Viral: ಬಾತ್ರೂಮ್​ಗೆ ಹೋಗುವಾಗಲೂ ಉದ್ಯೋಗಿಗಳು ಸೈನ್​ಔಟ್​ ಮಾಡಬೇಕೆನ್ನುತ್ತಿರುವ ಮೇಲಧಿಕಾರಿ

|

Updated on: Aug 24, 2023 | 10:55 AM

Harassing Employee : ಶೌಚಾಲಯ ಮತ್ತು ಊಟದ ವಿರಾಮಗಳಿಗೂ ಸೈನೌಟ್​ ಮಾಡಬೇಕೆಂದು ಹೊಸ ಮೇಲಧಿಕಾರಿಯು ಹೇಳುತ್ತಿದ್ದಾರೆ. ಇಲ್ಲವಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ನೀಡುತ್ತಿದ್ದಾರೆ, ಕೆಲಸವನ್ನು ತೊರೆಯಲೇ? ಆದರೆ ನನಗೆ ಮನಸ್ಸಿಲ್ಲ ಎನ್ನುತ್ತಿದ್ದಾರೆ ರೆಡ್ಡಿಟ್​ ಖಾತೆದಾರರೊಬ್ಬರು. ಈ ವಿಷಯವಾಗಿ ನೆಟ್ಟಿಗರು ಮೇಲಧಿಕಾರಿಯ ನಡೆಗೆ ಕಾರಣವನ್ನೂ ವಿವರಿಸಿದ್ದಾರೆ ಮತ್ತು ಸಲಹೆಗಳನ್ನೂ ನೀಡಿದ್ದಾರೆ.

Viral: ಬಾತ್ರೂಮ್​ಗೆ ಹೋಗುವಾಗಲೂ ಉದ್ಯೋಗಿಗಳು ಸೈನ್​ಔಟ್​ ಮಾಡಬೇಕೆನ್ನುತ್ತಿರುವ ಮೇಲಧಿಕಾರಿ
ಪ್ರಾತಿನಿಧಿಕ ಚಿತ್ರ
Follow us on

Office : ‘ನಾನು 18 ವರ್ಷಗಳಿಂದ ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಟೀಮ್​ನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಹಿರಿಯ ಉದ್ಯೋಗಿಯೂ ಆಗಿದ್ದೇನೆ. ಆದರೆ ಇದೀಗ ಹೊಸ ಮೇಲಧಿಕಾರಿಯು (Boss) ಬಂದಾಗಿನಿಂದ ಶೌಚಾಲಯ ಮತ್ತು ಊಟದ ವಿರಾಮಕ್ಕೂ ನಮ್ಮಿಂದ ಸೈನ್​ಔಟ್​ ಮಾಡಬೇಕೆಂದು ನಿರೀಕ್ಷಿಸುತ್ತಿದ್ದಾರೆ. ಅಂದರೆ ಸದಾಕಾಲ ನಾವು ಎಲ್ಲಿದ್ದೇವೆ ಏನು ಮಾಡುತ್ತಿದ್ದೇವೆ ಎನ್ನುವುದನ್ನು ಅವರು ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಆದರೆ ಅವರ ಈ ಅನವಶ್ಯಕ ನಿಯಮವನ್ನು ನಾನು ನಿರಾಕರಿಸಿದ್ದೇನೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ರೆಡ್ಡಿಟ್​ನಲ್ಲಿ ಈ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ‘ಯಾರು ನ್ಯೂಸ್​ ನೋಡುತ್ತಿದ್ದಾರೆಂದು ನೆನಪಿಸಬಹುದೆ?’ ಆ್ಯಂಕರ್ ಲೈವ್​ನಲ್ಲಿ ತಡವರಿಸಿದ ಆ ಕ್ಷಣಗಳು

ಮುಂದುವರಿದ ಅವರು, ‘ಪತ್ರ ನನಗೀಗ ವಯಸ್ಸು 40. ನಾನೀಗ ಅವರ ಚೇಂಬರಿನೆದುರು ಕೂಡ ಓಡಾಡುತ್ತಿಲ್ಲ. ಆದರೆ ಶೌಚಾಲಯಕ್ಕೆ ಹೋಗುವಾಗ ಸಿಗ್ನಲ್​ ಸೆಟ್​ ಮಾಡಿ ಹೋಗುತ್ತೇನೆ. ಇನ್ನು ಊಟದ ವಿರಾಮ 30ನಿಮಿಷ ತೆಗೆದುಕೊಳ್ಳುತ್ತೇನೆ. ಈ ವಿರಾಮ ಸಮಯದಲ್ಲಿ ನಾನು ಸೈನ್​ಔಟ್ ಆಗದೇ ಇರುವ ಕಾರಣ ಅಸಹಕಾರ ಮತ್ತು ಸೂಚನೆಗಳನ್ನು ಅನುಸರಿಸುವಲ್ಲಿ ವಿಫಲನಾಗಿದ್ದೇನೆ ಎಂಬ ಕಾರಣ ನೀಡಿ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ.’ ಎಂದಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರೆಡ್ಡಿಟ್​ನಲ್ಲಿಯ ಈ ಪೋಸ್ಟ್​

My new boss wants us to sign out anytime we go to bathroom or take lunch. I refuse to do so and have been threatened to be written up. What do I do?
by u/Maleficent_Ad7033 in antiwork

‘ಈ ಕಾರಣದಿಂದಾಗಿ ಕೆಲಸವನ್ನೇ ತೊರೆಯುವ ಬಗ್ಗೆ ಯೋಚಿಸುತ್ತಿದ್ದೇನೆ. ಆದರೆ ಡಿಸೈನ್​ ಎಂಜಿನಿಯರಿಂಗ್​ ನನ್ನ ಆಸಕ್ತಿಕರ ಕ್ಷೇತ್ರ ಹೆಚ್ಚಿನದನ್ನು ಸಾಧಿಸಲು ಇಷ್ಟಪಡುತ್ತೇನೆ, ಈಗಾಗಲೇ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡಿದ್ದೇನೆ. ಹಾಗಾಗಿ ಎಚ್​ಆರ್​ ಬಳಿ ಮಾತನಾಡಬೇಕು ಎಂದುಕೊಂಡಿದ್ದೇನೆ. ಈ ವಿಷಯವಾಗಿ ನೀವು ಏನು ಸಲಹೆ ನೀಡುತ್ತೀರಿ?’ ಎಂದು ನೆಟ್ಟಿಗರಲ್ಲಿ ಕೇಳಿದ್ದಾರೆ.

ಇದನ್ನೂ ಓದಿ : Viral Video: 13 ಗಂಟೆಗಳಲ್ಲಿ 73 ಕಿಮೀ ನಡೆದು ಬೆಂಗಳೂರಿನಲ್ಲಿ ‘ಭಾರತದ ನಕ್ಷೆ’ ಗುರುತಿಸಿದ ಈ ವ್ಯಕ್ತಿ

ಈ ತನಕ ಸುಮಾರು 22,000 ಜನರು ಈ ಪೋಸ್ಟ್​ ಅನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಇವರಿಗೆ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದ್ದಾರೆ. ನೀವು 18 ವರ್ಷಗಳಿಂದ ಈ ಕಂಪೆನಿಯಲ್ಲಿಯೇ ಕೆಲಸ ಮಾಡುತ್ತಿದ್ದೀರಿ. ಅಂದರೆ ಹೆಚ್ಚು ಸಂಬಳ ಪಡೆಯುವವರಲ್ಲಿ ಒಬ್ಬರಾಗಿದ್ದೀರಿ. ಕಂಪೆನಿಯ ಲಾಭ ಲೆಕ್ಕಾಚಾರದ ಹಿನ್ನೆಲೆಯಲ್ಲಿ ನಿಮ್ಮನ್ನು ಕೆಲಸದಿಂದ ತೆಗೆಯುವುದು ಅವರ ಆಲೋಚನೆಯಾಗಿರಬಹುದು ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral: ಬೆಂಗಳೂರು; ನಾಯಿಮಾಂಸ ಕಾನೂನುಬದ್ಧಗೊಳಿಸಿ; ಭಿತ್ತಿಫಲಕ ಹಿಡಿದ ಯುವಕನ ವಿರುದ್ಧ ನೆಟ್ಟಿಗರ ಆಕ್ರೋಶ

ಎಚ್ಆರ್​ ಪಾಲಿಸಿಗೂ ನಿಮ್ಮ ಮೇಲಧಿಕಾರಿಯ ಈ ಹೊಸ ನಿಯಮಗಳಿಗೂ ಸಂಬಂಧವೇ ಇಲ್ಲ. ಬೇರೆ ಕಂಪೆನಿಯಲ್ಲಿ ಕೆಲಸ ಹುಡುಕಿಕೊಳ್ಳುವುದು ಸೂಕ್ತ, ಸಾಮಾನ್ಯವಾಗಿ ಮೇಲಧಿಕಾರಿಯು ಎಚ್​​ಆರ್​ನೊಂದಿಗೆ ಚರ್ಚಿಸಿಯೇ ಮತ್ತು ತಮ್ಮ ಕಾರ್ಯರೂಪಯೋಜನೆಗೆ ಪೂರಕವಾಗಿ ಇಂಥ ನಿಯಂತ್ರಣಾ ತಂತ್ರವನ್ನು ರೂಪಿಸಿರುತ್ತಾರೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಕಾನ್ಫಿಡೆನ್ಸ್​ ಈಸ್ ಸೆಕ್ಸಿ; ಮಾಡೆಲಿಂಗ್ ಕ್ಷೇತ್ರಕ್ಕೆ ಈಕೆ ಕಾಲಿಟ್ಟಾಗ ವಯಸ್ಸು 50!

ಬಾತ್ರೂಮ್​ ಬ್ರೇಕ್​​, ಲಂಚ್ ಬ್ರೇಕ್​, ಕಾಫೀ ಬ್ರೇಕ್​ ಅನ್ನು ನಿಯಂತ್ರಿಸುವುದರಿಂದ ಉದ್ಯೋಗಿಗಳಿಂದ ಪರಿಣಾಮಕಾರಿಯಾಗಿ ಕೆಲಸವನ್ನು ಮಾಡಿಸಲು ಸಾಧ್ಯ ಎಂದು ನಿಮ್ಮ ಮೇಲಧಿಕಾರಿ ತಿಳಿದುಕೊಂಡಿದ್ದರೆ ಅದು ಶುದ್ಧ ಮೂರ್ಖತನ. ಇದು ಅವರ ಅಸಾಮರ್ಥ್ಯವನ್ನು ತೋರಿಸುತ್ತದೆ. ಆಗ ಅಸಹಾಯಕತೆಯಿಂದ ಅವರು ವಿನಾಕಾರಣ ನಿಯಂತ್ರಿಸಲು ಶುರುಮಾಡುತ್ತಾರೆ ಎಂದು ಹೇಳಿದ್ದಾರೆ ಮತ್ತೊಬ್ಬರು.

ಈ ವಿಡಿಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:52 am, Thu, 24 August 23