ಯುವಕನೊಬ್ಬ ತನ್ನ ಪ್ರೇಯಸಿಯನ್ನು ತೊಡೆಯ ಮೇಲೆ ಕೂರಿಸಿ ಮುತ್ತಿಡುತ್ತಾ ಕಾರು ಡ್ರೈವ್ ಮಾಡಿಕೊಂಡು ಹೋಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವಾಹನ ದಟ್ಟನೆಯ ನಡುವೆ ಈ ರೀತಿಯ ಕೃತ್ಯವೆಸಗಿರುವ ಯುವಕನನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ.
ನಡುರಸ್ತೆಯಲ್ಲಿ ಈ ಜೋಡಿ ವಾಹನ ಓಡಾಡುತ್ತಿದ್ದರೂ ಲೆಕ್ಕಿಸದೇ ಕಿಸ್ಸಿಂಗ್, ಹಗ್ಗಿಂಗ್ ಅಂಡ್ ರೊಮ್ಯಾನ್ಸ್ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ
Couple driving car in compromising position in Dharampeth on Monday night.
Such irresponsible driving not only risk lives of the car driver and his girlfriend but also put other commuters in danger#nagpurnews #car #accident #nagpur #dharampeth pic.twitter.com/lKd3K2R1Mg
— nagpurnews (@nagpurnews3) July 15, 2024
ಇದನ್ನೂ ಓದಿ: ಕೆಂಪು ಬದಲು, ಮರೂನ್ ಬಣ್ಣದ ಲಿಪ್‌ಸ್ಟಿಕ್ ತಂದ ಪತಿ; ಡಿವೋರ್ಸ್ಗಾಗಿ ಕೋರ್ಟ್ ಮೆಟ್ಟಿಲೇರಿದ ಪತ್ನಿ
ಭಾರತೀಯ ನ್ಯಾಯ ಸಂಹಿತಾ (BNS) ಮತ್ತು ಮೋಟಾರು ವಾಹನಗಳ ಕಾಯಿದೆಯಡಿಯಲ್ಲಿ ವೇಗದ ಚಾಲನೆ, ಸಾರ್ವಜನಿಕ ಅಸಭ್ಯತೆ ಮತ್ತು ಆಕ್ಷೇಪಾರ್ಹ ವರ್ತನೆಯ ಆರೋಪಗಳ ಅಡಿ ಕೇಸು ದಾಖಲಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಜೋಡಿ 28 ವರ್ಷ ವಯಸ್ಸಿನವರಾಗಿದ್ದು, ಯುವಕ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಯುವತಿ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ ಎಂದು ವರದಿಯಾಗಿದೆ. ನಾಗ್ಪುರದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾದ ಲಾ ಕಾಲೇಜ್ ಸ್ಕ್ವೇರ್‌ನಿಂದ ಶಂಕರ್ ನಗರ ಮಾರ್ಗದಲ್ಲಿ ಈ ಘಟನೆ ನಡೆದಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ