ತನಗೆ ನೋವಾದರೂ ಪರವಾಗಿಲ್ಲ, ತನ್ನ ಮಕ್ಕಳಿಗೆ ಏನೂ ಆಗಬಾರದು ಅಂತ ಯೋಚಿಸುವ ಜಗತ್ತಿನ ಏಕೈಕ ಜೀವಿ ಎಂದರೆ ಅದು ತಾಯಿ. ಮನುಷ್ಯರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳಿಗೂ ತನ್ನ ಮರಿಗಳೆಂದರೆ ಅಷ್ಟೇ ಕಾಳಜಿ ಇರುತ್ತದೆ. ತನ್ನ ಮರಿಗಳಿಗೆ ತೊಂದರೆ ಕೊಡಲು ಯಾರಾದರೂ ಬಂದರೆ ಕೊನೆ ಉಸಿರು ಇರುವವರೆಗೂ ಹೋರಾಡುತ್ತವೆ. ತಮ್ಮ ಸಂತತಿಯನ್ನು ರಕ್ಷಿಸಲು ಜೀವವನ್ನೇ ಒತ್ತೆ ಇಡುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಜಾಂಬಿಯಾದಲ್ಲಿ ಒಂದು ಘಟನೆ ನಡೆದಿದ್ದು, ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಂತಿಯುತ ಪ್ರಾಣಿಗಳಲ್ಲಿ ಆನೆಯೂ ಕೂಡಾ ಒಂದು. ಆದರೆ ತನಗೆ ಮತ್ತು ತನ್ನ ಸಂತತಿ ಮೇಲೆ ದಾಳಿ ನಡೆದಾಗ ರಕ್ಷಣೆಗಾಗಿ ಆಕ್ರಮಣಕಾರಿಯಾಗಿ ಹೋರಾಟ ನಡೆಸುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಕೂಡಾ ಆನೆ ಮತ್ತು ಮೊಸಳೆ ಸಂಘರ್ಷ. ತಾಯಿ ಆನೆಯೊಂದು ತನ್ನ ಮರಿಯನ್ನು ರಕ್ಷಿಸಲು ಮೊಸಳೆಯನ್ನು ಕೊಂದಿದೆ. ಹೆಣ್ಣು ಆನೆ ಕರುವನ್ನು ರಕ್ಷಿಸಲು ಮೊಸಳೆಯನ್ನು ಕೊಂದ ದೃಶ್ಯವನ್ನು ಹನ್ಸ್ ಹೆನ್ರಿಕ್ ಹಾಹರ್ ಎಂಬುವವರು ಸಫಾರಿಗೆ ಹೋಗಿದ್ದಾಗ ಸೆರೆಹಿಡಿದಿದ್ದಾರೆ.
ಇನ್ನು ಆನೆ ತನ್ನ ಸೊಂಡಿಲು ಮತ್ತು ತಲೆಯಿಂದ ಮೊಸಳೆಯನ್ನು ಕೊಲ್ಲಲು ಮುಂದಾಗಿದೆ. ಮಾತ್ರವಲ್ಲದೇ ಕಾಲಿನಿಂದ ತುಳಿದಿದ್ದು, ಈ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು. ಹೆಣ್ಣು ಆನೆಗೆ ದಂತ ಇಲ್ಲದ ಕಾರಣ ಮೊಸಳೆಯನ್ನು ಕೊಲ್ಲಲು ಬಾಯಿಯನ್ನು ಬಳಸಿದೆ. ಆನೆ ನಿರಂತರವಾಗಿ ಮೊಸಳೆಯನ್ನು ತುಳಿದು ಕೊಂದಿದೆ. ಈ ಎಲ್ಲಾ ದೃಶ್ಯಗಳನ್ನು ಸಫಾರಿಗೆ ಹೋದ ಹನ್ಸ್ ಹೆನ್ರಿಕ್ ಹಾಹರ್ ಸೆರೆಹಿಡಿದಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, 4 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್ ಮೂಲಕ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
Viral Video: ಉತ್ತರಾಖಂಡದಲ್ಲಿ ಪ್ರವಾಹದ ಮಧ್ಯೆ ಸಿಲುಕಿ ಪರದಾಡುತ್ತಿದ್ದ ಆನೆ; ರಕ್ಷಿಸಿದ ಅರಣ್ಯ ಅಧಿಕಾರಿಗಳು