
ದೇವರು ಕೆಲವೊಂದು ಬಾರಿ ಯಾವುದೋ ರೂಪದಲ್ಲಿ ಮನುಷ್ಯನ ಬಳಿ ಬರುತ್ತಾರೆ ಎಂಬ ಮಾತಿದೆ, ಇದೀಗ ಆ ಮಾತು ಈ ಘಟನೆಯಿಂದ ನಿಜವಾಗಿದೆ. ಇಲ್ಲೊಂದು ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಇಂಥಹ ಧೈರ್ಯ ಯಾರಿಗೂ ಬರುವುದಿಲ್ಲ, ಅದರಲ್ಲೂ ಸಾಮಾನ್ಯ ವ್ಯಕ್ತಿಗೆ ಬರಲು ಸಾಧ್ಯವೇ ಇಲ್ಲ. ಅದರೂ ಈ ವ್ಯಕ್ತಿಯನ್ನು ಮೆಚ್ಚಲೇಬೇಕು. ಮುಂಬೈ ರೈಲ್ವೆ ನಿಲ್ದಾಣದಲ್ಲಿ (delivery Mumbai) ಮಂಗಳವಾರ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ನರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಬಂದು ಹೆರಿಗೆ ಮಾಡಿಸಿದ್ದಾರೆ. ಇದೀಗ ಮಗು ಮತ್ತು ಮಹಿಳೆ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿಡಿಯೋ ಎಲ್ಲ ಕಡೆ ಸಖತ್ ವೈರಲ್ ಆಗಿದ್ದು, ಪ್ರಶಂಸೆಗೂ ಕಾರಣವಾಗಿದೆ. ಸಂಬಂಧಗಳೇ ಇಲ್ಲದ ವ್ಯಕ್ತಿಗೆ ಬಂದು ಹೇರಿಗೆ ಮಾಡುವುದೆಂದರೆ ಸುಲಭವೇ? ಇಲ್ಲ ಆ ವ್ಯಕ್ತಿಯನ್ನು ದೇವರೇ ಕಳಿಸಿರಬೇಕು ಅಲ್ವಾ? ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ. ಇನ್ನು ಈ ವಿಡಿಯೋವನ್ನು ಸಂಗೀತಗಾರ ಮಂಜೀತ್ ಧಿಲ್ಲೋನ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಏನು ಹೇಳಲಾಗಿದೆ? ಇಲ್ಲಿದೆ ನೋಡಿ, ರಾಮಮಂದಿರ ನಿಲ್ದಾಣದಲ್ಲಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಮಹಿಳೆಗೆ ರೈಲಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಅದೇ ಸಮಯದಲ್ಲಿ ರೈಲಿನಲ್ಲಿ ವಿಕಾಸ್ ಬೇಂದ್ರೆ ಎಂಬುವರು ಕೂಡ ಇದ್ರು, ಮಹಿಳೆಯ ನರಳಾಟ ನೋಡಿ ತಕ್ಷಣ ವಿಕಾಸ್ ಬೇಂದ್ರೆ ಮಹಿಳೆ ಇರುವವಲ್ಲಿಗೆ ಧಾವಿಸಿದ್ದಾರೆ. ತಕ್ಷಣ ರೈಲಿನ ಎಮರ್ಜೆನ್ಸಿ ಚೈನ್ ಎಳೆದು ನಿಲ್ಲಿಸಿದ್ದಾರೆ. ಹತ್ತಿರ ಆಸ್ಪತ್ರೆ ಕರೆದುಕೊಂಡು ಹೋಗುವ ಎಂದರೆ ಅಲ್ಲಿ ಯಾವುದು ಹತ್ತಿರದಲ್ಲಿ ಆಸ್ಪತ್ರೆಯೇ ಇಲ್ಲ. ನಂತರ ಅಲ್ಲಿದ್ದವರು ಅವರ ನಿಲ್ದಾಣ ಸ್ವಲ್ಪದರಲ್ಲೇ ಇದೆ. ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವ ಎಂದು ಹೇಳಿದ್ರು, ಆದರೆ ಮಹಿಳೆಗೆ ರೈಲಿನಲ್ಲಿ ಹೆರಿಗೆ ನೋವು ಹೆಚ್ಚಾಗಿತ್ತು.
ಈ ಘಟನೆ ಬಗ್ಗೆ ವಿಕಾಸ್ ಬೇಂದ್ರೆ ವಿವರಿಸುತ್ತಾರೆ. “ಆ ಮಹಿಳೆಯ ಒದ್ದಾಟ ನೋಡಲು ಆಗುತ್ತಿಲ್ಲ, ನನಗಂತೂ ಕಣ್ಣಲ್ಲಿ ನೀರು ಬಂತು. ಆಕೆ ಪರಿಸ್ಥಿತಿ ಹೇಗಿತ್ತೆಂದರೆ, ಮಗು ಸ್ವಲ್ಪ ಹೊರಗೆ, ಸ್ವಲ್ಪ ಒಳಗೆ ಇತ್ತು. ಏನು ಮಾಡುವುದು ಎಂದು ದಾರಿ ಕಾಣದೆ, ನನ್ನ ಪರಿಚಯದ ವೈದ್ಯರಿಗೆ ವಿಡಿಯೋ ಕಾಲ್ ಮಾಡಿದೆ. ಮೇಡಂ ಈ ಮಹಿಳೆಗೆ ಹೆರಿಗೆ ನೋವು ಬಂದಿದೆ ಎಂದೆಲ್ಲ ವಿವರಿಸಿದೆ. ಅವರು ಡೋಂಟ್ ವರಿ, ನಾನು ಹೇಳಿದ ರೀತಿ ಮಾಡಿ ಎಂದರು. ವೈದ್ಯರು ಹೇಳಿದಂತೆ ಹಂತ ಹಂತವಾಗಿ ಎಲ್ಲವನ್ನು ಮಾಡಿದೆ. ಅವರ ಮಾಗದರ್ಶನದಂತೆ ಎಲ್ಲವನ್ನು ಮಾಡಿದೆ. ನನ್ನ ಜೀವನದಲ್ಲಿ ಇದೇ ಮೊದಲು ಬಾರಿ ಒಂದು ಮಹಿಳೆಗೆ ಹೆರಿಗೆ ಮಾಡಿಸಿದ್ದು, ಅಬ್ಬಾಬ್ಬ ಇದು ನನಗೆ ಇವತ್ತಿಗೂ ಅಚ್ಚರಿಯಾಗಿದೆ. ಕೊನೆಗೂ ನಾನು ಮಾಡಿದ ಪ್ರಯತ್ನ ಫಲ ನೀಡಿದೆ, ನನ್ನಿಂದ ಒಂದು ಜೀವ ಸುರಕ್ಷಿತವಾಗಿ ತಾಯಿ ಹೊಟ್ಟೆಯಿಂದ ಹೊರ ಬಂದು ಈ ಜಗತ್ತನ್ನು ನೋಡಿ” ಎಂದು ವಿಕಾಸ್ ಬೇಂದ್ರೆ ಹೇಳಿದ್ದಾರೆ.
ಇದನ್ನೂ ಓದಿ: ಸರ್ ನನಗೆ ಪೈಲ್ಸ್ ಆಗಿದೆ, ರಜೆ ಬೇಕು ಅಂದ್ರೆ ಬ್ಯಾಂಕ್ ಮ್ಯಾನೇಜರ್ ಹೇಳಿದ್ದೇನು ಗೊತ್ತಾ?
ವಿಕಾಸ್ ಬೇಂದ್ರೆ ಅವರು ಈ ಕೆಲಸವನ್ನು ನೋಡಿ ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು ಪ್ರಶಂಸಿ ಕಮೆಂಟ್ ಮಾಡಿದ್ದಾರೆ. ನಿಮ್ಮ ಧೈರ್ಯಕ್ಕೆ ನನ್ನ ಸಲಾಂ ಸರ್ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ಆ ಮಗು ನಿಮ್ಮಿಂದ ಈ ಜಗತ್ತನ್ನು ನೋಡಬೇಕಿತ್ತು ಎಂಬುದು ಆ ವಿಧಿ ಲಿಖಿತ ಆಗಿರಬೇಕು ಎಂದು ಕಮೆಂಟ್ ಮಾಡಿದ್ದಾರೆ. ಆ ಮಗುವಿನ ಕುಟುಂಬ ಯಾವತ್ತೂ ನಿಮ್ಮನ್ನು ಮರೆಯುವುದಿಲ್ಲ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:24 pm, Thu, 16 October 25