ದೆಹಲಿ: ಹೋಮ್‌ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಉರಿ ಬಿಸಿಲಿನಲ್ಲಿ ಮಗಳ ಕೈಕಾಲು ಕಟ್ಟಿಹಾಕಿದ ತಾಯಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 09, 2022 | 7:09 AM

ತಾಯಂದಿರು ತಮ್ಮ ಮಕ್ಕಳನ್ನು ಎಷ್ಟು ಮುದ್ದು ಮಾಡುತ್ತಾರೊ, ಮಕ್ಕಳು ಏನಾದರೂ ತಪ್ಪು ಮಾಡಿದಾಗ ಅಷ್ಟೇ ಶಿಕ್ಷಿಸುತ್ತಾರೆ. ಸದ್ಯ ಹೋಮ್​ ವರ್ಕ್ ಮಾಡಿಲ್ಲವೆಂಬ ಕಾರಣಕ್ಕೆ ತಾಯಿ ತನ್ನ ಮಗಳನ್ನು ಉರಿ ಬಿಸಿಲಿನಲ್ಲಿ ಕೈಕಾಲು ಕಟ್ಟಿ ಹಾಕಿರುವ ವಿಡಿಯೋ ವೈರಲ್ ಆಗಿದೆ.

ದೆಹಲಿ: ಹೋಮ್‌ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಉರಿ ಬಿಸಿಲಿನಲ್ಲಿ ಮಗಳ ಕೈಕಾಲು ಕಟ್ಟಿಹಾಕಿದ ತಾಯಿ
ಉರಿ ಬಿಸಿಲಿನಲ್ಲಿ ನರಳಾಡುತ್ತಿರುವ ಬಾಲಕಿ
Follow us on

ದೆಹಲಿಯ ಮನೆಯೊಂದರ ಮೇಲೆ ಐದು ವರ್ಷದ ಬಾಲಕಿ ಕೈಕಾಲುಗಳನ್ನು ಕಟ್ಟಿಕೊಂಡು ಸುಡುವ ಬಿಸಿಲಿನಲ್ಲಿ ಕಷ್ಟಪಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿ ಪೊಲೀಸರು ನಡೆಸಿದ ಆರಂಭಿಕ ತನಿಖೆಯಲ್ಲಿ ಬಾಲಕಿಯ  ತಾಯಿ ತನ್ನ ಶಾಲೆಯ ಹೋಮ್​ ವರ್ಕ್​ ಮಾಡಿಲ್ಲ ಎನ್ನುವ ಕಾರಣಕ್ಕೆ ಶಿಕ್ಷೆ ವಿಧಿಸಿದ್ದಾಳೆ ಎಂದು ತಿಳಿದುಬಂದಿದೆ. ಮೊದಲಿಗೆ, ವಿಡಿಯೋ ಕರವಾಲ್ ನಗರ ಪ್ರದೇಶದಿಂದ ಹರಿ ಬಿಡಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಆದರೆ ಅಲ್ಲಿ ಘಟನೆಗೆ ಸಂಬಂಧಿಸಿದ ಯಾವುದನ್ನೂ ಪೊಲೀಸರು ಪತ್ತೆ ಮಾಡಲಿಲ್ಲ. ನಂತರ, ವಿಡಿಯೋ ತುಕ್ಮೀರ್‌ಪುರದ ಖಜೂರಿ ಖಾಸ್ ಪ್ರದೇಶದು ಎಂದು ತಿಳಿದು ಬಂದಿದ್ದು, ಮನೆಯನ್ನು ಪತ್ತೆಹಚ್ಚಲಾಯಿತು.

ಇದನ್ನೂ ಓದಿ: Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಈ ದಿನ ದೇವರ ಕೃಪೆಯಿಂದ ಅನೇಕ ಕಾರ್ಯಗಳು ನಡೆಯುತ್ತವೆ


ವಿಡಿಯೋದಲ್ಲಿ, ಬಾಲಕಿಯನ್ನು ಮನೆಯ ಛಾವಣಿಯ ಮೇಲೆ ಹಗ್ಗದಿಂದ ಕಟ್ಟಲಾಗಿದ್ದು, ಬಿಸಿಲಿನ ನಡುವೆ ತನ್ನನ್ನು ಬಿಡಿಸಿಕೊಳ್ಳಲು ಹೆಣಗಾಡುತ್ತಿರುವುದನ್ನು ಕಾಣಬಹುದು. ಸುಡುವ ಬಿಸಿಲಿನ ಶಾಖದಿಂದ ಆಕೆಯ ಚರ್ಮವು ಸುಡುತ್ತಿದ್ದು, ಬಾಲಕಿಯು ನೋವಿನಿಂದ ಕಿರುಚುವುದು ಕೇಳಿಸುತ್ತದೆ. ಹೋಮ್​ ವರ್ಕ್ ಮಾಡದ ಮಗಳನ್ನು ಐದರಿಂದ ಏಳು ನಿಮಿಷಗಳ ಕಾಲ ಶಿಕ್ಷಿಸಿ ನಂತರ ಬಾಲಕಿಯನ್ನು ಕೆಳಗಿಳಿಸಿರುವುದಾಗಿ ಮಗುವಿನ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

ದೆಹಲಿ ಪೊಲೀಸರ ತನಿಖೆ 

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ದೆಹಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ತನಿಖೆಯ ನಂತರ, ಪೊಲೀಸರು ವಿಳಾಸ ಮತ್ತು ಕುಟುಂಬವನ್ನು ಪತ್ತೆಹಚ್ಚಿದ್ದಾರೆ. ದೆಹಲಿ ಪೊಲೀಸರು ತನ್ನ ಟ್ವಿಟರ್‌ನಲ್ಲಿ ಈ ಕುರಿತಾಗಿ ಬರೆದುಕೊಂಡಿದ್ದು, ಒಂದು ಹೆಣ್ಣು ಮಗುವನ್ನು ಮನೆಯ ಛಾವಣಿಯ ಮೇಲೆ ಕಟ್ಟಿಹಾಕಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಆಕೆಯನ್ನು ಗುರುತಿಸಿ ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ. ಬಾಲಕಿಯ ಕುಟುಂಬ ಗುರುತಿಸಲಾಗಿದ್ದು, ಮತ್ತು ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:09 am, Thu, 9 June 22