AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Lefthanders Day 2026: ಬುದ್ಧಿವಂತಿಕೆ, ನಾಯಕತ್ವ; ಎಗಡೈ ಜನರಲ್ಲಿ ಈ ಎಲ್ಲಾ ವಿಶೇಷ ಗುಣಗಳಿವೆಯಂತೆ

ಪ್ರತಿ ವರ್ಷ ಆಗಸ್ಟ್ 13 ರಂದು ಅಂತರರಾಷ್ಟ್ರೀಯ ಎಡಗೈ ಜನರ ದಿನವನ್ನು ಆಚರಿಸಲಾಗುತ್ತದೆ. ತಿನ್ನಲು, ಕೆಲಸ ಮಾಡಲು ಹೀಗೆ ಪ್ರತಿಯೊಂದು ಕೆಲಸಕ್ಕೂ ಎಡಗೈಯನ್ನೇ ಬಳಸುವ ಲೆಫ್ಟೀಸ್‌ಗಳ ಈ ವಿಶೇಷ ಗುಣದ ಅನುಕೂಲಗಳು ಮತ್ತು ಅನಾನುಕೂಲದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಎಡಗೈ ಜನರು ಯಾವೆಲ್ಲಾ ವಿಶೇಷ ಗುಣಗಳನ್ನು ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

International Lefthanders Day 2026: ಬುದ್ಧಿವಂತಿಕೆ, ನಾಯಕತ್ವ; ಎಗಡೈ ಜನರಲ್ಲಿ ಈ ಎಲ್ಲಾ ವಿಶೇಷ ಗುಣಗಳಿವೆಯಂತೆ
ಅಂತಾರಾಷ್ಟ್ರೀಯ ಎಡಗೈ ಜನರ ದಿನ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 13, 2026 | 11:04 AM

Share

ಕೆಲವು ಜನರು ಬರೆಯಲು, ತಿನ್ನಲು ಹೀಗೆ ಪ್ರತಿಯೊಂದು ಕೆಲಸಕ್ಕೂ ಎಡಗೈಯನ್ನೇ ಬಳಸುತ್ತಾರೆ. ಪ್ರಪಂಚದಲ್ಲಿ ಶೇಕಡಾ 10 ರಷ್ಟು ಜನ ಲೆಫ್ಟೀಸ್‌ಗಳಿದ್ದಾರೆ. ಬಲಗೈಯನ್ನು ಬಳಸುವವರಿಗಾಗಿ ಪ್ರಪಂಚದ ಹೆಚ್ಚಿನ ವಸ್ತುಗಳು ಮತ್ತು ಉಪಕರಣಗಳು ಸಿದ್ಧವಾಗಿರುವುದರಿಂದ ಎಡಗೈ ಜನರಿಗೆ (Lefthanders) ಈ ಉಪಕರಣಗಳನ್ನು ಬಳಸುವುದು, ಕೆಲಸವನ್ನು ಮಾಡುವುದು ಸ್ವಲ್ಪ ಕಷ್ಟಕರವಾಗಿದೆ. ಇವೆಲ್ಲವನ್ನೂ ಕಷ್ಟ ಎಂದೂ ಭಾವಿಸದೆ ಬಲಗೈ ಜನರಂತೆ ಎಡಗೈ ಜನರೂ ಸಲೀಸಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಇವರ ಈ ವಿಶೇಷತೆಯನ್ನು ಶ್ಲಾಘಿಸಲು, ಎಡಗೈ ಜನರ ಈ ವಿಶೇಷ ಗುಣದ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಆಗಸ್ಟ್‌ 13 ರಂದು ಅಂತಾರಾಷ್ಟ್ರೀಯ ಎಡಗೈ ಜನರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಎಡಗೈ ಜನರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ.

ಅಂತಾರಾಷ್ಟ್ರೀಯ ಎಡಗೈ ಜನರ ದಿನದ ಇತಿಹಾಸವೇನು?

ಎಡಗೈ ಆಟಗಾರರ ಕ್ಲಬ್‌ನ ಸಂಸ್ಥಾಪಕ ಡೀನ್ ಆರ್. ಕ್ಯಾಂಪ್‌ಬೆಲ್ ಅವರು 1976 ರಲ್ಲಿ ಅಂತಾರಾಷ್ಟ್ರೀಯ ಎಡಗೈ ಆಟಗಾರರ ದಿನವನ್ನು ಪ್ರಾರಂಭಿಸಿದರು. ಎಡಗೈ ಆಟಗಾರರು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸಲು ಮತ್ತು ಬಲಗೈ ಜಗತ್ತಿನಲ್ಲಿ ಅವರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಲು ಅವರು ಈ ದಿನವನ್ನು ಆಚರಿಸಲು ನಿರ್ಧರಿಸಿದರು. ಅಂದಿನಿಂದ ಪ್ರತಿ ವರ್ಷ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಎಡಗೈ ಜನರ ಈ ವಿಶೇಷ ಗುಣದ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿವಾಗಿದೆ.

ಎಡಗೈ ಜನರ ವಿಶೇಷತೆಗಳೇನು?

ಹುಡುಗಿಯರಿಗಿಂತ ಹುಡುಗರು ಎಡಗೈ ಬಳಸುವ ಸಾಧ್ಯತೆ ಹೆಚ್ಚು, ಈ ಪ್ರವೃತ್ತಿಗೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಕಾರಣ. ಎಡಗೈ ಜನರಿಗೆ ಹುಣ್ಣು ಮತ್ತು ಸಂಧಿವಾತ ಬರುವ ಅಪಾಯ ಕಡಿಮೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ.  ಅಲ್ಲದೆ ಅವರು ಪಾರ್ಶ್ವವಾಯುವಿನಿಂದಲೂ ಬೇಗನೆ ಚೇತರಿಸಿಕೊಳ್ಳುತ್ತಾರಂತೆ. ಅಮೇರಿಕನ್ ಜರ್ನಲ್ ಆಫ್ ಸೈಕಾಲಜಿ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನವು ಎಡಗೈ ಜನರು ಬಲಗೈ ಜನರಿಗಿಂತ ವಿಭಿನ್ನ ಚಿಂತನೆ, ಸೃಜನಶೀಲತೆಯನ್ನು ಹೊಂದಿರುತ್ತಾರೆ ಎಂಬುದನ್ನು ಹೇಳಿದೆ..

2007 ರಲ್ಲಿ ಜರ್ನಲ್ ಆಫ್ ದಿ ಇಂಡಿಯನ್ ಅಕಾಡೆಮಿ ಆಫ್ ಅಪ್ಲೈಡ್ ಸೈಕಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ಎಡಗೈ ಜನರು ತಮ್ಮ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸುತ್ತಾರೆ ಆದರೆ ಬಲಗೈ ಜನರು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಂಡುಹಿಡಿದಿದೆ. ಹೆಚ್ಚುವರಿಯಾಗಿ, ಬ್ರೈನ್ ಜರ್ನಲ್‌ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು ಎಡಗೈ ಜನರು ಸಾಮಾನ್ಯವಾಗಿ ಹೆಚ್ಚಿನ ಐಕ್ಯೂ ಮಟ್ಟವನ್ನು ಹೊಂದಿರುತ್ತಾರೆ ಮತ್ತು ಬಲಗೈ ಜನರಿಗಿಂತ ಹೆಚ್ಚು ಬುದ್ಧಿವಂತರು ಎಂಬುದನ್ನು ಹೇಳಿದೆ.

ಇದನ್ನೂ ಓದಿ: ಅರಣ್ಯ ಪರಿಸರ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಆನೆಗಳ ಪಾತ್ರ ಅಪಾರ

ಎಡಗೈ ಜನರ ವ್ಯಕ್ತಿತ್ವದ ರಹಸ್ಯಗಳು:

ಎಡಗೈ ಜನರು ಸಾಮಾನ್ಯವಾಗಿ ಹೆಚ್ಚಿನ ಐಕ್ಯೂ ಮಟ್ಟವನ್ನು ಹೊಂದಿರುತ್ತಾರೆ ಮತ್ತು ಬಲಗೈ ಜನರಿಗಿಂತ ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಎಡಗೈ ಜನರು ಅತ್ಯುತ್ತಮ ನಾಯಕತ್ವ ಸಾಮರ್ಥ್ಯಗಳನ್ನು ಸಹ ಹೊಂದಿರುತ್ತಾರೆ. ಎಡಗೈ ಜನರು ಉತ್ತಮ ಕಲಾವಿದರು, ಸೃಜನಶೀಲರು ಮತ್ತು ಕ್ರೀಡಾಪಟುಗಳೂ ಹೌದು. ಕ್ರಿಕೆಟ್‌, ಬಾಕ್ಸಿಂಗ್, ಟೆನಿಸ್, ಗಾಲ್ಫ್ ಮುಂತಾದ ಕ್ರೀಡೆಗಳಲ್ಲಿ ಎಡಗೈ ಜನರು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ರಫೇಲ್‌ ನಡಾಲ್‌, ಡಿಯಾಗೋ ಮರಡೋನಾ, ಸಚಿನ್‌ ತೆಂಡೂಲ್ಕರ್‌, ಬ್ರಿಯಾನ್‌ ಲಾರಾ, ಪೆಲೆ ಈ ಎಲ್ಲಾ ಕ್ರೀಡಾಲೋಕದ ದಿಗ್ಗಜರು ಲೆಫ್ಟೀಸ್‌ಗಳಾಗಿದ್ದಾರೆ.

ಎಡಗೈ ಜನರು ಜೀವನದ ಸವಾಲುಗಳಿಗೆ ಹೆದರುವುದಿಲ್ಲ, ಅವುಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಅವರು ಅಪಾರ ತಾಳ್ಮೆ ಮತ್ತು ಇಚ್ಛಾಶಕ್ತಿಯನ್ನು ಹೊಂದಿರುತ್ತಾರೆ. ಪ್ರತಿಯೊಂದು ಪರಿಸ್ಥಿತಿಗೂ ಹೊಂದಿಕೊಳ್ಳುತ್ತಾರೆ. ಮುಖ್ಯವಾಗಿ ಇವರು ಏಕಕಾಲದಲ್ಲಿ ಹಲವು ವಿಷಯಗಳ ಬಗ್ಗೆ ಯೋಚಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us