ನಡು ರಸ್ತೆಯಲ್ಲಿ ಹೊತ್ತಿ ಉರಿದ ಕೋಟಿ ಮೌಲ್ಯದ ಮರ್ಸಿಡಿಸ್​ ಕಾರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ಎಫ್1 ರೇಸಿಂಗ್ ಟ್ರ್ಯಾಕ್‌ಗೆ ಸಮೀಪದಲ್ಲಿ ಮರ್ಸಿಡಿಸ್ ಸಿಎಲ್‌ಎ ಕಾರು ಅಪಘಾತಕ್ಕೀಡಾಗಿದ್ದು ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ನಡು ರಸ್ತೆಯಲ್ಲಿ ಹೊತ್ತಿ ಉರಿದ ಕೋಟಿ ಮೌಲ್ಯದ ಮರ್ಸಿಡಿಸ್​ ಕಾರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಪಘಾತಕ್ಕೀಡಾದ ಕಾರು
Edited By:

Updated on: Mar 15, 2022 | 11:56 AM

ದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ಎಫ್1 ರೇಸಿಂಗ್ ಟ್ರ್ಯಾಕ್‌ಗೆ ಸಮೀಪದಲ್ಲಿ ಮರ್ಸಿಡಿಸ್ ಸಿಎಲ್‌ಎ ಕಾರು ಅಪಘಾತಕ್ಕೀಡಾಗಿದ್ದು ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಕಾರಿನಲ್ಲಿದ್ದ ಚಾಲಕ ಮತ್ತು ಆತನ ಸ್ನೇಹಿತ ಕಾರಿನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಅವರು ಸುರಕ್ಷಿತವಾಗಿದ್ದಾರೆ ಎಂದು ನಿವಾಸಿಗಳು  ಹೇಳಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ 1 ಕೊಟಿ ರೂ. ಬೆಲೆಬಾಳುವ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೊ ವೈರಲ್​ ಆಗಿದೆ. ಅಪಘಾತ ಸಂಭವಿಸಿದ ಕೂಡಲೇ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.

ಘಟನೆಯ ವೇಳೆ ವಾಹನದಲ್ಲಿದ್ದ ವ್ಯಕ್ತಿಯನ್ನು ದೆಹಲಿ ನಿವಾಸಿ ನಿಖಿಲ್ ಚೌಧರಿ ಎಂದು ಗುರುತಿಸಲಾಗಿದೆ. ರಸ್ತೆ ಮಧ್ಯದಲ್ಲಿ ಪ್ರಾಣಿಯೊಂದು ಬಂದಿದ್ದರಿಂದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ ಇದರಿಂದ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಕಿಟಕಿಯನ್ನು ಹೊಡೆದು ಹೊರಗೆ ಹಾರಿಕೊಂಡು ಬಚಾವಾಗಿದ್ದೇವೆ ಎಂದು ಚೌಧರಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ತಮಗೆ ತಿಳಿದಿದ್ದರೂ ಲಿಖಿತ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಚೌದರಿ ಅವರು 10 ದಿನಗಳ ಹಿಂದೆ 1 ಕೋಟಿ ರೂ.ನೀಡಿ ಹೊಸ ಮರ್ಸಿಡಿಸ್​ ಕಾರನ್ನು ಖರೀದಿಸಿದ್ದರು ಎಂದು ಹೇಳಲಾಗಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:

ಜಿಂಕೆಯ ಮೇಲೆ ದಾಳಿ ಮಾಡಲು ಯತ್ನಿಸಿ ಸೋತ ಚಿರತೆ: ಆಮೇಲಾಗಿದ್ದೇನು? ವಿಡಿಯೋ ನೋಡಿ