
ದೇಶದ ಗಡಿಯಲ್ಲಿ ನಿಂತು ಮಳೆ, ಚಳಿ ಎನ್ನದೇ ದೇಶವನ್ನು ರಕ್ಷಿಸುವ ಸೈನಿಕರ (Soldier) ಸೇವೆ ಶ್ರೇಷ್ಠವಾದುದು. ನಿಂತು ತಮ್ಮ ಮಗ ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾನೆ ಎನ್ನುವುದು ಹೆತ್ತವರಿಗೆ ಹೆಮ್ಮೆಯ ವಿಚಾರ. ಆದರೆ ದೇಶ ಸೇವೆಗೆ ಮಗನನ್ನು ಕಳುಹಿಸಿಕೊಡುವಾಗ ಹೆಮ್ಮೆಯ ಜೊತೆಗೆ ಕಣ್ಣು ಒದ್ದೆಯಾಗುತ್ತದೆ, ಮನಸ್ಸು ಭಾರವಾಗುತ್ತದೆ. ಇದೀಗ ಇಂತಹದ್ದೆ ಭಾವನಾತ್ಮಕ ದೃಶ್ಯಕ್ಕೆ ಈ ವಿಡಿಯೋನೇ ಸಾಕ್ಷಿ. ಹಣೆಗೆ ಮುತ್ತಿಟ್ಟು ಮಗನನ್ನು ದೇಶ ಸೇವೆಗೆ ತಾಯಿಯೊಬ್ಬರು (Mother) ಕಳುಹಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Itx-shiram ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾದ ಈ ವಿಡಿಯೋದಲ್ಲಿ ಹೆಮ್ಮೆಯ ಮಗನನ್ನು ದೇಶ ಸೇವೆಗೆ ಕಳುಹಿಸಿಕೊಡಲು ಬಸ್ ಸ್ಟ್ಯಾಂಡ್‌ಗೆ ಕುಟುಂಬವೊಂದು ಬಂದಿದೆ. ಈ ವೇಳೆಯಲ್ಲಿ ತಾಯಿಯೂ ಭಾವನಾತ್ಮಕವಾಗಿದ್ದು, ಮಗನ ಕೆನ್ನೆಗೆ, ಹಣೆಗೆ ತಾಯಿ ಮುತ್ತಿಟ್ಟಿದ್ದಾರೆ. ಆ ಬಳಿಕ ಕೈ ಕುಲುಕಿ ಮುದ್ದಿನ ಮಗನನ್ನು ಬೀಳ್ಕೊಡುಗೆ ದೃಶ್ಯವಿದಾಗಿದೆ. ಈ ಸೈನಿಕನ ತಂದೆ ಹಾಗೂ ಕುಟುಂಬದ ಸದಸ್ಯರು ಇರುವುದನ್ನು ನೀವಿಲ್ಲಿ ನೋಡಬಹುದು. ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ:Video: ತಾಯಿಗಿಂತ ದೇವರಿಲ್ಲ; ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಮಹಾತಾಯಿ
ಈ ವಿಡಿಯೋವನ್ನು ಒಂದು ಲಕ್ಷ ನಲವತ್ತು ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು ಈ ಭಾವನಾತ್ಮಕ ವಿದಾಯದ ಕ್ಷಣವನ್ನು ನೋಡಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ಆ ಅದ್ಭುತವಾದ ಕ್ಷಣವನ್ನು ಸೆರೆ ಹಿಡಿದ್ದಕ್ಕೆ ಥ್ಯಾಂಕ್ಸ್ ಯು ಎಂದಿದ್ದಾರೆ. ಮತ್ತೊಬ್ಬರು ನಮ್ಮ ದೇಶ ಕಾಯೋ ಯೋಧನ ಪ್ರಯಾಣ ಸುಖಕರವಾಗಿದೆ, ನಮಸ್ತೆ ಅಮ್ಮ ಎಂದು ಕಾಮೆಂಟ್ ಮಾಡಿದ್ದಾರೆ. ಅಮ್ಮ ನೀವು ನಿಜಕ್ಕೂ ಪುಣ್ಯವಂತರು, ನಿಮ್ಮ ಮಗ ಗಡಿಯಲ್ಲಿ ನಿಂತು ದೇಶ ಕಾಯುವ ಮೂಲಕ ನೀವು ಹೆಮ್ಮೆ ಪಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಇನ್ನೊಬ್ಬರು ಹೇಳಿದರೆ, ಮತ್ತೆ ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ