AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಳೆಯಲ್ಲಿ ಒದ್ದೆಯಾಗದಂತೆ ಕರುವನ್ನು ರಕ್ಷಿಸಿದ ಹಸು, ಇದೇ ನೋಡಿ ತಾಯಿ ಪ್ರೀತಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಪ್ರಾಣಿಗಳೇ ಇರಲಿ, ಮನುಷ್ಯರೇ ಇರಲಿ ತಾಯಿ ಪ್ರೀತಿ ಒಂದೇ ಅಲ್ಲವೇ ಎಂದೆನಿಸುತ್ತದೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮಳೆಯಲ್ಲಿ ಒದ್ದೆಯಾಗುತ್ತಿದ್ದ ತನ್ನ ಕಂದಮ್ಮನಿಗೆ ಆಸರೆಯಾಗಿದೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮಳೆಯಲ್ಲಿ ಒದ್ದೆಯಾಗದಂತೆ ಕರುವನ್ನು ರಕ್ಷಿಸಿದ ಹಸು, ಇದೇ ನೋಡಿ ತಾಯಿ ಪ್ರೀತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Sep 04, 2026 | 11:05 AM

Share

ತಾಯಿ ಪ್ರೀತಿನೇ (mother love) ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಪ್ರಾಣಿಗಳು ಹೊರತಾಗಿಲ್ಲ. ಮಾತು ಬಾರದ ಪ್ರಾಣಿಗಳು ತನ್ನ ಕಂದಮ್ಮಗಳನ್ನು ಎಷ್ಟು ಕೇರ್ ಮಾಡುತ್ತವೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಮಳೆಯಲ್ಲಿ ನೆನೆಯುತ್ತಿದ್ದ ಕರುವಿಗೆ ಹಸುವೊಂದು ಆಸರೆಯಾಗಿ ನಿಂತಿದೆ. ಕಂದಮ್ಮನನ್ನು ಹೊಟ್ಟೆಗೆ ಕೆಳಗೆ ನಿಲ್ಲಿಸಿ ಒದ್ದೆಯಾಗದಂತೆ ತಡೆದಿದೆ. ಈ ವಿಡಿಯೋ ನೋಡಿ ನೆಟ್ಟಿಗರು ನಿಷ್ಕಲ್ಮಶ ಪ್ರೀತಿಗೆ ಕರಗಿ ಹೋಗಿದ್ದಾರೆ.

ಮಳೆಯಲ್ಲಿ ಒದ್ದೆಯಾಗುತ್ತಿದ್ದ ಕರುವಿಗೆ ಹಸುವಿನ ಆಸರೆ

ಡೈಲಿ ಪೋಸ್ಟ್ ಇಂಡಿಯಾ (daily post india) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರಸ್ತೆಯಲ್ಲಿ ಮಳೆಯಲ್ಲಿ ನೆನೆಯುತ್ತಾ ಹಸು ಹಾಗೂ ಕರು ನಿಂತಿದೆ. ಆದರೆ ಹಸುವು ತನ್ನ ಕರುವು ಒದ್ದೆಯಾಗದಂತೆ ತನ್ನ ಹೊಟ್ಟೆ ಕೆಳಭಾಗದಲ್ಲಿ ಮಳೆ ನೀರು ಬೀಳದಂತೆ ನಿಲ್ಲಿಸಿಕೊಂಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by @dailypostindia

ಇದನ್ನೂ ಓದಿ: ಸಹವಾಸ ದೋಷ ಅಂದ್ರೆ ಇದೇ ಇರ್ಬೇಕು; ಹಸುವಿನ ಜತೆ ಸೇರಿ ಹುಲ್ಲು ತಿಂದ ಶ್ವಾನ

ಈ ವಿಡಿಯೋ ಹದಿಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದಯವಿಟ್ಟು ಪ್ರಾಣಿಗಳನ್ನು ರಕ್ಷಿಸಿ ಎಂದಿದ್ದಾರೆ. ಇನ್ನೊಬ್ಬರು, ತಾಯಿ ಪ್ರೀತಿ ಕಾಳಜಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮಾತು ಬಾರದ ಪ್ರಾಣಿಗಳಿಗೂ ಎಷ್ಟು ಬುದ್ಧಿ ಇದೆ ಎಂದು ಕಾಮೆಂಟ್ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us