Viral Video: ಕೈಯಲ್ಲಿ ಬ್ರಶ್​ ಹಿಡಿದು ಬಟ್ಟೆ ತೊಳೆಯುತ್ತಿರುವ ಮಂಗನನ್ನು ನೋಡಿ! ಕೋತಿ ಚೇಷ್ಟೆಗೆ ನೆಟ್ಟಿಗರು ಫಿದಾ

ಪ್ರಾಣಿಗಳ ತುಂಟಾಟಗಳನ್ನು ಯಾರು ಇಷ್ಟಪಡುವುದಿಲ್ಲ ಹೇಳಿ? ಮೂಕ ಪ್ರಾಣಿಗಳು ತಮ್ಮದೇ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾ, ತುಂಟಾಟಗಳನ್ನು ಆಡುತ್ತಾ ತಮಾಷೆಯಾಗಿ ವರ್ತಿಸುವುದು ಎಲ್ಲರ ಮುಖದಲ್ಲಿ ನಗುತರಿಸುತ್ತದೆ.

Viral Video: ಕೈಯಲ್ಲಿ ಬ್ರಶ್​ ಹಿಡಿದು ಬಟ್ಟೆ ತೊಳೆಯುತ್ತಿರುವ ಮಂಗನನ್ನು ನೋಡಿ! ಕೋತಿ ಚೇಷ್ಟೆಗೆ ನೆಟ್ಟಿಗರು ಫಿದಾ
ಕೈಯಲ್ಲಿ ಬ್ರಶ್​ ಹಿಡಿದು ಬಟ್ಟೆ ತೊಳೆಯುತ್ತಿರುವ ಮಂಗ

Updated on: May 17, 2021 | 3:59 PM

ಪ್ರಾಣಿಗಳ ತುಂಟಾಟಗಳನ್ನು ಯಾರು ಇಷ್ಟಪಡುವುದಿಲ್ಲ ಹೇಳಿ? ಮೂಕ ಪ್ರಾಣಿಗಳು ತಮ್ಮದೇ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾ, ತುಂಟಾಟಗಳನ್ನು ಆಡುತ್ತಾ ತಮಾಷೆಯಾಗಿ ವರ್ತಿಸುವುದು ಎಲ್ಲರ ಮುಖದಲ್ಲಿ ನಗುತರಿಸುತ್ತದೆ. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮನುಷ್ಯರಂತೆಯೇ ಕೈಯಲ್ಲಿ ಬ್ರಶ್​ ಹಿಡಿದು ಕೋತಿ ಬಟ್ಟೆ ತೊಳೆಯುತ್ತಿದೆ. ವಿಡಿಯೋ ಇದೆ ನೀವೂ ನೋಡಿ.

ವಿಡಿಯೋದಲ್ಲಿ ಗಮನಿಸುವಂತೆ ದೇಶಿ ಶೈಲಿಯಲ್ಲಿ ಕೋತಿಯು ಬಟ್ಟೆ ತೊಳೆಯುತ್ತದೆ. ಸೋಪ್​ ಪೌಡರ್​ನಿಂದ ಮಿಶ್ರಿತವಾದ ನೀರಿನಲ್ಲಿ ಬಟ್ಟೆಯನ್ನು ನೆನೆಸಿಕೊಂಡು ಬ್ರಶ್​ ಹಿಡಿದು ಬಟ್ಟೆಯನ್ನು ಉಜ್ಜುತ್ತದೆ. ದೇಶಿ ಶೈಲಿಯಲ್ಲಿ ಬಟ್ಟೆ ತೊಳೆಯುವ ಕೋತಿಯ ವಿಡಿಯೋ ಇದೀಗ ವೈರಲ್ ಆಗಿದೆ.

ವಿಡಿಯೋ ಪೋಸ್ಟ್​ ಆದ ಬಳಿಕ ಸುಮಾರು 96,000 ವೀಕ್ಷಣೆಗಳು ಬಂದಿವೆ. ತಮಾಷೆ ವಿಡಿಯೋಗಳನ್ನು ಜನರು ಹೆಚ್ಚು ಇಷ್ಟಪಟ್ಟಿದ್ದು, ವಿಡಿಯೋ ಕುರಿತಾದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ‘ಮಾನವರು ಬಟ್ಟೆ ತೊಳೆಯುವುದನ್ನು ಈ ಕೋತಿಯು ನೋಡಿದೆ. ಹಾಗಾಗಿ ಅದನ್ನೇ ನಕಲಿಸುತ್ತಿದೆ’ ಎಂದು ಓರ್ವರು ಕಾಮೆಂಟ್​ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಬೈಕ್​ಗಳ ನಡುವೆ ಅಪಘಾತ; 10 ಅಡಿ ಎತ್ತರ ಹಾರಿ ಬಿದ್ದ ಸವಾರನ ವಿಡಿಯೋ ವೈರಲ್