ಅಂಬೆಗಾಲಿಡುವ ಮಗುವಿಗೆ ಉಪಾಯವಾಗಿ ನಂಬಿಸಿ ಅಕ್ಷರ ಕಲಿಸುತ್ತಿರುವ ಅಮ್ಮನಿಗೆ ನೆಟ್ಟಿಗರಿಂದ ಶ್ಲಾಘನೆ; ವಿಡಿಯೋ ವೈರಲ್

| Updated By: shruti hegde

Updated on: Sep 15, 2021 | 10:59 AM

Viral Video: ಇಬ್ಬರು ಮಹಿಳೆಯರು ಸೇರಿ ಉಪಾಯ ಮಾಡಿದ್ದಾರೆ. ಮಗು ತಾನಾಗಿಯೇ ಕಲಿಗೆ ಬಂದು ಕುಳಿತುಕೊಂಡಿದೆ. ಆಸಕ್ತಿಯಿಂದ ಪಾಠ ಕಲಿಯುತ್ತಿರುವ ಮಗುವಿಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. ಅಮ್ಮನ ಉಪಾಯ ಮೆಚ್ಚಿ ನೆಟ್ಟಿಗರು ಹೊಗಳಿದ್ದಾರೆ. ವಿಡಿಯೋ ಇದೆ ನೀವೂ ನೋಡಿ.

ಅಂಬೆಗಾಲಿಡುವ ಮಗುವಿಗೆ ಉಪಾಯವಾಗಿ ನಂಬಿಸಿ ಅಕ್ಷರ ಕಲಿಸುತ್ತಿರುವ ಅಮ್ಮನಿಗೆ ನೆಟ್ಟಿಗರಿಂದ ಶ್ಲಾಘನೆ; ವಿಡಿಯೋ ವೈರಲ್
Follow us on

ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು ಎಂಬ ಮಾತಿದೆ. ಮಗು ಹುಟ್ಟಿದಾಗಿನಿಂದ ತಾಯಿ ಮಗುವಿಗೆ ಪ್ರತಿಯೊಂದು ಚಟುವಟಿಕೆಯನ್ನೂ ಸಹ ಹೇಳಿಕೊಡುತ್ತಾಳೆ. ಮಕ್ಕಳನ್ನು ಸುಕ್ಷಿತವಾಗಿ ನೋಡಿಕೊಳ್ಳುವುದರ ಜತೆಗೆ ವಿದ್ಯಾಭ್ಯಾಸವನ್ನು ಮೊದಲ ಅಕ್ಷರದಿಂದ ಹೇಳಿಕೊಡುತ್ತಾಳೆ. ಮಕ್ಕಳ ಮಾತು ಕೇಳಿಸುವುದು ಅಷ್ಟು ಸುಲಭದ ಮಾತಲ್ಲ. ಮಗು ತಾನಾಗಿಯೇ ಶಿಕ್ಷಣದ ಬಗೆಗೆ ಆಸಕ್ತಿ ಹೊಂದುವಂತೆ ಓಲೈಸಬೇಕು. ಅಂಥಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಇಬ್ಬರು ಮಹಿಳೆಯರು ಸೇರಿ ಉಪಾಯ ಮಾಡಿದ್ದಾರೆ. ಮಗು ತಾನಾಗಿಯೇ ಕಲಿಗೆ ಬಂದು ಕುಳಿತುಕೊಂಡಿದೆ. ಆಸಕ್ತಿಯಿಂದ ಪಾಠ ಕಲಿಯುತ್ತಿರುವ ಮಗುವಿಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. ಅಮ್ಮನ ಉಪಾಯ ಮೆಚ್ಚಿ ನೆಟ್ಟಿಗರು ಹೊಗಳಿದ್ದಾರೆ. ವಿಡಿಯೋ ಇದೆ ನೀವೂ ನೋಡಿ.

ಮಕ್ಕಳು ದೊಡ್ಡವರಂತೆಯೇ ನಕಲಿಸುವುದು ಸಾಮಾನ್ಯ. ನಾವು ಮಾಡಿದಂತೆಯೇ ಮಕ್ಕಳು ಕೂಡಾ ಗ್ರಹಿಕೆಯ ಮೂಲಕ ಕಲಿಯುತ್ತಾರೆ. ಹಲವು ವಿವಿಧ ಚಿತ್ರ ಪುಸ್ತಕಗಳನ್ನು ಹಿಡಿದುಕೊಂಡು ತಾಯಿ ಉಚ್ಛಾರಣೆ ಮಾಡುತ್ತಾಳೆ. ಎದುರು ಕುಳಿತಿರುವ ಮಹಿಳೆ ಆಕೆ ಹೇಳಿಕೊಟ್ಟಂತೆಯೇ ಸಣ್ಣ ಮಗುವಿನಂತೆಯೇ ಉಚ್ಚರಿಸುತ್ತಾಳೆ. ಆಟವಾಡುತ್ತಾ ಕುಳಿತಿರುವ ಮಗು ಇವರನ್ನು ನೋಡಿ ಇವರ ಬಳಿಯೇ ಬಂದಿದೆ. ಉತ್ತರ ಸರಿ ಹೇಳಿದಾಕ್ಷಣ ಹೈಫೈ ಕೊಡುತ್ತಾ ಸಂತೋಷಗೊಂಡಿದೆ. ಅಮ್ಮ ಹೇಳಿಕೊಟ್ಟಂತೆಯೇ ಮಗು ಕೂಡಾ ಉಚ್ಛರಿಸಲು ಪ್ರಯತ್ನಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಸೆಪ್ಟೆಂಬರ್ 8ರಂದು ಪೋಸ್ಟ್ ಮಾಡಲಾಗಿದೆ. ಬಳಿಕ ಇನ್ಸ್ಟಾಗ್ರಾಂನಲ್ಲಿಯೂ ಸಹ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ನಾನು ಇದನ್ನು ತುಂಬಾ ಇಷ್ಟಪಟ್ಟಿದ್ದೇನೆ ಎಂದು ಓರ್ವರು ಹೇಳಿದ್ದಾರೆ. ನಾನು ಕೂಡಾ ಈ ರೀತಿಯಾಗಿ ಪ್ರಯತ್ನಿಸುತ್ತೇನೆ, ನನ್ನ ಮಗು ಕೂಡಾ ಬಹುಬೇಗ ಕಲಿಯುತ್ತದೆ ಎಂದು ಓರ್ವರು ಹೇಳಿದ್ದಾರೆ. ಇದು ಒಳ್ಳೆಯ ಉಪಾಯ ಎಂದು ಇನ್ನೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಕಾಳಿಂಗ ಸರ್ಪ ಉಸಿರಾಡುವ ಸದ್ದನ್ನು ಎಂದಾದರೂ ಕೇಳಿದ್ದೀರಾ? ಎಂತಹ ಗಟ್ಟಿಗರನ್ನೂ ಅಲುಗಾಡಿಸುತ್ತದೆ ಈ ವಿಡಿಯೋ

Viral Video: ತೂಗು ಸೇತುವೆ ಮೇಲೆ ಬೈಕ್ ಹತ್ತಿ ಸ್ಟಂಟ್ ಮಾಡಿದ ವ್ಯಕ್ತಿ ಪರಿಸ್ಥಿತಿ ಏನಾಯ್ತು ನೋಡಿ!

(Mother teaching interesting in learning activity to toddlers video goes viral netizens impressed)