AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸಹವಾಸ ದೋಷ ಅಂದ್ರೆ ಇದೇ ಇರ್ಬೇಕು; ಹಸುವಿನ ಜತೆ ಸೇರಿ ಹುಲ್ಲು ತಿಂದ ಶ್ವಾನ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳನ್ನು ನೋಡುವಾಗ ಕೆಲವೊಮ್ಮೆ ಅಚ್ಚರಿಯಾಗುತ್ತದೆ. ಈ ವಿಡಿಯೋ ನೋಡಿದಾಗ ನಿಮ್ಗೂ ಹಾಗೆ ಅನಿಸರಬಹುದು. ಹೌದು, ಮನೆಯ ಮುದ್ದಿನ ಶ್ವಾನವೊಂದು ಹಸುವಿನ ಜತೆಗೆ ಸೇರಿ ಹುಲ್ಲು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

Video: ಸಹವಾಸ ದೋಷ ಅಂದ್ರೆ ಇದೇ ಇರ್ಬೇಕು; ಹಸುವಿನ ಜತೆ ಸೇರಿ ಹುಲ್ಲು ತಿಂದ ಶ್ವಾನ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Sep 01, 2026 | 12:42 PM

Share

ಸ್ನೇಹಿತರ ಜತೆಗೆ ಹೆಚ್ಚು ಸೇರಿದ್ರೆ ಏನಾದ್ರು ತಪ್ಪು ಮಾಡಿದ್ರೆ, ಸಹವಾಸ ದೋಷದಿಂದಲೇ ನೀನು ಹೀಗೆ ಆಗಿರೋದು ಎಂದು ಮನೆಯವರು ಹೇಳುತ್ತಾರೆ. ಈ ಮಾತು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಅನ್ವಯವಾಗುತ್ತವೆ. ಇದಕ್ಕೆ ಉದಾಹರಣೆಯಂತಿದೆ ಈ ಶ್ವಾನ (dog). ಹೌದು, ಹಸುವಿನ ಜತೆಗೆ ಶ್ವಾನವೊಂದು ಫ್ರೆಂಡ್‌ ಶಿಪ್‌ ಬೆಳೆಸಿಕೊಂಡಿದೆ.  ಹಸುವಿನ ಜೊತೆ ಸೇರಿ ಮನೆಯ ಶ್ವಾನವೊಂದು ಹುಲ್ಲು ತಿನ್ನುತ್ತಿರುವ ದೃಶ್ಯವು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಸಹವಾಸ ದೋಷ ಅಂದ್ರೆ ಇದೇ ಇರ್ಬೇಕು ಎಂದು ತಮಾಷೆ ಮಾಡಿದ್ದಾರೆ.

ಹಸುವಿನ ಜತೆಗೆ ಸೇರಿ ಹುಲ್ಲು ತಿಂದ ಮುದ್ದಿನ ಶ್ವಾನ

ಭೈರವ ಹಾಗೂ ಮಂಗಳ (Bhairava and Mangala) ಹೆಸರಿನ ಖಾತೆಯಲ್ಲಿ ಕ್ಯೂಟ್ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮನೆಯ ಮುದ್ದಿನ ಶ್ವಾನವು ಹಸುವಿನ ಜತೆಗೆ ಸ್ನೇಹ ಬೆಳೆಸಿದೆ. ಇಲ್ಲಿ ಹಸುವು  ಹುಲ್ಲು ತಿನ್ನುತ್ತಿದ್ದರೆ ಶ್ವಾನವು ಅದಕ್ಕೆ ಸಾಥ್‌ ನೀಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮನೆಮಾಲೀಕನ ಬಳಿ ಬಾಳೆಹಣ್ಣು ಬೇಕೆಂದು ಹಠ ಹಿಡಿದು ಕುಳಿತ ಮುದ್ದಿನ ಶ್ವಾನ

ಈ ವಿಡಿಯೋ ಎರಡೂ ಎಪ್ಪತ್ತೈದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನನ್ನ ಮನೆಯ ಶ್ವಾನವು ಹೀಗೆ ಹುಲ್ಲು ತಿನ್ನುತ್ತದೆ. ಹಿಂದಿನ ಜನ್ಮದಲ್ಲಿ ಈ ಶ್ವಾನವು ಹಸುವೇ ಆಗಿರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು, ನಮ್ಮ ಮನೆಯ ಬೆಕ್ಕು ಹೀಗೆಯೇ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇದು ಸಹವಾಸ ದೋಷ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:14 pm, Tue, 1 September 26

Follow Us
ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ‘ಬಿಗ್ ಬಾಸ್ ಕನ್ನಡ 13’ ಶೋ ಸ್ಪರ್ಧಿಗಳು
ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ‘ಬಿಗ್ ಬಾಸ್ ಕನ್ನಡ 13’ ಶೋ ಸ್ಪರ್ಧಿಗಳು
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ