Video: ಭಯ-ಭಕ್ತಿ ಇಲ್ಲದ ಜನ… ನಾಗರ ಪಂಚಮಿಯಂದು ನಾಗರಾಜನ ಮುಂದೆ ಕೇಕ್‌ ಕಟ್ ಮಾಡಿ ಯುವಕರ ಹುಚ್ಚಾಟ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 09, 2024 | 11:22 AM

ಇಂದು ನಾಗರ ಪಂಚಮಿ. ಈ ದಿನ ಶ್ರದ್ಧಾ ಭಕ್ತಿಯಿಂದ ನಾಗರ ಕಲ್ಲಿಗೆ ಅಥವಾ ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಭಕ್ತಿ ಪೂರ್ವಕವಾಗಿ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಆದ್ರೆ ಇಲ್ಲೊಂದಷ್ಟು ಯುವಕರು ಭಯ-ಭಕ್ತಿಯಿಲ್ಲದೆ ನಾಗರಾಜನ ಮುಂದೆ ಕೇಕ್‌ ಇಟ್ಟು ನಗುತಾ ನಗುತಾ ಬಾಳು ನೀನು ನೂರು ವರುಷ... ಎಂಬ ಹಾಡನ್ನು ಹಾಡುತ್ತಾ ನಾಗರ ಪಂಚಮಿಯಂದು ಹುಚ್ಚಾಟ ಮೆರೆದಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದ್ದು, ಯುವಕರ ಈ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Video: ಭಯ-ಭಕ್ತಿ ಇಲ್ಲದ ಜನ... ನಾಗರ ಪಂಚಮಿಯಂದು ನಾಗರಾಜನ ಮುಂದೆ ಕೇಕ್‌ ಕಟ್ ಮಾಡಿ ಯುವಕರ ಹುಚ್ಚಾಟ
ವೈರಲ್​​ ವಿಡಿಯೋ
Follow us on

ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ವ್ರತ, ಹಬ್ಬಗಳಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಪದ್ಧತಿ, ಆಚರಣೆಯ ವಿಧಿ-ವಿಧಾನಗಳು ಇರುತ್ತದೆ. ಈ ಹಬ್ಬಗಳಲ್ಲಿ ನಾಗರ ಪಂಚಮಿಯೂ ಒಂದು. ಶ್ರಾವಣ ಮಾಸದ ಶುಕ್ಷ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ನಾಗರ ಪಂಚಮಿಯನ್ನು ಭಕ್ತಿ-ಪೂರ್ವಕವಾಗಿ ಆಚರಿಸಲಾಗುತ್ತದೆ. ಈ ದಿನ ಶ್ರದ್ಧಾ ಭಕ್ತಿಯಿಂದ ನಾಗರ ಕಲ್ಲಿಗೆ ಅಥವಾ ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸಲಾಗುತ್ತದೆ. ಆದರೆ ಇಲ್ಲೊಂದಷ್ಟು ಯುವಕರು ಭಯ-ಭಕ್ತಿ ಇಲ್ಲದೆ, ಸಂಪ್ರದಾಯ ಆಚರಣೆಗಳಿಗೆ ಬೆಲೆ ಕೊಡದೆ ನಾಗರಾಜನ ಮುಂದೆ ಕೇಕ್‌ ಇಟ್ಟು ನಗುತಾ ನಗುತಾ ಬಾಳು ನೀನು ನೂರು ವರುಷ… ಎಂಬ ಹಾಡನ್ನು ಹಾಡುತ್ತಾ ನಾಗರ ಪಂಚಮಿಯ ಈ ದಿನ ಹುಚ್ಚಾಟ ಮೆರೆದಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದ್ದು, ಯುವಕರ ಈ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಶಾಂತರಾಯ್‌ (Shantaray H Hosur) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ನಾಗರ ಪಂಚಮಿಯಂದು ಹುಚ್ಚಾಟ ಮಾಡಿದ ಗೆಳೆಯರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ವಿಡಿಯೋದಲ್ಲಿ ಒಂದಷ್ಟು ಯುವಕರು ನಾಗರ ಹಾವಿನ ಮುಂದೆ ಕೇಕ್‌ ಇಟ್ಟು ನಾಗರ ಪಂಚಮಿ ಆಚರಿಸಿದ ದೃಶ್ಯವನ್ನು ಕಾಣಬಹುದು. ಈ ಯುವಕರು ಹಾವಿನ ಮುಂದೆ ನಿಂತು ನಗುತಾ ನಗುತಾ ಬಾಳು ನೀನು ನೂರು ವರುಷ… ಎಂಬ ಹಾಡನ್ನು ಹಾಡುತ್ತಾ ಹ್ಯಾಪಿ ಬರ್ತ್‌ ಡೇ ನಾಗು ಭಾಯ್‌ ಎನ್ನುತ್ತಾ ಭಯ-ಭಕ್ತಿ ಇಲ್ಲದೆ ನಮ್ಮ ಸಂಪ್ರದಾಯ, ಆಚರಣೆಗಳಿಗೆ ತಮಾಷೆ ಮಾಡುತ್ತಾ ಹುಚ್ಚಾಟ ಮೆರೆದಿದ್ದಾರೆ.

ಇದನ್ನೂ ಓದಿ: ಮೂಕ ಪ್ರಾಣಿಗಳನ್ನು ಸಹ ಬಿಡಲಿಲ್ಲ… ಮೃಗಾಲಯದ ಮೇಲೂ ದಾಳಿ ಮಾಡಿದ ಬಾಂಗ್ಲಾದೇಶದ ಪ್ರತಿಭಟನಾಕಾರರು

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಿಂದೂ ಧರ್ಮದ ಧಾರ್ಮಿಕ ನಂಬಿಕೆಯನ್ನು ಹೀಗೆ ಕೀಳು ಮಟ್ಟದಲ್ಲಿ ತಮಾಷೆಯಾಗಿ ತೋರಿಸುವುದು ಎಷ್ಟು ಸರಿʼ ಎಂದು ಕಿಡಿಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಿತಿ ಮೀರಿದ ಹುಚ್ಚುತನʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ