Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕಕಾಲದಲ್ಲಿ ಇಬ್ಬರು ವೈದ್ಯರನ್ನು ಪ್ರೀತಿಯ ಬಲೆಗೆ ಬೀಳಿಸಿದ ನರ್ಸ್; ವಿಷಯ ತಿಳಿದು ಐಸಿಯುಗೆ ದಾಖಲಾದ ಡಾಕ್ಟರ್ಸ್

ಏಕಕಾಲದಲ್ಲಿ ಒಂದೇ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಸ್ಫುರದ್ರೂಪಿ ನರ್ಸ್ ಒಬ್ಬಳು ತನ್ನ ಪ್ರೀತಿಯ ಬಲೆಗೆ ಬೀಳಿಸಿದ್ದಾಳೆ. ವರ್ಷಗಳ ಬಳಿಕ ಈಕೆಯ ಲವ್ವಿಡವ್ವಿ ಬಯಲಾಗಿದ್ದು, 27 ವರ್ಷದ ನರ್ಸ್​​ಗಾಗಿ 50ರ ಇಬ್ಬರು ವೈದ್ಯರು ಹೊಡೆದಾಡಿಕೊಂಡಿದ್ದು, ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏಕಕಾಲದಲ್ಲಿ ಇಬ್ಬರು ವೈದ್ಯರನ್ನು ಪ್ರೀತಿಯ ಬಲೆಗೆ ಬೀಳಿಸಿದ ನರ್ಸ್; ವಿಷಯ ತಿಳಿದು ಐಸಿಯುಗೆ ದಾಖಲಾದ ಡಾಕ್ಟರ್ಸ್
ಸಾಂದರ್ಭಿಕ ಚಿತ್ರImage Credit source: iStock
Follow us
ಅಕ್ಷತಾ ವರ್ಕಾಡಿ
|

Updated on:Aug 09, 2024 | 2:04 PM

ಚೀನಾ: ಒಂದೇ ಆಸ್ಪತ್ರೆಯ ಇಬ್ಬರು ವೈದ್ಯರನ್ನು ರಹಸ್ಯವಾಗಿ ತನ್ನ ಪ್ರೀತಿಯ ಬಲೆಗೆ ಬೀಳಿಸಿದ್ದ ನರ್ಸ್, ಅವರಿಂದ ದುಬಾರಿ ಉಡುಗೊರೆಗಳನ್ನು ಪಡೆದುಕೊಂಡಿದ್ದಾಳೆ. ಇವಳ ಲವ್ವಿಡವ್ವಿ ವರ್ಷಗಳ ಬಳಿಕ ವೈದ್ಯರಿಬ್ಬರಿಗೆ ತಿಳಿದಿದ್ದು, ಆಘಾತಕೊಳ್ಳಗಾಗಿದ್ದಾರೆ. ನಾವಿಬ್ಬರು ವರ್ಷಗಳಿಂದ ಒಂದೇ ಯುವತಿಯನ್ನು ಪ್ರೀತಿಸುತ್ತಿರುವುದು ಗೊತ್ತಾಗಿ ವೈದ್ಯರಿಬ್ಬರ ನಡುವೆ ಹೊಡೆದಾಟ ನಡೆದಿದೆ. ಇವರಿಬ್ಬರ ಜಗಳ ತಾರಕಕ್ಕೇರಿದ್ದು, ತೀವ್ರವಾಗಿ ಗಾಯಗೊಂಡ ವೈದ್ಯರನ್ನು ಐಸಿಯುಗೆ ದಾಖಲಿಸಲಾಗಿದೆ. ಈ ಘಟನೆ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ನಡೆದಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಪ್ರೀತಿಯ ಹೆಸರಿನಲ್ಲಿ ನರ್ಸ್ ಇಬ್ಬರು ವೈದ್ಯರಿಂದ ದುಬಾರಿ ಗಿಫ್ಟ್​​​ಗಳನ್ನು ಪಡೆದಿದ್ದಾಳೆ. ಒಬ್ಬನಿಂದ ಕೋಟಿ ಬೆಲೆಬಾಳುವ ಐಷಾರಾಮಿ ವಿಲ್ಲಾ ಪಡೆದರೆ ಮತ್ತೊಬ್ಬನಿಂದ ಐಷಾರಾಮಿ ಕಾರನ್ನು ಪಡೆದುಕೊಂಡಿದ್ದಾಳೆ.

ಚೀನಾದ ಜಿಯಾಂಗ್ಸು ಪ್ರಾಂತ್ಯದ ವುಕ್ಸಿ ಪೀಪಲ್ಸ್ ಆಸ್ಪತ್ರೆಯ ಸುಮಾರು 50 ವರ್ಷದ ಇಬ್ಬರು ವೈದ್ಯರು ಈಕೆಯಿಂದ ಮೋಸಕೊಳ್ಳಲಾದವರು ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಫುರದ್ರೂಪಿ ನರ್ಸ್​​​ ನನ್ನವಳು, ಇಲ್ಲ ನನ್ನವಳು ಎಂದು ಇಬ್ಬರೂ ಜಗಳವಾಡಲು ಪ್ರಾರಂಭಿಸಿದ್ದಾರೆ. ಜಗಳ ತೀವ್ರವಾಗಿದ್ದು, ಪರಸ್ಪರ ಹೊಡೆದಾಡಿಕೊಂಡು ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿದ ಮಕ್ಕಳು; ಮುಂದೆ ಆಗಿದ್ದೇನು ಗೊತ್ತಾ?

ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ, ಘಟನೆಗೆ ಕಾರಣರಾದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Fri, 9 August 24