ನಿರ್ಧಿಷ್ಟ ಧರ್ಮದಲ್ಲಿನ ಆಚಾರ ವಿಚಾರ, ಸಂಸ್ಕೃತಿಗಳಿಗೆ ಪ್ರಭಾವಿತರಾಗಿ ಹಿಂದೂ ಧರ್ಮದಿಂದ ಮುಸ್ಲಿಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವವರ, ಕ್ರೈಸ್ತ ಮತ್ತು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದವರ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಇಲ್ಲೊಬ್ಬರು ಮುಸ್ಲಿಂ ಮಹಿಳೆ ಕೂಡಾ ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ನೀಡುವ ಗೌರವದಿಂದ ಪ್ರಭಾವಿತರಾಗಿ ತನ್ನಿಬ್ಬರು ಮಕ್ಕಳೊಂದಿಗೆ ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ನಮ್ಮ ಮನೆಯಲ್ಲಿ ನನಗಾಗಲಿ ಅಥವಾ ನನ್ನ ಮಕ್ಕಳಿಗಾಗಲಿ ಯಾರು ಗೌರವ ಕೊಡುತ್ತಿರಲಿಲ್ಲ ಎಂದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಅವರು ಮತಾಂತರ ಹೊಂದುವ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಘಟನೆ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ನಡೆದಿದ್ದು, ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ನೀಡುವ ಗೌರವದಿಂದ ಪ್ರಭಾವಿತರಾದ ಮುಸ್ಲಿಂ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ತನ್ನ ಗಂಡ ಮತ್ತು ಗಂಡನ ಮನೆಯವರು ಕೊಡುತ್ತಿದ್ದ ಕಾಟ ಮತ್ತು ತೋರುತ್ತಿದ್ದ ಅಗೌರವಕ್ಕೆ ಬೇಸತ್ತು ಹೊಸದಾಗಿ ಜೀವನವನ್ನು ಪ್ರಾರಂಭಿಸಲು ಬಯಸಿದ್ದ ಈ ಮಹಿಳೆ ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ನೀಡುವ ಗೌರವದಿಂದ ಪ್ರೇರಿತರಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ.
ಇಲ್ಲೊಬ್ಬರು ಮುಸ್ಲಿ ಮಹಿಳೆ ಗಂಡ ಕೊಡುವ ಕಾಟ ಮತ್ತು ಆತ ತೋರುವ ಅಗೌರವದಿಂದ ಬೇಸತ್ತು ತನ್ನಿಬ್ಬರು ಮಕ್ಕಳೊಂದಿಗೆ ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಗಂಡ ಪ್ರತಿನಿತ್ಯ ನನಗೆ ಥಳಿಸುತ್ತಿದ್ದ, ಮನೆಯಲ್ಲಿ ನನ್ಗೆ ಮತ್ತು ನನ್ನಿಬ್ಬರು ಮಕ್ಕಳಿಗೆ ಕಿಂಚಿತ್ತು ಗೌರವವೂ ಇಲ್ಲ ಎಂದು ಗಂಡನ ಮನೆಯವರ ಹಿಂಸಾಚಾರಕ್ಕೆ ಬೇಸತ್ತು ಮಹಿಳೆ ತನ್ನ ಪುತ್ರರೊಂದಿಗೆ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ. ಅವರು ಮತಾಂತರ ಹೊಂದುವ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಿಂದೂ ಯುವ ವಾಹಿನಿಯ ಮಧ್ಯಪ್ರದೇಶದ ಉಸ್ತುವಾರಿ ಶ್ರೀ ಚೈತನ್ಯ_ಸನಾತನಿ ಅವರ ಮಾರ್ಗದರ್ಶನದಲ್ಲಿ, ಮುಸ್ಲಿಂ ಮಹಿಳೆ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಸನಾತನಕ್ಕೆ ಮರಳಿದರು.
ಸಹೋದರಿ ಮೆಹನಾಜ್ ತನ್ನ ಇಬ್ಬರು ಪುತ್ರರೊಂದಿಗೆ ಸನಾತನ ಧರ್ಮವನ್ನು ಅಳವಡಿಸಿಕೊಂಡರು.
ಮೆಹನಾಜ್ ಮೀನಾಕ್ಷಿಯಾದರು, ಮಗ ಫೈಜಾನ್ ಮತ್ತು ಫರಾನ್ ಲವ್_ಕುಶ್ ಆದರು…🙏🚩 pic.twitter.com/9tsPNcK0bB— ಶ್ರೇಯಾ🚩🚩🚩Shreya🌹❤️🇮🇳श्रेया 🚩🚩🚩 (@Shreya_Sanatani) September 6, 2024
ಮಂದಸೌರ್‌ನ ಮೆಹನಾಜ್ ಎಂಬ ಮಹಿಳೆ ತನ್ನ ಮಕ್ಕಳಾದ ಮೊಹಮ್ಮದ್ ಫೈಜಾನ್ ಶೇಖ್ ಮತ್ತು ಫರ್ಹಾನ್ ಶೇಖ್ ಜೊತೆ ಸನಾತನ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಬುಧವಾರ (ಸೆಪ್ಟೆಂಬರ್ 4) ದೇವಾಲಯವೊಂದರಲ್ಲಿ ಧಾರ್ಮಿಕ ವಿಧಿವಿಧಾನದೊಂದಿಗೆ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡರು. ಹಿಂದೂ ಧರ್ಮವನ್ನು ಸ್ವೀಕರಿಸಿದ ನಂತರ ಮಹಿಳೆ ತನ್ನ ಹೆಸರನ್ನು ಮೀನಾಕ್ಷಿ ಮತ್ತು ತನ್ನ ಮಕ್ಕಳ ಹೆಸರನ್ನು ಲವ ಕುಶ ಎಂದು ಬದಲಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಹಿಂದೂ ಯುವ ವಾಹಿನಿಯ ರಾಜ್ಯಧ್ಯಕ್ಷ ಚೈತನ್ಯ ಸಿಂಗ್ ರಜಪೂತ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಗಣೇಶ ಕಲೆಕ್ಷನ್‌ಗೆ ಸಂಸದ ಡಾ. ಮಂಜುನಾಥ್ ಬಳಿ ಬಂದ ಮಕ್ಕಳ ಸೈನ್ಯ, ಹೃದಯವಂತ ಎಷ್ಟು ಹಣ ಕೊಟ್ರು ನೋಡಿ
“ನನಗೆ ಮದುವೆಯಾಗು ಸುಮಾರು 15 ವರ್ಷಗಳಾಗಿವೆ, ಇಷ್ಟು ವರ್ಷವಾದ್ರೂ ನನ್ನ ಪತಿ ನನಗೆ ಪ್ರತಿದಿನ ಹೊಡೆಯುತ್ತಿದ್ದ ನನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಜೊತೆಗೆ ನನಗೆ ಕಿಂಚಿತ್ತು ಗೌರವ ಕೂಡಾ ಕೊಡುತ್ತಿರಲಿಲ್ಲ. ಆದ್ರೆ ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಗೌರವ ನೀಡುವ ಪರಿಯನ್ನು ನಾನು ಕಣ್ಣಾರೆ ಕಂಡಿದ್ದೆ. ಇದರಿಂದ ಪ್ರಭಾವಿತಳಾಗಿ ನಾನು ಹಿಂದೂ ಧರ್ಮವನ್ನು ಸ್ವೀಕರಿಸಿದೆ” ಎಂದು ಆ ಮಹಿಳೆ ಹೇಳಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ