Viral Video: ಕಾಂತ ಲಗಾ: ಮುಂಬೈ ಲೋಕಲ್ ಟ್ರೇನಿನಲ್ಲಿ ಪುರುಷರ ಡ್ಯಾನ್ಸ್​​

|

Updated on: Jul 07, 2023 | 12:08 PM

Kanta Laga : 'ಪ್ರಯಾಣದ ಏಕತಾನತೆ ಮುರಿಯಲು ಧರ್ಮ ಜಾತಿ ಭಾಷೆ ಪ್ರಾಂತ್ಯ ಅಷ್ಟೇ ಏಕೆ ತಮ್ಮ ವಯಸ್ಸನ್ನೂ ಇವರು ಮರೆಯುತ್ತಾರೆ. ಇನ್ನೊಂದು ಕಂಪಾರ್ಟ್​​ಮೆಂಟಿನಲ್ಲಿ ಹೆಣ್ಣುಮಕ್ಕಳು ಏನು ಮಾಡುತ್ತಿದ್ದಾರೆ?'' ನೆಟ್ಟಿಗರ ಚರ್ಚೆ...

Viral Video: ಕಾಂತ ಲಗಾ: ಮುಂಬೈ ಲೋಕಲ್ ಟ್ರೇನಿನಲ್ಲಿ ಪುರುಷರ ಡ್ಯಾನ್ಸ್​​
ಕಾಂತ ಲಗಾ ಹಾಡಿಗೆ ನರ್ತಿಸುತ್ತಿರುವ ಮುಂಬೈ ಲೋಕಲ್​ ರೈಲಿನ ಪ್ರಯಾಣಿಕರು
Follow us on

Mumbai Local Train: ಮುಂಬೈನ ಲೋಕಲ್ ಟ್ರೇನ್​ಗಳು​ ಹಲವಾರು ಕಥೆಗಳನ್ನು, ಸಂಗತಿಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಚಲಿಸುತ್ತಿರುತ್ತವೆ. ನಿತ್ಯದ ಏಕತಾನತೆಯನ್ನು ಮುರಿಯಲು ಪ್ರಯಾಣಿಕರು ಆಟಗಳನ್ನು, ಸೃಜನಶೀಲ ಉಪಾಯಗಳನ್ನು ಕಂಡುಕೊಳ್ಳುವುದು ಇದು ಮೊದಲೇನಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಭೋಗಿಯಲ್ಲಿರುವ ಎಲ್ಲರೂ ಸಾಮಾನ್ಯವಾಗಿ ನಡುವಯಸ್ಸಿನ ಗಂಡಸರು. ನೇಹಾ ಕಕ್ಕರ್, ಯೋಯೋ ಹನಿ ಸಿಂಗ್, ಟೋನಿ ಕಕ್ಕರ್ (Kanta Laga, ‘ಕಾಂತ ಲಗಾ’ ಆಲ್ಬಮ್​ನ ಗೀತೆಯನ್ನು ಹಾಡಿ ಡ್ಯಾನ್ಸ್ ಕೂಡ ಮಾಡಿದ್ದಾರೆ ಇವರೆಲ್ಲ. ಅದೆಷ್ಟು ಉತ್ಸಾಹ ಅವರೆಲ್ಲರಲ್ಲಿ ಪುಟಿಯುತ್ತಿದೆ ನೋಡಿ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು 1 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಇವರೆಲ್ಲರ ಉತ್ಸಾಹ ನೋಡಿ ನಮಗೂ ಕುಣಿಯಬೇಕು ಎನ್ನಿಸುತ್ತಿದೆ. ಶಿಸ್ತು, ನಾಗರಿಕತೆಯ ಹೆಸರಿನಲ್ಲಿ ಉಸಿರುಗಟ್ಟಿಸಿಕೊಂಡು ಸಾಕಾಗಿದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಇವರು ಇಲ್ಲಿ ಹೀಗೆ ನರ್ತಿಸುತ್ತಿದ್ದರೆ, ಮುಂದಿನ ಕಂಪಾರ್ಟ್​ಮೆಂಟ್​ನಲ್ಲಿರುವ ಮಹಿಳೆಯರು ಜುಟ್ಟು ಜುಟ್ಟು ಹಿಡಿದುಕೊಂಡು ಜಗಳಾಡುತ್ತಿರಬಹುದೇ? ಎಂದು ಕೊಂಕಾಡಿದ್ದಾರೆ ಒಬ್ಬರು.  ಇದಕ್ಕೆ ಪ್ರತಿಯಾಗಿ ಹೆಂಗಸರು ಹೊರಗೂ ದುಡಿಯಬೇಕು ಮನೆಯ ಒಳಗೂ ದುಡಿಯಬೇಕು. ಹೆರಿಗೆ, ಮಕ್ಕಳು ಮತ್ತು ಇಚ್ಛೆ ಇದೆಯೋ ಇಲ್ಲವೋ ಪ್ರತೀ ರಾತ್ರಿ ಗಂಡನೊಂದಿಗೆ ಸಂಭೋಗವನ್ನೂ ಮಾಡಬೇಕು ಎಂದು ವಾಸ್ತವದ ಬಗ್ಗೆ ಅರುಹಿದ್ದಾರೆ.

‘ಕಾಂತ ಲಗಾ’ ಹಾಡಿನ ಮೂಲ ವಿಡಿಯೋ ಇಲ್ಲಿದೆ.

ಇಲ್ಲಿ ಕುಣಿಯುತ್ತಿರುವ ಗಂಡಸರೆಲ್ಲರೂ ತಮ್ಮ ಜೀವನವನ್ನು ಆನಂದಿಸುವ ಮನೋಭಾವದವರು, ಹೀಗೆ ಕುಣಿದು ಇತರರಿಗೂ ಸಂತೋಷ ಹಂಚುವವರು ಎಂದು ಒಬ್ಬರು ಹೇಳಿದ್ದಾರೆ. ಇದನ್ನೇ ಹೆಣ್ಣುಮಕ್ಕಳು ಮಾಡಿದರೆ, ಅದನ್ನೇಕೆ ಒಪ್ಪುವುದಿಲ್ಲ? ಎಂದು ಪ್ರತಿಯಾಗಿ ಪ್ರಶ್ನಿಸಿದ್ದಾರೆ ಮತ್ತೊಬ್ಬರು. ಈ ಪೀಳಿಗೆಯು ಹೆಡ್​ಫೋನಿಗಂಟಿಕೊಂಡಿಲ್ಲ ಎನ್ನುವುದೇ ಖುಷಿಯ ವಿಷಯ! ಎಂದಿದ್ದಾರೆ ಮಗದೊಬ್ಬರು. ಇದಕ್ಕೆ ಪ್ರತಿಯಾಗಿ ಒಬ್ಬರು, ಇವರೆಲ್ಲ 30-40 ವರ್ಷಗಳ ತನಕ ಲೋಕಲ್​ ಟ್ರೈನಿನಲ್ಲಿ ಸುಟ್ಟುಹೋಗಿದ್ದಾರೆ. ಅದಕ್ಕೇ ಈ ಹಾದಿಯನ್ನು ಕಂಡುಕೊಂಡಿದ್ದಾರೆ ಎಂದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:02 pm, Fri, 7 July 23