Chennai: ಚೆನ್ನೈನ ಮರೀನಾ ಬೀಚಿನ ತುದಿಗಂಟಿಕೊಂಡಿರುವ ನೋಚಿಕುಪ್ಪಂನಲ್ಲಿ (Nochikuppam) ಸಾವಿರಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳು ವಾಸವಾಗಿವೆ. 2004 ರಲ್ಲಿ ಅಪ್ಪಳಿಸಿದ ಸುನಾಮಿ ಮತ್ತು 2015ರಲ್ಲಿ ಸಂಭವಿಸಿದ ಪ್ರವಾಹದಿಂದ ತತ್ತರಿಸಿ ಉಳಿದ ಅನೇಕ ಜೀವಗಳು ಇಲ್ಲಿ ಸಮುದ್ರದ ಉಬ್ಬರಿಳಿತಕ್ಕೆ ತಕ್ಕಂತೆ ಜೀಕು ಹೊಡೆಯುತ್ತಲೇ ಜೀವನ ಸಾಗಿಸುತ್ತಿವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮೆಕ್ಸಿಕನ್ ಮೂಲದ ಪಾವೊಲಾ ಡೆಲ್ಫಿನ್ (Paola Delfin) ಎಂಬ ಕಲಾವಿದೆ ಮೀನುಗಾರರ ಬದುಕಿನ ಚಿತ್ರಣವನ್ನು ಮ್ಯೂರಲ್ ಆರ್ಟ್ನಲ್ಲಿ ಬಹಳ ಆಪ್ತವಾಗಿ ಹೊಮ್ಮಿಸಿದ್ದಾರೆ.
ಈ ಕಲಾವಿದೆ ಈ ಹಿಂದೆ ದೆಹಲಿಯ ಲೋದಿ ಆರ್ಟ್ ಸ್ಟ್ರೀಟ್ನಲ್ಲಿಯೂ ಮ್ಯೂರಲ್ ಆರ್ಟ್ ಪ್ರಸ್ತುಪಡಿಸಿದ್ದರು. ಈಗ ಚೆನ್ನೈನಲ್ಲಿ. ಈ ಪರಿಸರದಲ್ಲಿ ಓಡಾಡಿ ಇಲ್ಲಿಯ ಜನರೊಂದಿಗೆ ಒಡನಾಡುತ್ತಾ ಹೋದಾಗ ಅವರು ಬಿಚ್ಚಿಟ್ಟ ನೆನಪುಗಳು, ಕನವರಿಕೆಗಳು, ಪರಿಶ್ರಮದ ಕಥೆಗಳು ಈಕೆಯ ಕಲ್ಪನೆಗೆ ತಳಹದಿಯಾಗುತ್ತಾ ಹೋದವು. ಆಳೆತ್ತರ ಕಟ್ಟಡಗಳ ಮೇಲೆ ಮೋನೋಕ್ರೋಮ್ ಶೈಲಿಯಲ್ಲಿ ಈಕೆ ಚಿತ್ರಿಸಿದ ಚಿತ್ರಗಳನ್ನು ಜನ ನಿಬ್ಬೆರಗಾಗಿ ನೋಡುತ್ತಿದ್ದಾರೆ. ನೆಟ್ಟಿಗರಂತೂ ಮತ್ತೆ ಮತ್ತೆ ಈ ವಿಡಿಯೋ ನೋಡುತ್ತಿದ್ದಾರೆ.
ಇದನ್ನೂ ಓದಿ : Viral Optical Illusion: ಬಾರ್ಬಿ; ಕಣ್ಣುಮುಚ್ಚಿ ನೋಡಿದರೆ ಮಾತ್ರ ಈ ಚಿತ್ರದೊಳಗಿನ ಪಾತ್ರ ಕಾಣುತ್ತದೆ
ಈತನಕ ಈ ವಿಡಿಯೋ ಅನ್ನು 20 ಮಿಲಿಯನ್ಗಿಂತಲೂ ಹೆಚ್ಚು ಜನ ನೋಡಿದ್ದಾರೆ. 2.7 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಪ್ರತಿಕ್ರಿಯೆಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಅನೇಕರು ಈ ಕಲಾವಿದೆಗಾಗಿ ರೆಸ್ಪೆಕ್ಟ್ ಬಟನ್ ದಯಪಾಲಿಸಿ ಎಂದಿದ್ದಾರೆ. ಒಬ್ಬಳೇ ಇಷ್ಟು ದೊಡ್ಡ ಕ್ಯಾನ್ವಾಸಿನ ಮೇಲೆ ಚಿತ್ರಿಸಿದ್ದಾಳೆಂದರೆ ಈಕೆ ಅದ್ಭುತ ಕಲಾವಿದೆಯೇ ಸೈ ಎಂದಿದ್ದಾರೆ ಕೆಲವರು.
ಇದನ್ನೂ ಓದಿ : Viral Video: ಲಂಡನ್ನ ಬೀದಿಯಲ್ಲಿ ‘ಪೆಹ್ಲಾ ನಶಾ’ 17 ಮಿಲಿಯನ್ ವೀಕ್ಷಕರನ್ನು ಸೆಳೆದ ಭಾರತೀಯ ‘ವಿಷ್’
ದೆಹಲಿಯ ಲೋದಿ ಆರ್ಟ್ ಸ್ಟ್ರೀಟ್ ಅನ್ನು ಇದು ನೆನಪಿಸುವಂತಿದೆ. ಈ ಕಲಾವಿದೆಯ ಸೃಜನಶೀಲ ಅಭಿವ್ಯಕ್ತಿಗೆ ಅಭಿನಂದನೆ ಎಂದಿದ್ದಾರೆ ಒಬ್ಬರು. ಮಹಿಳೆ ಎಂದು ಹೀಗಳೆಯುವವರೆಲ್ಲ ಎಲ್ಲಿ ಅಡಗಿಕೊಂಡಿದ್ದೀರಿ? ಬಂದು ನೋಡಿ ಒಮ್ಮೆ ಎಂದು ಸವಾಲನ್ನು ಎಸೆದಿದ್ದಾರೆ ಕೆಲವರು. ಇವರ ಬಳಿ ನಾನು ಡ್ರಾಯಿಂಗ್ ಕಲಿಯಬೇಕು. ಇವರು ಎಲ್ಲಿದ್ಧಾರೆ? ದಯವಿಟ್ಟು ತಿಳಿಸಿ ಎಂದಿದ್ದಾರೆ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:37 pm, Mon, 7 August 23