Viral Video: ಈ ನಾಯಿಯ ನಟನೆ ಎಲ್ಲರನ್ನು ಬೆರಗಾಗಿಸುತ್ತದೆ; ಇಲ್ಲಿದೆ ವೈರಲ್ ವಿಡಿಯೋ

ಬಹುಶಃ ಕೆಲವು ಪ್ರಾಣಿಗಳು ಸಹ ಈ ಎಲ್ಲಾ ವಿಷಯಗಳನ್ನು ಅನುಸರಿಸುತ್ತವೆ. ಅದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್​ ಆಗಿದೆ. ಹೌದು ನಾಯಿ ಸಹ ಸತ್ತಂತೆ ಬಹಳ ಚೆನ್ನಾಗಿ ನಟಿಸಿದೆ. ನೆಟ್ಟಿಗರು ಈ ವಿಡಿಯೋ ಕಂಡು ಬೆರಗಾಗಿದ್ದಾರೆ.

Viral Video: ಈ ನಾಯಿಯ ನಟನೆ ಎಲ್ಲರನ್ನು ಬೆರಗಾಗಿಸುತ್ತದೆ; ಇಲ್ಲಿದೆ ವೈರಲ್ ವಿಡಿಯೋ
ನಾಯಿ
Follow us
TV9 Web
| Updated By: preethi shettigar

Updated on:Mar 20, 2022 | 10:02 PM

ಸಿನಿಮಾ, ಧಾರಾವಾಹಿಗಳಲ್ಲಿ ಸತ್ತಂತೆ ನಟನೆ ಮಾಡುವುದು ಅಥವಾ ಬಂದೂಕಿನಿಂದ ಶೂಟ್​ ಮಾಡಿದಾಗ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವುದು ಸಾಮಾನ್ಯ ಅಥವಾ ನಟನೆಯ ಒಂದು ಭಾಗ. ಯಾವ ರೀತಿಯಲ್ಲಿ ನಟ ಅಥವಾ ನಟಿಯರು ತಕ್ಷಣವೇ ಸಾಯುತ್ತಾರೆ? ಸಾಯುವಾಗ ಒಬ್ಬ ವ್ಯಕ್ತಿಯು ಅನುಭವಿಸುವ ಎಲ್ಲಾ ಭಾವನೆಗಳನ್ನು ಹೇಗೆ ಬಹಿರಂಗಪಡಿಸಬೇಕು ಎನ್ನುವುದನ್ನು ಅವರು ತಮ್ಮ ನಟನೆಯ ಮೂಲಕ ತೋರಿಸುತ್ತಾರೆ.  ಬಹುಶಃ ಕೆಲವು ಪ್ರಾಣಿಗಳು(Animals) ಸಹ ಈ ಎಲ್ಲಾ ವಿಷಯಗಳನ್ನು ಅನುಸರಿಸುತ್ತವೆ. ಅದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್(Viral)​ ಆಗಿದೆ. ಹೌದು ನಾಯಿ(Dog) ಸಹ ಸತ್ತಂತೆ ಬಹಳ ಚೆನ್ನಾಗಿ ನಟಿಸಿದೆ. ನೆಟ್ಟಿಗರು ಈ ವಿಡಿಯೋ ಕಂಡು ಬೆರಗಾಗಿದ್ದಾರೆ.

ಜಗತ್ತಿನಲ್ಲಿ ಅನೇಕ ಪ್ರಾಣಿಗಳಿವೆ, ಆದರೆ ಅವುಗಳಲ್ಲಿ ಕೆಲವು ಮಾತ್ರ ಸಾಕುಪ್ರಾಣಿಗಳಾಗಿವೆ. ಈ ಪ್ರಾಣಿಗಳ ಪಟ್ಟಿಯಲ್ಲಿ ನಾಯಿಯ ಹೆಸರು ಅಗ್ರಸ್ಥಾನದಲ್ಲಿದೆ. ಯಾಕೆಂದರೆ ಮುದ್ದಾಗಿರುವುದರ ಜೊತೆಗೆ ಯಜಮಾನನಿಗೆ ನಿಷ್ಠನಾಗಿರುತ್ತದೆ ಈ ಪ್ರಾಣಿ. ಇದರೊಂದಿಗೆ ಉತ್ತಮ ನಟನೂ ಹೌದು. ಇದಕ್ಕೆ ಸಾಕ್ಷಿ ವೈರಲ್ ಆಗುತ್ತಿರುವ ಈ ವೀಡಿಯೋ.

ವಿಡಿಯೋದಲ್ಲಿ ಮಾಲೀಕನೊಬ್ಬ ತನ್ನ ಮುದ್ದಿನ ನಾಯಿಯೊಂದಿಗೆ ಸಿನಿಮಾ ಶೈಲಿಯಲ್ಲಿ ನಟನೆ ಮಾಡುತ್ತಿರುವುದನ್ನು ನೀವು ನೋಡಬಹುದು. ಮಾಲೀಕನು ತನ್ನ ಕೈಯಿಂದ ಮಾಡಿದ ಗನ್​ ಹಿಡಿದು ಶೂಟ್ ಮಾಡಿ ನಾಯಿಯ ಕಡೆಗೆ ತೋರಿಸಿದ್ದಾನೆ. ಗುಂಡಿನ ಶಬ್ದ ಕೇಳಿದ ತಕ್ಷಣ ನಾಯಿ ಗಾಯಗೊಂಡಂತೆ ವರ್ತಿಸಲು ಪ್ರಾರಂಭಿಸುತ್ತದೆ. ಇದನ್ನು ನೋಡಿದವರು ಒಮ್ಮೆಗೆ ನಿಜವಾಗಿಯೂ ಗುಂಡು ಹಾರಿಸಿದ್ದಾನೆ ಎಂದು ಬೆರಗಾಗುವಂತೆ ಇದೆ. ಆದರೆ ವಿಡಿಯೋ ಕೊನೆಯಲ್ಲಿ ನಾಯಿ ಮತ್ತೆ ಎದ್ದು ನಿಲ್ಲಲು ಪ್ರಯತ್ನಿಸುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಜನರು ನಾಯಿಯ ನಟನೆಯನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಈ ವೀಡಿಯೊವನ್ನು ಸೂಪರ್ ಫನ್ನಿ ಅನಿಮಲ್ಸ್ ಪೇಜ್‌ನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹೆಚ್ಚಿನ ವಿವ್ಯೂವ್ಸ್​ ಪಡೆದುಕೊಂಡಿರುವ ಈ ವಿಡಿಯೋ ಸದ್ಯ ಟ್ರೆಂಡ್​ ಆಗಿದೆ. ಈ ನಾಯಿಯ ನಟನೆಯ ಮುಂದೆ ದೊಡ್ಡ ನಟರು ಕೂಡ ಫೇಲ್ ಆಗಿದ್ದಾರೆ ಎಂದು ಒಬ್ಬರು ಕಮೆಂಟ್​ ಮಾಡಿದರೆ, ಈ ನಾಯಿಯ ನಟನೆಗೆ ನಾನು ಅಭಿಮಾನಿ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಉಕ್ರೇನ್​ ನಿರಾಶ್ರಿತರ ಮಕ್ಕಳೊಂದಿಗೆ ಆಟವಾಡಿದ ಸ್ಲೋವಾಕ್ ಪೊಲೀಸ್ ಅಧಿಕಾರಿಗಳು: ವಿಡಿಯೋ ವೈರಲ್​

ಹೋಳಿ ಆಟದ ನಡುವೆ ಪರಸ್ಪರ ಚಪ್ಪಲಿ ಎಸೆದುಕೊಂಡ ಜನತೆ: ವಿಚಿತ್ರ ಹೋಳಿ ಆಚರಣೆಯ ವಿಡಿಯೋ ವೈರಲ್​

Published On - 9:57 pm, Sun, 20 March 22