ಕಡಲತೀರಗಳಿಗೆ ಹೋದವರು, ಸಮುದ್ರದಲ್ಲಿ ಸಾಹಸ ಕ್ರೀಡೆಗಳನ್ನು ಆಡಲು ಹೋದವರು ಅಪಾಯಕ್ಕೆ ಸಿಲುಕುವ ಘಟನೆ ಆಗಾಗ ನಡೆಯುತ್ತಿರುತ್ತದೆ. ಅದೆಷ್ಟೋ ಮಂದಿ ಸಾಹಸಕ್ಕೆ ಕೈಹಾಕಿ ಜೀವವನ್ನೇ ಕಳೆದುಕೊಂಡವರೂ ಇದ್ದಾರೆ. ಹಾಗೇ, ಮುಂಬೈನಲ್ಲಿ ಭಾನುವಾರ ಇಂಥದದ್ದೇ ಅಪಾಯಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರನ್ನು ಕರಾವಳಿ ಪೊಲೀಸರು ಮತ್ತು ಕೊಲಾಬಾ ಪೊಲೀಸರು ಜಂಟಿಯಾಗಿ ರಕ್ಷಿಸಿದ್ದಾರೆ. ಅಂದಹಾಗೇ, ಈ ಘಟನೆ ನಡೆದದ್ದು ಮುಂಬೈನ ಗೇಟ್ ವೇ ಆಫ್ ಇಂಡಿಯಾದ ಬಳಿ.
ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಕುಟುಂಬದೊಂದಿಗೆ ಸಖತ್ ಎಂಜಾಯ್ ಮಾಡುತ್ತಿದ್ದರು. ಆದರೆ ಅವರು ಇದ್ದ ಬೋಟ್ಗೆ ಬಲವಾದ ಅಲೆ ಅಪ್ಪಳಿಸಿದ ಕಾರಣ ಮಹಿಳೆ ಸಮತೋಲನ ಕಳೆದುಕೊಂಡು ಸಾಗರಕ್ಕೆ ಬಿದ್ದಿದ್ದಾರೆ. ಮುಳುಗುತ್ತಿದ್ದ ಅವರು ಭಯದಿಂದ ಕೂಗುತ್ತಿದ್ದರು. ನಂತರ ಅಲ್ಲಿಗೆ ದೋಣಿಯಲ್ಲಿ ಬಂದ ಕರಾವಳಿ ಪೊಲೀಸರು ಮಹಿಳೆಗೆ ಆಸರೆಗೆ ಹಗ್ಗವೊಂದನ್ನು ಕೊಟ್ಟು, ಪೊಲೀಸ್ ಸಿಬ್ಬಂದಿಯೊಬ್ಬ ನೀರಿಗೆ ಜಿಗಿದು ನಂತರ ರಕ್ಷಣೆ ಮಾಡಿದ್ದಾರೆ. ಹಾಗೇ ಘಟನೆಯ ಬಗ್ಗೆ ಮುಂಬೈ ಪೊಲೀಸರೂ ಕೂಡ ಮಾಹಿತಿ ನೀಡಿದ್ದಾರೆ. ಅಪಾಯದಲ್ಲಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದ ವಿಡಿಯೋ ಕೂಡ ವೈರಲ್ ಆಗಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೇ, ಮಹಿಳೆ ಲೈಪ್ ಜಾಕೆಟ್ ಧರಿಸಿದ್ದರಿಂದ ಒಂದೇ ಸಲ ಯಾವುದೇ ಸಮಸ್ಯೆ ಆಗಲಿಲ್ಲ. ಒಂದೊಮ್ಮೆ ಲೈಫ್ ಜಾಕೆಟ್ ಧರಿಸದೆ ಇದ್ದಿದ್ದರೆ ಇನ್ನಷ್ಟು ಸಮಸ್ಯೆ ಆಗುತ್ತಿತ್ತೂ ಹೇಳಲಾಗಿದೆ.
#WATCH | A team of Coastal Police & Colaba Police rescued a woman tourist who was drowning in the sea near Gateway of India, Mumbai today. The woman lost control and fell into the water after a strong ocean current hit her boat: Mumbai Police pic.twitter.com/UQFOfMQ8oK
— ANI (@ANI) January 9, 2022
ಇದನ್ನೂ ಓದಿ: ಮರದ ಸ್ಕೇಲ್ನಲ್ಲಿ ಮದುವೆಯ ಊಟದ ಮೆನು ಬರೆಸಿದ ಕುಟುಂಬ: ವೈರಲ್ ಆದ ಫೋಟೋಗಳು