ಈ ಸಲ ಕಪ್ ನಮ್ದೇ ಎಂದು ಕಪ್‌ಗಾಗಿ ಕಾಯುತ್ತಿರುವ, ಅಪಾರ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡದ ಕ್ರೇಜ್ ಯಾವತ್ತೂ ಕಡಿಮೆಯಾಗಲ್ಲ. ರಾಯಲ್ ಚಾಲೇಂಜರ್ಸ್ ಬೆಂಗಳೂರು ಗೆದ್ದರೂ ಸೋತರೂ ಕೂಡ ಈತಂಡಕ್ಕೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆರ್‌ಸಿಬಿ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನ ಜನಪ್ರಿಯ ತಂಡ ಎಂದೇ ಹೇಳಬಹುದು. ಸದ್ಯ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಆರ್‌ಸಿಬಿ ಅಭಿಮಾನಿಗಳ ಕ್ರೇಜ್ ಯಾವ ರೀತಿಯಲ್ಲಿ ಇದೆ ಎಂಬುದನ್ನು ಕಾಣಬಹುದು. ಮಗುವಿನ ನಾಮಕರಣ ಕಾರ್ಯಕ್ರಮದಲ್ಲೂ ಆರ್ ಸಿ ಬಿ ಕ್ರೇಜ್ ಕಂಡು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಸದ್ಯ ವಿಡಿಯೋವೊಂದು ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
@7eventzz ಎಂಬ ಇನ್ಟ್ಸಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನಾಮಕರಣ ಕಾರ್ಯಕ್ರಮವನ್ನು ಕಾಣಬಹುದು. ಈ ವೇಳೆ ಮಗುವಿನ ಹೆಸರನ್ನು ಆರ್‌ಸಿಬಿ ಜೆರ್ಸಿ ಮೂಲಕ ಅನಾವರಣಗೊಳಿಸಲಾಗಿದೆ. ಆರ್‌ಸಿಬಿ ಜೆರ್ಸಿ ಬಳಸಿ ಅದರ ಮೇಲೆ ಮಗುವಿನ ಹೆಸರು ಪ್ರಿಂಟ್ ಮಾಡಲಾಗಿದೆ. ಮಗುವಿನ ಹೆಸರು ಶರ್ವಿಲ್ ಮತ್ತು ನಂಬರ್ 21 ಎಂದು ಕೂಡ ಜೆರ್ಸಿಯಲ್ಲಿ ಬರೆಸಲಾಗಿದೆ.
ಇದನ್ನೂ ಓದಿ: ನಿಮ್ಮ ಸಂಗಾತಿಯೊಂದಿಗೆ ಸ್ನಾನ ಮಾಡಿ ನೀರು ಉಳಿಸಿ; ಸರ್ಕಾರ ಘೋಷಣೆ
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. “ಆರ್‌ಸಿಬಿ ಗತ್ತು ಎಲ್ಲರಿಗೂ ಗೊತ್ತು” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು “ಈ ಸಲ ಕಪ್ ನಮ್ದೇ” ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: