viral video: ತಾಯಿ ಜಿಂಕೆ (Deer) ಗಳು ತಮ್ಮ ಸಂತತಿಯನ್ನು ತೀವ್ರವಾಗಿ ರಕ್ಷಿಸುತ್ತವೆ ಮತ್ತು ಸಾಮಾನ್ಯವಾಗಿ ತಮ್ಮ ಎರಡು ವರ್ಷಗಳವರೆಗೆ ವಿಶೇಷವಾಗಿ ತಮ್ಮ ಮರಿಗಳಿಗೆ ಹತ್ತಿರವಾಗಿರುತ್ತವೆ. ಹೆಣ್ಣು ಜಿಂಕೆ ತನ್ನ ಮಕ್ಕಳನ್ನು ಎಷ್ಟು ಪ್ರೀತಿಸುತ್ತದೆ ಎಂಬುದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಏಪ್ರಿಲ್ 6 ರಂದು ಐಎಎಸ್ ಅಧಿಕಾರಿ ಸೋನಾಲ್ ಗೋಯೆಲ್ ಅವರು ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಇಲ್ಲಿಯವರೆಗೆ 124k ವೀಕ್ಷಣೆಗಳು ಮತ್ತು 8k ಲೈಕ್‌ಗಳನ್ನು ಪಡೆದುಕೊಂಡಿದೆ. ಹೃದಯ ವಿದ್ರಾವಕ ವಿಡಿಯೋದಲ್ಲಿ ಜಿಂಕೆಯೊಂದು ನದಿಯಲ್ಲಿ ಈಜುತ್ತಿರುವಾಗ ಮೊಸಳೆಯು ಅದನ್ನು ಬೇಟೆಯಾಡಲು ಅದರ ಕಡೆಗೆ ಧಾವಿಸುತ್ತದೆ. ಇದನ್ನು ನೋಡಿದ ತಾಯಿ ಜಿಂಕೆ ತಕ್ಷಣವೇ ನೀರಿಗೆ ಹಾರಿ ತನ್ನ ಮರಿ ಜಿಂಕೆಯ ಜೀವ ಉಳಿಸುತ್ತದೆ. ಜಿಂಕೆ ಮರಿ ದಡ ತಲುಪಿದ ನಂತರ, ತಾಯಿ ಜಿಂಕೆಯು ಮೊಸಳೆಗೆ ತನ್ನನ್ನು ಬೇಟೆಯಾಗಿ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ಮೊಸಳೆ ತನ್ನ ಚುಪಾದ ಹಲ್ಲುಗಳಿಂದ ಜಿಂಕೆಯನ್ನು ಕೊಂದು ಅದನ್ನು ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
No words can describe the power, beauty and heroism of mother’s love ??
Heartbreaking video of a mother deer sacrificing herself for saving her baby ?
It reminds us to Never ignore your parents and family.
Respect them and take care of them when it’s your turn ??(VC : SM ) pic.twitter.com/e8K9WQiqIc
— Sonal Goel IAS (@sonalgoelias) April 6, 2022
ತಾಯಿಯ ಪ್ರೀತಿಯ ಶಕ್ತಿ, ಸೌಂದರ್ಯ ಮತ್ತು ವೀರತ್ವವನ್ನು ಯಾವುದೆ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ತಾಯಿ ಜಿಂಕೆಯೊಂದು ತನ್ನ ಮಗುವನ್ನು ರಕ್ಷಿಸಲು ತ್ಯಾಗ ಮಾಡಿದ ಹೃದಯವಿದ್ರಾವಕ ವಿಡಿಯೋ ಇದು. ನಿಮ್ಮ ಪೋಷಕರು ಮತ್ತು ಕುಟುಂಬವನ್ನು ಎಂದಿಗೂ ನಿರ್ಲಕ್ಷಿಸಬೇಡಿ ಎಂದು ಇದು ನಮಗೆ ನೆನಪಿಸುತ್ತದೆ. ಅವರನ್ನು ಗೌರವಿಸಿ ಮತ್ತು ನಿಮ್ಮ ಸರದಿ ಬಂದಾಗ ಅವರನ್ನು ನೋಡಿಕೊಳ್ಳಿ ಎಂದು ಅಧಿಕಾರಿ ವಿಡಿಯೋದೊಂದಿಗೆ ಟ್ವೀಟ್ ಮಾಡಿದ್ದಾರೆ. ಜಿಂಕೆಗಳು ವೀರಾವೇಶದಿಂದ ಬಲಿಯಾಗುತ್ತಿರುವುದು ನೆಟ್ಟಿಗರ ಕಣ್ಣಲ್ಲಿ ನೀರು ತರಿಸಿದೆ. ಟ್ವಿಟರ್ ಬಳಕೆದಾರರು ಆಕೆಯ ನಿಸ್ವಾರ್ಥತೆ ಮತ್ತು ಧೈರ್ಯವನ್ನು ಶ್ಲಾಘಿಸಿದ್ದಾರೆ. ಭಾವನಾತ್ಮಕವಾಗುವುದು !!! ನಿಜವಾದ ಪಾಠ.. ತಾಯಿ ತಾಯಿನೇ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
Madam nice video or i must say reality..love and sacrifice beyond imagination
— MEHUL M SUTARIA (@SutariaMehul) April 6, 2022
ಇದನ್ನೂ ಓದಿ:
ಮಂಗಳೂರು: ಡಿವೈಡರ್ ಹಾರಿ ಸ್ಕೂಟಿಗೆ ಡಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು; ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ