viral video: ಜೋರಾಗಿ ಅಳುತ್ತಿದ್ದ ಮಗುವಿನ ತಲೆಯ ಮೇಲೆ ಚೀಸ್​ ಸ್ಲೈಸ್ ಎಸೆದ ತಾಯಿ; ಗಾಬರಿಯಿಂದ ಕಣ್ಣರಳಿಸಿದ ಮಗು-ವೀಡಿಯೋ ವೈರಲ್​

| Updated By: Pavitra Bhat Jigalemane

Updated on: Dec 10, 2021 | 3:02 PM

15 ಸೆಕೆಂಡುಗಳ ಕಿರು ವೀಡಿಯೋದಲ್ಲಿ ಮಗು ಜೋರಾಗಿ ಅಳುತ್ತಿರುವುದನ್ನು ಕಾಣಬಹುದು. ಆದರೆ ಅಳುತ್ತಿರುವ ಮಗುವಿನ ತಲೆಯ ಮೇಲೆ ಚೀಸ್​ ಸ್ಲೈಸ್​ ಒಂದನ್ನು ಎಸೆದ ತಕ್ಷಣ ಮಗು ಅಳುವುದನ್ನು ನಿಲ್ಲಿಸಿ ಗಾಬರಿಯ ನೋಟವನ್ನು ಬೀರುತ್ತದೆ. ಮಗುವಿನ ಮುಗ್ಧ ಗಾಬರಿಯ ನೋಟ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

viral video: ಜೋರಾಗಿ ಅಳುತ್ತಿದ್ದ ಮಗುವಿನ ತಲೆಯ ಮೇಲೆ ಚೀಸ್​ ಸ್ಲೈಸ್ ಎಸೆದ ತಾಯಿ; ಗಾಬರಿಯಿಂದ ಕಣ್ಣರಳಿಸಿದ ಮಗು-ವೀಡಿಯೋ ವೈರಲ್​
ಅಳುತ್ತಿರುವ ಮಗು
Follow us on

ಚಿಕ್ಕ ಮಕ್ಕಳನ್ನು ಸಂಭಾಳಿಸಲು ತಾಳ್ಮೆ ಇದ್ದಷ್ಟೂ ಕಡಿಮೆ. ಅಳುವ ಮಕ್ಕಳನ್ನು ಬಾಯಿ ಮುಚ್ಚಿಸಲು ಅಮ್ಮಂದಿರು ಪಡುವ ಕಷ್ಟ ಅಷ್ಟಿಷ್ಟಲ್ಲ. ರಮಿಸುವ ಮಗುವನ್ನು ಸಂತೈಸಲು ಅಮ್ಮಂದಿರಿಂದ ಮಾತ್ರ ಸಾಧ್ಯ. ಕೆಲವೊಮ್ಮೆ ಅಳುವ ಮಗುವನ್ನು ಸಮಾಧಾನಿಸುವಾಗ ತಮಾಷೆಯ ಘಟನೆಗಳು ನಡೆಯುತ್ತವೆ. ಜೋರಾಗಿ ಅಳುತ್ತಿರುವ ಮಗು ಒಂದೇ ಸಲಕ್ಕೆ ಅಳು ನಿಲ್ಲಿಸುತ್ತದೆ. ಅದನ್ನು ಹೇಗೆ ಎಂದು ನೋಡಿದರೆ ನಿಜಕ್ಕೂ ಮುಖದಲ್ಲಿ ನಗು ಮೂಡುತ್ತದೆ. ಅಂತಹ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ.

15 ಸೆಕೆಂಡುಗಳ ಕಿರು ವೀಡಿಯೋದಲ್ಲಿ ಮಗು ಜೋರಾಗಿ ಅಳುತ್ತಿರುವುದನ್ನು ಕಾಣಬಹುದು. ಆದರೆ ಅಳುತ್ತಿರುವ ಮಗುವಿನ ತಲೆಯ ಮೇಲೆ ಮಗುವಿನ ತಾಯಿ ಚೀಸ್​ ಸ್ಲೈಸ್​ ಒಂದನ್ನು ಎಸೆದಿದ್ದಾರೆ.  ತಕ್ಷಣ ಮಗು ಅಳುವುದನ್ನು ನಿಲ್ಲಿಸಿ ಗಾಬರಿಯ ನೋಟವನ್ನು ಬೀರುತ್ತದೆ. ಮಗುವಿನ ಮುಗ್ಧ ಗಾಬರಿಯ ನೋಟ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಪುಟ್ಟಮಕ್ಕಳ ಮುಗ್ಧ ವೀಡಿಯೋಗಳು ಆಗಾಗ ವೈರಲ್​ ಅಗುತ್ತವೆ. ಕೆಲವು ದಿನಗಳ ಹಿಂದೆ ಪುಟ್ಟ ಮಗುವೊಂದು ಕೋಳಿಯ ರೆಕ್ಕೆಗಳನ್ನು ಪಾಲಿಷ್ ಮಾಡುತ್ತಿದ್ದ ವೀಡಿಯೋ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಅದರ ನಂತರ ಪುಟ್ಟ ಮಗು ತನ್ನೆದುರು ಇದ್ದ ಚಿಕನ್​ ಪೀಸ್​ಗಳನ್ನು ಒಂದು ಚೂರು ಬಿಡದೆ ಒಂದೇ ಏಟಿಗೆ ತಿಂದು ಮುಗಿಸಿದ ವೀಡಿಯೂ ವೈರಲ್​ ಆಗಿತ್ತು. ಇದೀಗ ಅಳುತ್ತಿರುವ ಮಗುವಿನ ತಲೆಯ ಮೇಲೆ ಚೀಸ್​ ಪೀಸ್​ ಬಿದ್ದ ತಕ್ಷಣ ಕಣ್ಣುಗಳನ್ನು ಅರಳಿಸಿ ನೋಡುವ ವೀಡಿಯೋ ಇಂಟರ್​ನೆಟ್​ನಲ್ಲಿ ಕಾಣಿಸಿಕೊಂಡಿದೆ. ರೆಡ್ಡಿಟ್​ ಸಂಸ್ಥೆ ಈ ವೀಡಿಯೋವನ್ನು ಹಂಚಿಕೊಂಡಿದೆ. 15 ಸೆಕೆಂಡ್​ಗಳ ಈ ವೀಡಿಯೋ 52ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

ಇದನ್ನೂ ಓದಿ:

Viral Video: ಕೋಪಗೊಂಡ ಮಗನನ್ನು ಸಂತೈಸಿದ ತಾಯಿ; ನೆಟ್ಟಿಗರು ಮೆಚ್ಚಿಕೊಂಡ ಹೃದಯಸ್ಪರ್ಶಿ ವಿಡಿಯೋ ನೋಡಿ

1.400 ಕ್ಕೂ ಹೆಚ್ಚು ಮರುಬಳಕೆ ವಾಷಿಂಗ್​ ಮಷಿನ್​ಗಳನ್ನು ಬಳಸಿ 44 ಅಡಿ ಎತ್ತರದ ಪಿರಾಮಿಡ್​ ನಿರ್ಮಿಸಿದ ಕಂಪನಿ