AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮನೆಮಾಲೀಕನ ಬಳಿ ಬಾಳೆಹಣ್ಣು ಬೇಕೆಂದು ಹಠ ಹಿಡಿದು ಕುಳಿತ ಮುದ್ದಿನ ಶ್ವಾನ

ಮನೆಯ ಮುದ್ದಿನ ಶ್ವಾನಗಳು ಮಾಲೀಕನ ಜತೆಗೆ ಮಕ್ಕಳಂತೆ ಹಠ ಹಿಡಿಯುತ್ತವೆ. ಇದಕ್ಕೆ ಸಾಕ್ಷಿಯೆಂಬಂತಿದೆ ಈ ದೃಶ್ಯ. ಶ್ವಾನವೊಂದು ಮನೆ ಮಂದಿಯ ಊಟವಾದ ಬಳಿಕ ಬಾಳೆಹಣ್ಣು ಬೇಕೆಂದು ಹಠ ಹಿಡಿದು ಬೊಗಳುತ್ತಾ ಕುಳಿತಿದೆ. ಈ ಮುದ್ದಾದ ದೃಶ್ಯವು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ

Video: ಮನೆಮಾಲೀಕನ ಬಳಿ ಬಾಳೆಹಣ್ಣು ಬೇಕೆಂದು ಹಠ ಹಿಡಿದು ಕುಳಿತ ಮುದ್ದಿನ ಶ್ವಾನ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Aug 27, 2026 | 6:39 PM

Share

ಸ್ವಾಮಿ ನಿಷ್ಠೆಗೆ ಇನ್ನೊಂದು ಹೆಸರೇ ಈ ಶ್ವಾನಗಳು (Dogs). ಅವುಗಳ ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಇಲ್ಲ. ಮನೆಯಲ್ಲಿ ಯಾರಾದ್ರೂ ತಿಂಡಿ ತಿನ್ನುತ್ತಿದ್ದರೆ ತನಗೆ ಬೇಕು ಮುದ್ದಿನ ಶ್ವಾನ ತನಗೆ ಕೊಡು ಎನ್ನುವಂತೆ ಹಠ ಹಿಡಿಯುವುದನ್ನು ನೀವು ನೋಡಿರುತ್ತೀರಿ. ಆದರೆ ಈ ಶ್ವಾನಕ್ಕೆ ಬಾಳೆ ಹಣ್ಣು ಬೇಕಂತೆ. ಹೌದು, ಮನೆ ಮಾಲೀಕನ ಮುಂದೆ ಕುಳಿತು ಹಣ್ಣು ಕೊಡು ಎನ್ನುವಂತೆ  ಬೊಗಳುತ್ತಾ ಕುಳಿತ ಶ್ವಾನದ ಕ್ಯೂಟ್ ವಿಡಿಯೋ ವೈರಲ್ ಆಗಿದೆ.

ಟೈಸಾನ್ ಮೈ ಬಾಯ್ (tyson my boy) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮನೆಮಾಲೀಕನ ಸೋಫಾದ ಮೇಲೆ ಕುಳಿತುಕೊಂಡಿದ್ದಾನೆ. ಬಾಳೆ ಹಣ್ಣು ನಾಳೆ ತಂದು ಕೊಡ್ತೇನೆ, ಖಾಲಿಯಾಯ್ತು ಅಂದ್ರು ಶ್ವಾನ ಮಾತ್ರ ಬೊಗಳುವುದನ್ನು ಮಾತ್ರ ನಿಲ್ಲಿಸಿಲ್ಲ. ನಂಗೆ  ಈಗ್ಲೇ ತಂದು ಕೊಡು ಎನ್ನುವಂತೆ ಮನೆ ಮಾಲೀಕನ ಬಳಿ ಹಠ ಹಿಡಿದು ಕುಳಿತಿದೆ. ಕೊನೆಗೆ ಮನೆ ಒಡತಿ ನಾಳೆ ತಂದು ಕೊಡ್ತೇನೆ ಎಂದು ಸಮಾಧಾನ ಪಡಿಸಿ, ತನ್ನ ಹತ್ತಿರಕ್ಕೆ ಕರೆದಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by @tyson_my_boy

ಇದನ್ನೂ ಓದಿ: ಶ್ವಾನಕ್ಕೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಾಲು ಕಾಲು ಹಾಕೊಂಡು ಆರ್ಡರ್ ಮಾಡ್ತವ್ನೆ, ದಯವಿಟ್ಟು ತಂದು ಕೊಡಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಬಾಳೆ ಹಣ್ಣು ಕೊಡಿ, ಜೀರ್ಣಕ್ರಿಯೆಗೆ ಒಳ್ಳೆಯದು ಎಂದಿದ್ದಾರೆ. ಮತ್ತೊಬ್ಬರು, ದೊಡ್ಡವರ ಮಾತು ಕೇಳ್ಬೇಕು, ಇಷ್ಟು ಹಠ ಒಳ್ಳೆಯದಲ್ಲ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು
ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ: ಗೃಹ ಸಚಿವ ಖರ್ಗೆ ಖಡಕ್ ಎಚ್ಚರಿಕೆ
ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ: ಗೃಹ ಸಚಿವ ಖರ್ಗೆ ಖಡಕ್ ಎಚ್ಚರಿಕೆ
4 ವರ್ಷದೊಳಗೆ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್
4 ವರ್ಷದೊಳಗೆ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್
ಗರ್ಭಿಣಿ ಮಹಿಳಾ ಕಾನ್ಸ್ಟೇಬಲ್ ಮೇಲೆ ರಾಡ್ ನಿಂದ ಹಲ್ಲೆ: ಆರೋಪಿ ಬಂಧನ
ಗರ್ಭಿಣಿ ಮಹಿಳಾ ಕಾನ್ಸ್ಟೇಬಲ್ ಮೇಲೆ ರಾಡ್ ನಿಂದ ಹಲ್ಲೆ: ಆರೋಪಿ ಬಂಧನ
ನೋಂದಣಿ ಶುಲ್ಕ ಕಟ್ಟಲು ಸಿದ್ಧ ಎಂದ ಸಚಿವ ಖರ್ಗೆ
ನೋಂದಣಿ ಶುಲ್ಕ ಕಟ್ಟಲು ಸಿದ್ಧ ಎಂದ ಸಚಿವ ಖರ್ಗೆ