AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಆಟದ ನಡುವೆ ಪರಸ್ಪರ ಚಪ್ಪಲಿ ಎಸೆದುಕೊಂಡ ಜನತೆ: ವಿಚಿತ್ರ ಹೋಳಿ ಆಚರಣೆಯ ವಿಡಿಯೋ ವೈರಲ್​

ಬಿಹಾರದ ಪಾಟ್ನಾದಲ್ಲಿ ಪರಸ್ಪರ ಚಪ್ಪಲಿ ಎಸೆದುಕೊಂಡು ಹೋಳಿ ಹಬ್ಬವನ್ನು ಆಚರಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹೋಳಿ ಆಟದ ನಡುವೆ ಪರಸ್ಪರ ಚಪ್ಪಲಿ ಎಸೆದುಕೊಂಡ ಜನತೆ: ವಿಚಿತ್ರ ಹೋಳಿ ಆಚರಣೆಯ ವಿಡಿಯೋ ವೈರಲ್​
ಚಪ್ಪಲಿ ಎಸೆದುಕೊಂಡು ಹೋಳಿ ಆಚರಣೆ
TV9 Web
| Edited By: |

Updated on: Mar 18, 2022 | 12:34 PM

Share

ಇಂದು ದೇಶದಾದ್ಯಂತ ರಂಗಿನಾಟ ಹೋಳಿ (Holi)  ಹಬ್ಬದ ಸಂಭ್ರಮ. ಪರಸ್ಪರ ಬಣ್ಣಗಳನ್ನು ಎರಚಿಕೊಂಡು  ಹಬ್ಬ ಆಚರಿಸಲಾಗಿತ್ತಿದೆ. ಹೋಳಿ ಎಂದರೆ ಸಿಹಿ ಹಂಚಿ, ಹೊಸ ಬಟ್ಟೆ ತೊಟ್ಟು ಖುಷಿಯಿಂದ ಆಚರಿಸಲಾಗುತ್ತದೆ. ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಹೋಳಿಯನ್ನು ಆಚರಿಸಲಾಗುತ್ತದೆ. ವಿಜಯದ ಸಂಕೇತವಾದ ಈ ಹಬ್ಬವನ್ನು ಶೃದ್ಧೆಯಿಂದ ಆಚರಿಸಲಾಗುತ್ತದೆ. ಆದರೆ ಬಿಹಾರದ ಪಾಟ್ನಾದಲ್ಲಿ ಪರಸ್ಪರ ಚಪ್ಪಲಿ (slippers) ಎಸೆದುಕೊಂಡು ಹೋಳಿ ಹಬ್ಬವನ್ನು ಆಚರಿಸಲಾಗಿದೆ. ಇದನ್ನು ಚಪ್ಪಲ್​ ಮಾರ್​ ಹೋಳಿ (Chappal Maar Holi) ಎಂದು ಕರೆಯಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಿಹಾರದ ಪಾಟ್ನಾದ ವಾಟರ್ ಪಾರ್ಕ್‌ನಲ್ಲಿ ಹೋಳಿ ಆಡಲು ಜನರು ಪರಸ್ಪರ ಚಪ್ಪಲಿ ಎಸೆಯಲು ಪ್ರಾರಂಭಿಸಿದಾಗ ಸಂಭ್ರಮಾಚರಣೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಮಾರ್ಚ್​ 17 ರಂದು ನಡೆದ ಛೋಟಿ ಹೋಳಿವೇಳೆ ವಾಟರ್​ ಪಾರ್ಕ್​ನಲ್ಇ ನೂರಾರು ಚಪ್ಪಲಿಗಳು ಗಾಳಿಯಲ್ಲಿ ಹಾರಾಡುತ್ತಿರುವ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೀಡಿಯೊದಲ್ಲಿ ಜನ  ವಾಟರ್ ಪಾರ್ಕ್‌ಗೆ ಭೇಟಿ ನೀಡಿ ವಾಟರ್ ಸ್ಲೈಡ್‌ಗಳ ಬಳಿ ಬಣ್ಣದ ನೀರಿನ ಬೃಹತ್ ಕೊಳದಲ್ಲಿ ಚಪ್ಪಲಿ ಎಸೆಯುತ್ತಾ ಆಡುತ್ತಿರುವುದನ್ನು ಕಾಣಬಹುದು. ಒಬ್ಬರಿಗೊಬ್ಬರು ಬಣ್ಣ ಹಚ್ಚಿದ ನಂತರ ಜನರು ಪರಸ್ಪರ ಚಪ್ಪಲಿ ಎಸೆಯಲು ಆರಂಭಿಸಿದರು. ಚಪ್ಪಲ್ ಮಾರ್ ಹೋಳಿ (ಚಪ್ಪಲಿ ಏಟಿನ ಹೋಳಿ) ಎನ್ನುವ ಆಟವನ್ನು ಆಡುವಾಗ ಜನರು ಒಬ್ಬರನ್ನೊಬ್ಬರು ಗುರಿಯಾಗಿಸಿಕೊಂಡು ಚಪ್ಪಲಿಗಳನ್ನು ಎಸೆಯುವುದನ್ನು ಕಾಣಬಹುದು. ಬಣ್ಣದ ನೀರಿನಲ್ಲಿ ಹಲವು ಚಪ್ಪಲಿಗಳು ತೇಲುತ್ತಿರುವುದನ್ನು ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋ 36 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದರ ವಿಡಿಯೋವನ್ನು ಸುದ್ದಿ ಸಂಸ್ಥೆ ಎಎನ್​ಐ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇದನ್ನೂ ಓದಿ:

Viral Video: ಸಂಬಳ ಕಡಿಮೆ ಎಂದು ವರ್ಕ್​ ಫ್ರಾಮ್ ಹೋಮ್​​ನಲ್ಲಿಯೂ ಆಫೀಸ್​ನಲ್ಲಿ ಬಂದು ಉಳಿದುಕೊಂಡ ವ್ಯಕ್ತಿ

Follow Us
TV9 Web
TV9 Web

TV9 Kannada

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ