AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೂರಿ ಫ್ರುಟ್​ ದೋಸೆ ನೋಡಿ ನೋ ಥ್ಯಾಂಕ್ಸ್​ ಎಂದ ನೆಟ್ಟಿಗರು: ವಿಡಿಯೋ ವೈರಲ್​

ತಂದೂರಿ ಫ್ರುಟ್​ ಮಸಾಲಾ ದೋಸೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್​ಆಗುತ್ತಿದೆ. ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋ ನೋಡಿ ನೆಟ್ಟಿಗರು ಮೂಗುಮುರಿದಿದ್ದಾರೆ.

ತಂದೂರಿ ಫ್ರುಟ್​ ದೋಸೆ ನೋಡಿ ನೋ ಥ್ಯಾಂಕ್ಸ್​ ಎಂದ ನೆಟ್ಟಿಗರು: ವಿಡಿಯೋ ವೈರಲ್​
ತಂದೂರಿ ಫ್ರುಟ್​ ದೋಸೆ
TV9 Web
| Edited By: |

Updated on:Mar 20, 2022 | 12:50 PM

Share

ಫುಡ್​ ಬ್ಲಾಗರ್​ಗಳ (Food Blogger) ತರಹೇವಾರಿ ತಿನಿಸುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿಆಗಾಗ ವೈರಲ್​ ಆಗುತ್ತಲೇ ಇರುತ್ತವೆ. ಈ ಹಿಂದೆ ಮಿರಿಂಡಾ ಗೋಲಗಪ್ಪಾ, ಐಸ್​ ಗೋಲಗಪ್ಪಾ, ಐಸ್​ಕ್ರೀಮ್​ ದೋಸೆ, ಜಾಮೂನ್​ ಪರೋಟ ಹೀಗೆ ಹತ್ತಾರು ಬಗೆಯ ತಿಂಡಿಗಳು ನೆಟ್ಟಿಗರ ಕಣ್ಣುಕುಕ್ಕಿವೆ ಇದೀಗ ಇನ್ನೊಂದು ವಿಡಿಯೋ ನೆಟ್ಟಿಗರನ್ನು ಸೆಳೆದಿದೆ. ಆದರೆ ನೆಟ್ಟಿಗರು ಈ ಹೊಸ ಫುಡ್​ ನೋಡಿ ನೋ ಥ್ಯಾಂಕ್ಸ್​ ಎಂದಿದ್ದಾರೆ. ಹೌದು ಈ ಬಾರಿ ತಂದೂರಿ ಫ್ರುಟ್​ ಮಸಾಲಾ ದೋಸೆಯ (Tandoori Fruit Masala Dosa) ವಿಡಿಯೋ ಸಿಕ್ಕಾಪಟ್ಟೆ ವೈರಲ್​ಆಗುತ್ತಿದೆ. ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋ ನೋಡಿ ನೆಟ್ಟಿಗರು ಮೂಗುಮುರಿದಿದ್ದಾರೆ.

ವಿಡಿಯೋದಲ್ಲಿ ವ್ಯಕ್ತಿಯೊಬ್ಬ ದೋಸೆ ಪ್ಯಾನ್‌ಗೆ ಬೆಂಕಿ ಹಚ್ಚಿ ನಂತರ ಬಿಸಿ ಬಾಣಲೆಯ ಮೇಲೆ ದೋಸೆ ಹಿಟ್ಟನ್ನು ಇಡುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಅವನು ಸ್ವಲ್ಪ ಎಣ್ಣೆಯಿಂದ ಬೇಸ್ ಅನ್ನು ಸರಿಯಾಗಿ ಹೊಂದಿಸುತ್ತಾನೆ ಮತ್ತು ನಂತರ ಅದಕ್ಕೆ ಕೆಲವು ಕತ್ತರಿಸಿದ ಹಣ್ಣುಗಳನ್ನು ಸೇರಿಸುತ್ತಾನೆ. ತಂದೂರಿ ಮಸಾಲವನ್ನು ನೀಡಲು ಅವರು ಕೆಲವು ಚಾಟ್ ಮಸಾಲವನ್ನು ಕೂಡ ಸೇರಿಸುತ್ತಾರೆ. ಕೊನೆಯದಾಗಿ, ದೋಸೆಯು ಚೀಸ್ ಮತ್ತು ಹಣ್ಣಿನ ತುಂಡುಗಳನ್ನು ಹೇರಳವಾಗಿ ಹಾಕುತ್ತಾನೆ.

ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ವಿಡಿಯೋ ನೋಡಿ ನೆಟ್ಟಿಗರು ಛೀ ಇದೆಂತ ತಿಂಡಿ, ದೇವರೆ ಯಾಕಪ್ಪ ಎಂದು ಚಿತ್ರವಿಚಿತ್ರವಾಗಿ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಕಲರ್​ಫುಲ್​ ಹೂವುಗಳ ಡೂಡಲ್​ ಮೂಲಕ ಪರ್ಷಿಯನ್​ ಹೊಸ ವರ್ಷ ಆಚರಿಸಿದ ಗೂಗಲ್​

Published On - 12:48 pm, Sun, 20 March 22