ನಾಸಾ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಬಲ್ ಟೆಲಿಸ್ಕೋಪ್ ಸೆರೆ ಹಿಡಿದ ಆಕರ್ಷಿಕ ಫೋಟೊಗಳನ್ನು ಪೋಸ್ಟ್ ಮಾಡಿದೆ. ಈ ಫೋಟೊಗಳು ಎರಡು ಸುಂದರ ಗೆಲಾಕ್ಸಿಯ ಮೇಲೆ ಬೆಳಕು ಚೆಲ್ಲಿವೆ. ಕೋಟಿಗಟ್ಟಲೆ ನಕ್ಷತ್ರಗಳನ್ನು ಹಾಗೂ ಗ್ರಹಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಗೆಲಾಕ್ಸಿ ಮಾತ್ರ ಏಕಾಂತ ವಾಸದಲ್ಲಿರುತ್ತದೆ. ಇದಕ್ಕೆ ಕಾರಣ ಒಂದು ಗ್ಯಾಲಕ್ಸಿಯಿಂದ ಮತ್ತೊಂದು ಗೆಲಾಕ್ಸಿಗೆ ಇರುವ ಅಂತರ. ಹಬಲ್ ಟೆಲಿಸ್ಕೋಪ್ ಸೆರೆಹಿಡಿದಿರುವ ಈ ಎರಡು ಗೆಲಾಕ್ಸಿಗಳು ಭೂಮಿಯಿಂದ 300 ದಶಲಕ್ಷ ಜ್ಯೋತಿರ್ವರ್ಷ ಅಂತರದಲ್ಲಿರುವ ಆ್ಯಂಡ್ರೋಮೆಡಾ ನಕ್ಷತ್ರಮಂಡಲದಲ್ಲಿದೆ. ಈ ಎರಡು ಗೆಲಾಕ್ಸಿಗಳು ಪರಸ್ಪರ ಸಂವಹನದಲ್ಲಿರುವಂತೆ ಗೋಚರವಾಗಿದ್ದು, ಕಾಸ್ಮಿಕ್ ಗುಲಾಬಿಯಂತೆ ಕಾಣಿಸುತ್ತಿದೆ.
ಈ ಫೋಟೊಗಳನ್ನು ಸುಮಾರು 10 ವರ್ಷಗಳ ಹಿಂದೆ ಸೆರೆಹಿಡಿಯಲಾಗಿದ್ದು, ನಾಸಾ ಈಗ ಇದನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪುನಃ ಪೋಸ್ಟ್ ಮಾಡಿದೆ. ಆರ್ಪ್ 273 ರ ಗೆಲಾಕ್ಸಿಗಳು ಗುರುತ್ವಾಕರ್ಷಣೆಯ ಸೆಳೆತದಿಂದ ಸಂವಹನ ನಡೆಸುತ್ತವೆ. ಯುಜಿಸಿ 1810 ಎಂಬ ದೊಡ್ಡ ಗಾತ್ರದ ಗೆಲಾಕ್ಸಿಯು ಕೆಳಗಿರುವ ಯುಜಿಸಿ 1813 ಗೆಲಾಕ್ಸಿಯ ಗುರುತ್ವಾಕರ್ಷಣೆಯಿಂದಾಗಿ ಗುಲಾಬಿ ತರಹದ ಆಕಾರದಲ್ಲಿ ಗೋಚರಿಸಿದೆ. ಚಿತ್ರದಲ್ಲಿ ನೀಲಿ ಬೆಳಕಿನ ಅಗಾಧವಾದ ನಕ್ಷತ್ರಗಳು ನಮಗೆ ಕಾಣ ಸಿಗುತ್ತದೆ.
ಕಾಸ್ಮಿಕ್ ಗುಲಾಬಿ ನಿಮಗಾಗಿ ಎಂದು ನಾಸಾ ತನ್ನ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದೆ
ದೊಡ್ಡ ರಂಗೋಲಿಗೆ ಕೈ ಬೆರಳ ತುದಿಯಲ್ಲಿ ಬಣ್ಣವನ್ನು ಮೆತ್ತಿಕೊಂಡು ಅದನ್ನು ಚಿಮುಕಿಸಿದ ಹಾಗೆ ಈ ಫೋಟೆ ಗೋಚರಿಸುತ್ತಿದೆ.
ನಾಸಾದ ಪ್ರಕಾರ, ಹಬಲ್ ಬಾಹ್ಯಾಕಾಶದಲ್ಲಿ ಇರಿಸಲಾದ ಮೊದಲ ಪ್ರಮುಖ ಆಪ್ಟಿಕಲ್ ಟೆಲಿಸ್ಕೋಪ್ ಆಗಿದೆ ಮತ್ತು ಇದು ಇಡೀ ವಿಶ್ವವನ್ನು ಯಾವುದೇ ತಡೆಯಿಲ್ಲದ ವೀಕ್ಷಿಸಲು ನೆರವಾಗಿದ್ದು, ವಿಜ್ಞಾನಿಗಳು ನಮ್ಮ ಸೌರವ್ಯೂಹದ ಅತ್ಯಂತ ದೂರದ ನಕ್ಷತ್ರಗಳು ಮತ್ತು ಗೆಲಾಕ್ಸಿಗಳನ್ನು ವೀಕ್ಷಿಸಲು ಇದು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಅಮೇರಿಕನ್ ಖಗೋಳಶಾಸ್ತ್ರಜ್ಞ ಎಡ್ವಿನ್ ಪಿ. ಹಬಲ್ ಅವರ ಹೆಸರಿನಲ್ಲಿ ಇದನ್ನು 1990 ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಇದು 1.3 ದಶಲಕ್ಷಕ್ಕೂ ಹೆಚ್ಚಿನ ಅವಲೋಕನಗಳನ್ನು ಮಾಡಿದೆ. ಬಾಹ್ಯಾಕಾಶ ಏಜೆನ್ಸಿಯ ಪ್ರಕಾರ, ವಾಷಿಂಗ್ಟನ್‌ನಿಂದ ಟೋಕಿಯೊದಲ್ಲಿ 10 ಅಡಿಗಿಂತಲೂ ಕಡಿಮೆ ಅಂತರದಲ್ಲಿರುವ ಜೋಡಿ ಫೈರ್‌ಫ್ಲೈಗಳನ್ನು ನೋಡುವ ಮಾದರಿಯಲ್ಲಿಯೇ, ಹಬಲ್ ಟೆಲಿಸ್ಕೋಪ್ ಬಾಹ್ಯಾಕಾಶದಲ್ಲಿನ ವಸ್ತುಗಳನ್ನು ವೀಕ್ಷಿಸುತ್ತದೆ ಎಂದು ತಿಳಿಸಿದೆ.
ಹಬಲ್ ಸೆರೆಹಿಡಿದಿರುವ ಬಾಹ್ಯಾಕಾಶದ ಹಲವಾರು ಅದ್ಭುತ ಘಟನೆಗಳನ್ನು ನಾಸಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.
ಹೋಳಿ ಹಬ್ಬ ಮುಗಿದ ನಂತರದಲ್ಲಿ ಬಣ್ಣಗಳು ನಾ ಹೆಚ್ಚು ನೀ ಹೆಚ್ಚು ಎಂದು ಒಂದನೊಂದು ಮಾತನಾಡಿಸಿದ ರೀತಿಯಲ್ಲಿ ಈ ಫೋಟೊ ಕಾಣಿಸುತ್ತಿದೆ.
ಇದನ್ನೂ ಓದಿ:
ನಾಸಾ ಬಿಡುಗಡೆಗೊಳಿಸಿದೆ ಆಕಾಶಗಂಗೆಯ ಅಮೋಘ ಚಿತ್ರ; ನೆಟ್ಟಿಗರು ಫುಲ್ ಫಿದಾ
Perseverance Rover | ಮಂಗಳನ ಅಂಗಳದಲ್ಲಿ ಇಳಿದ 24 ಗಂಟೆಗಳಲ್ಲೇ ಚಿತ್ರ ಕಳಿಸಲು ಶುರು ಮಾಡಿದ NASA ನೌಕೆ
Published On - 1:09 pm, Wed, 12 May 21