ನಾಸಾ (NASA) ಆಗಾಗ ಕೆಲವು ಕುತೂಹಲಕಾರಿ ಫೋಟೋಗಳನ್ನು ಹಂಚಿಕೊಳ್ಳುತ್ತದೆ. ಬಾಹ್ಯಾಕಾಶದಲ್ಲಿ ನಡೆಯುವ ವಿಸ್ಮಯಗಳು, ಕೆಲವು ವಿಚಿತ್ರಗಳನ್ನು ನಾಸಾ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಗಳ ಖಾತೆಯಲ್ಲಿ ಹಂಚಿಕೊಳ್ಳುತ್ತದೆ. ಇದೀಗ ನಾಸಾ ಹಂಚಿಕೊಂಡ ರೇಖಾ ಚಿತ್ರದಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ನೋಡಿದವರು ಅದು ಏನೆಂದು ಅರ್ಥವಾಗದೆ ತಲೆಕೆಡಿಸಿಕೊಂಡಿದ್ದಾರೆ, ಇನ್ಸ್ಟಾಗ್ರಾಮ್(Instagram) ನಲ್ಲಿ ಹಂಚಿಕೊಂಡ ಚಿತ್ರಕ್ಕೆ ನೀವು ಏನನ್ನು ನೋಡುತ್ತೀರಾ? ಟೆಲಿಸ್ಕೋಪ್, ನಕ್ಷತ್ರಪುಂಜಗಳನ್ನು ಕಾಣುತ್ತೀರಾ ಎಂದು ಆರಂಭದಲ್ಲಿ ಕ್ಯಾಪ್ಷನ್ ನೀಡಿದ್ದಾರೆ. ನಿಜ ಎಂದರೆ ಈ ಫೋಟೋಗಳು ನಾಸಾ ಕಲೆಹಾಕಿರುವ ಸ್ಲೋಪ್ಲೇಕ್ಸ್ (snowflake) ಫೋಟೊಗಳಲ್ಲಿ ಕೆಲವು ಆಗಿದೆ. ಇದು ಈಶಾನ್ಯ ಅಮೆರಿಕದೆಡೆಗೆ ಬೀಸುವ ಹಿಮಬಿರುಗಾಳಿ (snowstorms )ಯನ್ನು ಅಧ್ಯಯನ ಮಾಡಲು ಕಲೆಹಾಕಿದ ಫೋಟೋಗಳಾಗಿದೆ.
ಫೋಟೋ ಕ್ಯಾಪ್ಷನ್ನಲ್ಲಿ ಮಾಹಿತಿ ನೀಡಿದ ನಾಸಾ, ಪಿ 3ವಿಮಾನಕ್ಕೆ ಲಗತ್ತಿಸಲಾದ ಉಪಕರಣಗಳ ಮೂಲಕ ಹಿಮಬಿರುಗಾಳಿಯಲ್ಲಿನ ಕಣಗಳನ್ನು ಸಂಗ್ರಹಿಸಲಾಗಿದೆ. ಅಧ್ಯಯನದ ಉದ್ದೇಶದಿಂದ ಇದನ್ನು ಸಂಗ್ರಹಿಸಲಾಗಿದೆ. ಈ ಚಿತ್ರವನ್ನು ನೆಟ್ಟಿಗರು ಅರ್ಥೈಸಿಕೊಳ್ಳಲು ತಲೆಕೆಡಿಸಿಕೊಂಡಿದ್ದಾರೆ. ಫೋಟೋವನ್ನು ಫೆ.25ರಂದು ಹಂಚಿಕೊಳ್ಳಲಾಗಿದ್ದು ಈ ವರೆಗೆ 4 ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಳಿಸಿದೆ.
ಫೋಟೋ ನೋಡಿ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ಗಳನ್ನು ಮಾಡಿದ್ದಾರೆ. ಕೆಲವರು ವಾವ್ ಎಂದು ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ನಾಸಾ ಕ್ಯಾಪ್ಷನ್ನಲ್ಲಿ ವಿವರಣೆ ನೀಡಿದ್ದನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಹಿಮಬಿರುಗಾಳಿಯ ಕಣಗಳು ಈ ರೀತಿಯಲ್ಲಿಯೂ ಇರಲು ಸಾಧ್ಯವೇ ಎಂದು ಆಶ್ಚರ್ಯ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಸದ್ಯ ಫೋಟೋ ನೋಡಿದವರು ಅರ್ಥವಾಗದೆ ತಲೆಕೆರೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ:
ಉಕ್ರೇನ್- ರಷ್ಯಾ ಧ್ವಜ ಹೊದ್ದು ನಿಂತ ಜೋಡಿಯ ಪೋಟೋ ವೈರಲ್: ಇಲ್ಲಿದೆ ಫೋಟೋ ಹಿಂದಿನ ಅಸಲಿ ಕಹಾನಿ
Published On - 2:58 pm, Sat, 26 February 22