗಳು ನಡೆದವು. ಕಟ್ಟಾ ಸ್ತ್ರೀವಾದಿಗಳಿಂದ ಹಿಡಿದು ಸಮಾನತೆಯ ಬೆಂಬಲಿಗರವರೆಗೂ ಈ ಕೂಗು ಜೋರಾಗಿ ಕೇಳಿಬರುತ್ತಿತ್ತು. ಸಾಮಾನ್ಯವಾಗ ಮಹಿಳೆಯರಿಗೆ ಕೆಲವು ದೇವಾಲಯಗಳಿಗೆ ಪ್ರವೇಶವಿಲ್ಲ ಎಂಬುದನ್ನು ನೀವು ಕೇಳಿರುತ್ತೀರಿ. ಆದರೆ ಎಂದಾದರೂ ಪುರುಷರಿಗೆ ಪ್ರವೇಶವಿಲ್ಲದ ದೇವಾಲಯಗಳ ಬಗ್ಗೆ ತಿಳಿದಿದ್ದೀರಾ? ಭಾರತದ ಕೆಲವು ದೇವಾಲಯಗಳಿಗೆ ಮಹಿಳೆಯರಿಗೆ ಮಾತ್ರ ಪ್ರವೇಶಿಸಲು ಅವಕಾಶವಿದ್ದು,ಪುರುಷರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆ ದೇವಾಯಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಪುರುಷರಿಗೆ ಪ್ರವೇಶವಿಲ್ಲದ ದೇವಾಲಯಗಳು:

ಅಟ್ಟುಕಲ್ ಭಗವತಿ ದೇವಸ್ಥಾನ:

ಅಟ್ಟುಕಲ್ ದೇವಾಲಯವು ತಿರುವನಂತಪುರಂ ನಗರದ ಹೃದಯಭಾಗದಲ್ಲಿರುವ ಅಟ್ಟುಕಲ್‌ನಲ್ಲಿದೆ, ಆದಿಶಕ್ತಿಯ ಅವತಾರಗಳಲ್ಲಿ ಒಂದಾದ ಭದ್ರಕಾಳಿ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿ ಅಟ್ಟುಕಲ್ ಪೊಂಗಲ್​​ ಹಬ್ಬದ ಸಮಯದಲ್ಲಿ ಲಕ್ಷಾಂತರ ಮಹಿಳೆಯರು ಒಟ್ಟಾಗಿ ಸೇರುತ್ತಾರೆ.ಈ ಉತ್ಸವದ ಸಮಯದಲ್ಲಿ, ದೇವಾಲಯದ ಆವರಣದೊಳಗೆ ಪುರುಷರಿಗೆ ಪ್ರವೇಶವಿಲ್ಲ.

ಕಾಮಾಕ್ಯ ದೇವಾಲಯ:

ಕಾಮಾಕ್ಯ ದೇವಾಲಯವು ಅಸ್ಸಾಂನ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿ ದೇವಾಲಯವಾಗಿದೆ. ಈ ದೇವಾಲಯವು ಕಾಮಾಕ್ಯ ದೇವಿಯ ಋತುಚಕ್ರವನ್ನು ಮತ್ತು ಆಕೆಯ ದೈವಿಕ ಸ್ತ್ರೀಲಿಂಗ ಶಕ್ತಿಯನ್ನು ಆಚರಿಸುತ್ತದೆ. ಪ್ರತಿ ವರ್ಷ ಅಂಬುಬಾಚಿ ಮೇಳದ ಸಮಯದಲ್ಲಿ, ದೇವಾಲಯವನ್ನು ಮೂರು ದಿನಗಳವರೆಗೆ ಮುಚ್ಚಲಾಗುತ್ತದೆ ಮತ್ತು ಆ ಅವಧಿಯಲ್ಲಿ ಪುರುಷರಿಗೆ ಪ್ರವೇಶವಿರುವುದಿಲ್ಲ.

ಇದನ್ನೂ ಓದಿ: ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಆದರೆ ಹಾಗಿಲ್ಲ ಸರಿಯಾಗಿ ಗಮನಿಸಿ

ಚಕ್ಕುಲತುಕಾವು ದೇವಸ್ಥಾನ:

ಆಲಪ್ಪುಳದ ಆಗ್ನೇಯಕ್ಕೆ 30 ಕಿಮೀ ದೂರದಲ್ಲಿರುವ ಚಕ್ಕುಲತುಕಾವು ಭಗವತಿ ದೇವಸ್ಥಾನವು ಕೇರಳದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದ ವಾರ್ಷಿಕ ‘ನಾರಿ ಪೂಜೆ’ ಉತ್ಸವದಲ್ಲಿ, ಪುರುಷರು ದೇವಾಲಯದ ಪ್ರದೇಶವನ್ನು ಪ್ರವೇಶಿಸುವಂತಿಲ್ಲ.

ಸಂತೋಷಿ ಮಾತಾ ದೇವಸ್ಥಾನ:

ಸಂತೋಷಿ ಮಾತಾ ದೇವಾಲಯವು ಜೋಧಪುರ ನಗರದಿಂದ 10 ಕಿ.ಮೀ ದೂರದಲ್ಲಿರುವ ಲಾಲ್ ಸಾಗರ್‌ನಲ್ಲಿದೆ. ದೇವತೆ ಸಂತೋಷಿ ಮಾತೆಗೆ ಅರ್ಪಿತವಾಗಿರುವ ದೇವಾಲಯವಿದು. ಈ ದೇವಾಲಯದೊಳಗೆ ಪುರುಷರಿಗೆ ಪ್ರವೇಶವಿಲ್ಲ. ದಂತಕಥೆಗಳ ಪ್ರಕಾರ ಶುಕ್ರವಾರದಂದು ದೇವಾಲಯದ ಶಕ್ತಿಯು ಹೆಚ್ಚಾಗುತ್ತದೆ ಎಂದು ನಂಬಿಕೆ ಇದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ